• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಮೈಸೂರು ವಿವಿ ಘಟಿಕೋತ್ಸವ: ಭಾಷಣ ಮಾಡಿದ ಪ್ರಧಾನಿ ಮೋದಿ

Sharadhi by Sharadhi
in ಪ್ರಮುಖ ಸುದ್ದಿ, ರಾಜಕೀಯ, ರಾಜ್ಯ
ಮೈಸೂರು ವಿವಿ ಘಟಿಕೋತ್ಸವ: ಭಾಷಣ ಮಾಡಿದ ಪ್ರಧಾನಿ ಮೋದಿ
0
SHARES
0
VIEWS
Share on FacebookShare on Twitter

ಮೈಸೂರು, ಅ. 19: ಇಂದು ಮೈಸೂರು ವಿವಿಗೆ 100ನೇ ವಾರ್ಷಿಕ ಘಟಿಕೋತ್ಸವದ ಸಂಭ್ರಮ. ಭೀತಿ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಘಟಿಕೋತ್ಸವದ ಭಾಷಣವನ್ನು ವರ್ಚುವಲ್ ವೇದಿಕೆ ಮೂಲಕ ಮಾಡಿರುವುದು ಇನ್ನೊಂದು ವಿಶೇಷ.

ನಾಡಹಬ್ಬ ಮೈಸೂರು ದಸರಾ ಸಂಭ್ರಮಕ್ಕೆ ಶುಭಕೋರಿದ ಪ್ರಧಾನಿ ನರೇಂದ್ರ ಮೋದಿ, ಕೋವಿಡ್ 19ಗೆ ಸಂಬಂಧಿಸಿದ ನಿರ್ಬಂಧಗಳಿರಬಹುದು, ಆದರೂ ಸಂಭ್ರಮದ ಉತ್ಸಾಹಕ್ಕೇನೂ ಕೊರತೆಯಿಲ್ಲ. ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ತೊಂದರೆಯಾಗಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ.  ಸಂತ್ರಸ್ತರ ಬಗ್ಗೆ ನನಗೆ ಸಹಾನುಭೂತಿ ಇದೆ. ಕೇಂದ್ರ ಹಾಗೂ ರಾಜ್ಯಗಳು ಪರಿಹಾರ ಕಾರ್ಯದ ಪ್ರಯತ್ನದಲ್ಲಿವೆ. ಮುಖತಃ ಭೇಟಿಯಾಗುವ ಆಸೆ ಇತ್ತು, ಕೊರೊನಾ ಕಾರಣ ಅದು ಸಾಧ್ಯವಾಗಲಿಲ್ಲ. ಆದರೆ  ವರ್ಚುವಲ್ ರೂಪದಲ್ಲಿ ಎಲ್ಲರೂ ಜತೆಯಾಗುತ್ತಿರುವುದು ನನಗೆ ಸಂತೋಷವಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಮತ್ತು ಸಂಕಲ್ಪಗಳನ್ನು ಸಾಕಾರಗೊಳಿಸಿರುವ ವಿಶ್ವವಿದ್ಯಾಲಯ ಎಂಬ ಹೆಮ್ಮಗೆ ಪಾತ್ರವಾಗುತ್ತದೆ ಮೈಸೂರು ವಿಶ್ವವಿದ್ಯಾಲಯ. 102 ವರ್ಷಗಳ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ವಿವಿಯ ಮೊದಲ ಘಟಿಕೋತ್ಸವ ಭಾಷಣ ಮಾಡಿದ್ದರು. ಅಂದಿನಿಂದ ಇಂದಿನ ತನಕ ರಾಷ್ಟ್ರನಿರ್ಮಾಣಕ್ಕೆ ಕೊಡುಗೆ ನೀಡಿದ ಅನೇಕ ರತ್ನಗಳು ಈ ವಿವಿಯಿಂದ ಹೊರಬಂದಿದ್ದಾರೆ ಎಂದರು.

ಈ ವಿಶ್ವವಿದ್ಯಾಲಯದಲ್ಲಿ ಭಾರತ ರತ್ನ ಡಾ.ಸರ್ವಂಪಲ್ಲಿ ರಾಧಾಕೃಷ್ಣನ್ ಅವರು ಅನೇಕ ವಿದ್ಯಾರ್ಥಿಗಳಿಗೆ ಹೊಸ ಪ್ರೇರಣೆಯನ್ನು ನೀಡಿದ್ದಾರೆ. ಅದೇ ರೀತಿ ಇಂದು ಇಲ್ಲಿ ನೆರೆದಿರುವ ಎಲ್ಲರ ಬಗ್ಗೆಯೂ ನಮಗೆ ವಿಶ್ವಾಸವಿದೆ. ನಿರೀಕ್ಷೆಯೂ ಹೆಚ್ಚಾಗಿದೆ. ಇಂದು ನಿಮ್ಮ ಪದವಿ ಪ್ರಮಾಣದೊಂದಿಗೆ ವಿಶ್ವವಿದ್ಯಾಲಯ, ಇಲ್ಲಿನ ಪ್ರಾಧ್ಯಾಪಕರು ನಿಮ್ಮ ಮೇಲೆ ಸಮಾಜದ ಹೊಣೆಗಾರಿಕೆಯನ್ನೂ ನಿಮ್ಮ ಮೇಲೆ ಹೊರಿಸಿದ್ದಾರೆ.

ಭಾರತವನ್ನು ಉನ್ನತ ಶಿಕ್ಷಣದ ಗ್ಲೋಬಲ್ ಹಬ್ ಮಾಡುವುದಕ್ಕಾಗಿ, ನಮ್ಮ ಯುವಜನರನ್ನು ಸ್ಪರ್ಧಾತ್ಮಕರನ್ನಾಗಿಸುವುದಕ್ಕೆ ಗುಣಾತ್ಮಕ, ಸಂಖ್ಯಾತ್ಮಕ ವೃದ್ಧಿಗೆ ಪ್ರಯತ್ನ ನಡೆದಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ 2014ರ ತನಕ 16 ಐಐಟಿಗಳಷ್ಟೇ ಇದ್ದವು. ಈಗ ಕಳೆದ ಆರು ವರ್ಷಗಳ ಅವಧಿಯಲ್ಲಿ ಅವಶ್ಯವಾಗಿ ಪ್ರತಿವರ್ಷ ಒಂದು ಹೊಸ ಐಐಟಿ ಸ್ಥಾಪನೆಯಾಗಿದೆ. ಇದರಲ್ಲಿ ಕರ್ನಾಟಕದ ಧಾರವಾಡದಲ್ಲೂ ಒಂದು ಸ್ಥಾಪನೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯಪಾಲ ವಾಜುಬಾಯಿ ವಾಲಾ ಮತ್ತು ಉಪಮುಖ್ಯಮಂತ್ರಿ ಸಿ ಎನ್ ಅಶ್ವತ್ ನಾರಾಯಣ್ ಉಪಸ್ಥಿತರಿದ್ದರು.

Related News

ಮಂಡ್ಯದ ರ್ಯಾಲಿ ವೇಳೆ ಜನರ ಮೇಲೆ ನೋಟು ಎಸೆದ ಡಿ.ಕೆ ಶಿವಕುಮಾರ್ : ಭಾರೀ ವಿರೋಧ
ರಾಜಕೀಯ

ಮಂಡ್ಯದ ರ್ಯಾಲಿ ವೇಳೆ ಜನರ ಮೇಲೆ ನೋಟು ಎಸೆದ ಡಿ.ಕೆ ಶಿವಕುಮಾರ್ : ಭಾರೀ ವಿರೋಧ

March 29, 2023
ಮಂಡ್ಯದಲ್ಲಿ ಸುಮಲತಾ ಫುಲ್‌ ಆಕ್ಟೀವ್‌; ಮದ್ದೂರು ಗೆಲ್ಲಲು ರಣತಂತ್ರ
ರಾಜಕೀಯ

ಮಂಡ್ಯದಲ್ಲಿ ಸುಮಲತಾ ಫುಲ್‌ ಆಕ್ಟೀವ್‌; ಮದ್ದೂರು ಗೆಲ್ಲಲು ರಣತಂತ್ರ

March 29, 2023
10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!
ಪ್ರಮುಖ ಸುದ್ದಿ

10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!

March 28, 2023
ಕರ್ನಾಟಕ ಪೊಲೀಸ್ ಪಡೆಯ ವಿವಿಧ 3 ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ
ಮಾಹಿತಿ

ಕರ್ನಾಟಕ ಪೊಲೀಸ್ ಪಡೆಯ ವಿವಿಧ 3 ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ

March 28, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.