ಹ್ಯಾಮಿಲ್ಟನ್, ಡಿ. 6: ಬ್ಲ್ಯಾಕ್ವುಡ್(104) ಹಾಗೂ ಅಲ್ಜಾರಿ ಜೋಸೆಫ್(86) ಅವರ ಹೋರಾಟದ ನಡುವೆಯೂ ನೈಲ್ ವ್ಯಾಗ್ನರ್(66ಕ್ಕೆ 4) ಮಾರಕ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್, ಮೊದಲ ಟೆಸ್ಟ್ನಲ್ಲಿ ಇನ್ನಿಂಗ್ಸ್ ಹಾಗೂ 134 ರನ್ಗಳ ಹೀನಾಯ ಸೋಲು ಕಂಡಿದೆ.
ಸೆಡ್ಡನ್ ಪಾರ್ಕ್ನಲ್ಲಿ ನಡೆದ ಪಂದ್ಯದಲ್ಲಿ 196ಕ್ಕೆ 6 ರನ್ಗಳಿಂದ 4ನೇ ದಿನದಾಟ ಆರಂಭಿಸಿದ ವೆಸ್ಟ್ ಇಂಡೀಸ್, ನಿನ್ನೆಯ ಮೊತ್ತಕ್ಕೆ 51 ರನ್ಗಳನ್ನು ಸೇರಿಸಲಷ್ಟೇ ಶಕ್ತವಾಯಿತು. ಆ ಮೂಲಕ 247 ರನ್ಗಳಿಗೆ ಆಲೌಟ್ ಆಗುವ ಮೂಲಕ ವೆಸ್ಟ್ ಇಂಡೀಸ್ ಸೋಲಿನ ಕಹಿ ಅನುಭವಿಸಿತು. ಇದರೊಂದಿಗೆ 2 ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ 1-0 ಮುನ್ನಡೆ ಸಾಧಿಸಿತು.
ವೆಸ್ಟ್ ಇಂಡೀಸ್ ಪರ ಉತ್ತಮ ಪ್ರದರ್ಶನ ನೀಡಿದ ಬ್ಲ್ಯಾಕ್ವುಡ್(104) ಆಕರ್ಷಕ ಶತಕ ಸಿಡಿಸಿ ಮಿಂಚಿದರೆ. ಇವರಿಗೆ ಸಾಥ್ ನೀಡಿದ ಅಲ್ಜಾರಿ ಜೋಸೆಫ್(86) ರನ್ಗಳಿಸಿದರು. ಈ ಇಬ್ಬರು 7ನೇ ವಿಕೆಟ್ ಜೊತೆಯಾಟದಲ್ಲಿ 155 ರನ್ಗಳಿಸುವ ಮೂಲಕ ವೆಸ್ಟ್ ಇಂಡೀಸ್, ಮಾನ ಕಾಪಾಡಿದರು. ಕಿವೀಸ್ ಪರ ಮಾರಕ ದಾಳಿ ನಡೆಸಿದ ನೈಲ್ ವ್ಯಾಗ್ನರ್ 66 ರನ್ಗಳಿಗೆ 4 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿಗೆ ಕಾರಣರಾದರು.