ಮೈಸೂರು,ಸೆ.16: ಮೈಸೂರು ಪಾಕು ಈಗ ಭಾರೀ ಸುದ್ದಿಯಲ್ಲಿದೆ. ಮೈಸೂರು ಪಾಕ್ ಕರ್ನಾಟಕದ ಮೂಲದ್ದು, ತಮಿಳುನಾಡಿನದ್ದಲ್ಲ ಎಂಬುದು ಸದ್ಯದ ಚರ್ಚೆಯ ವಿಚಾರ..ಹೌದು, ಇಂತಹ ಚರ್ಚೆ ಶುರುವಾಗೋದಕ್ಕೆ ಕಾರಣವಾಗಿದ್ದು, ವಿಜ್ಞಾನಿ ಹಾಗೂ ಅಂಕಣಕಾರನಾಗಿರುವ ಡಾ. ಆನಂದ್ ರಂಗನಾಥನ್ ಮಾಡಿರುವಂತಹ ಟ್ವೀಟ್.. ಹೌದು..ಅವರು ಫೈನಾನ್ಸ್ ಮಿನಿಸ್ಟರ್ ನಿರ್ಮಲಾ ಸೀತಾರಾಮನ್ ಅವರ ಭೇಟಿಯ ಬಗ್ಗೆ ಹಾಗೂ ಮೈಸೂರ್ ಪಾಕ್ ಪೇಟೆಂಟ್ ಬಗ್ಗೆ ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದರು.. ಅದನ್ನ ಗಮನಿಸಿದ ಕರ್ನಾಟಕ ಮಾಧ್ಯಮ ಹಾಗೂ ರಾಜ್ಯದ ಜನತೆ ಇಂತಹ ವಿಚಾರದಲ್ಲಿ ಭಾವನೆಗಳ ಜೊತೆಗೆ ಆಟವಾಡಬೇಡಿ ಎಂದಿದ್ದಾರೆ.
ಸದ್ಯ ಈ ವಿಚಾರದ ಬಗ್ಗೆ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರ ಪಾಕು ತಮಿಳನಾಡಿಗೆ ಪೇಟೆಂಟ್ ಸುದ್ದಿ ಸುಳ್ಳು. ಕೇಂದ್ರ ಸರ್ಕಾರ ಯಾವುದೇ ರೀತಿ ಸರ್ಟಿ ಫೈ ಮಾಡಿಲ್ಲ ಪೇಟೆಂಟು ಕೊಟಿಲ್ಲ. ಮೈಸೂರು ಪಾಕ್ ನಲ್ಲೆ ಮೈಸೂರು ಇದೆ. ಮೈಸೂರು ತೆಗೆದಿದ್ದರೆ ಕೇವಲ ಪಾಕ್ ಆಗುತ್ತೆ.. ಹಾಗಿದ್ದರೆ ಅದು ಪಾಕಿಸ್ತಾನವಾ..? ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವರ ಬಗ್ಗೆ ದಸರಾ ನಂತರ ಕ್ರಮ ಕೈಗೊಳುತ್ತೇವೆ ಎಂದಿದ್ದಾರೆ.
ನಾನೂ ಆನಂದ್ ರಂಗನಾಥನ್ ರನ್ನು ಫಾಲೋ ಮಾಡ್ತೀನಿ. ಅವ್ರು ಈ ರೀತಿಯ ಕೆಲಸ ಜಾಸ್ತಿ ಮಾಡ್ತಾರೆ.
ಆ ವ್ಯಕ್ತಿಗೆ ಹೆಚ್ಚಿನ ಆದ್ಯತೆ ಕೊಡುವ ಅಗತ್ಯ ಇಲ್ಲ. ಮೈಸೂರು ವಿಳ್ಯಾದೆಲೆ, ಮೈಸೂರು ಮಲ್ಲಿಗೆ, ಮೈಸೂರು ವೀರನಗೆರೆ ಬದನೆಕಾಯಿ ಇದೆಲ್ಲವು ನಮ್ಮಲ್ಲಿ ಎಷ್ಟು ಫೇಮಸ್ ಅಂತ ಗೊತ್ತಿದೆ. ಆದ್ರೆ ಅದನ್ನ ತಮಿಳುನಾಡಿನಲ್ಲಿ ಹೋಗಿ ಮೈಸೂರು ಪಾಕ್ ಅಂತಾನೇ ಕೇಳಬೇಕು. ಬೇರೆ ಯಾವ ಹೆಸರಿನಲ್ಲು ಕೇಳಲು ಆಗೋದಿಲ್ಲ. ಮದ್ದೂರು ವಡೆ ದೇಶ- ವಿದೇಶದಲ್ಲು ಫೇಮಸ್. ಹಾಗಂತ ಅದನ್ನ ಬೇರೆಡೆ ಮಾಡಿದ್ರೆ ಆ ಊರಿನಿಂದ ಫೇಮಸ್ ಆಗೋದಿಲ್ಲ. ನಿರ್ಮಲ ಸೀತಾರಾಮನ್ ಅವ್ರ ಬಳಿ ಯಾವ ಉದ್ದೇಶದಿಂದ ಆತ ಹೋಗಿದ್ದಾನೆ ಗೊತ್ತಿಲ್ಲ. ಅವರು ಕರ್ನಾಟಕದವರು. ಅವ್ರಿಗೂ ಗೊತ್ತಿದ್ದೆ ಮೈಸೂರು ಪಾಕ್ ಯಾರದು ಎಂದು. ಹಾಗಾಗಿ ಇದಕ್ಕೆ ಹಾಗು ಆ ವ್ಯಕ್ತಿಗೆ ಹೆಚ್ಚಿನ ಆದ್ಯತೆ ಕೊಡುವ ಅಗತ್ಯ ಇಲ್ಲ ಎಂದು ಮೈಸೂರಿನಲ್ಲಿ ಮೈಸೂರು ಪಾಕ್ ಬಗ್ಗೆ ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ.