ಪ್ರತಿಷ್ಠಿತ ಜೆಎನ್ಯು ಕ್ಯಾಂಪಸ್ನಲ್ಲಿ ನಡೆದ ಭೀಕರ ದಾಳಿ ಬಳಿಕ ಇದೀಗ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಕೇಂದ್ರಸರ್ಕಾರದ ಅಂಕಿ ಅಂಶಗಳ ಸ್ಥಾಯಿ ಸಮಿತಿಗೆ ಜೆಎನ್ಯು ಫ್ರೊ. ಸಿ.ಪಿ ಚಂದ್ರಶೇಖರ್ ರಾಜೀನಾಮೆ ಸಲ್ಲಿಸಿದ್ದಾರೆ. ಕಳೆದ ತಿಂಗಳಷ್ಟೇ ಅಂಕಿ ಅಂಶ ಹಾಗೂ ಕಾರ್ಯಕ್ರಮ ಸಚಿವಾಲಯ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದ್ದು, ಭಾನುವಾರ ಭುಗಿಲೆದ್ದ ಆಕ್ರೋಶಕ್ಕೆ ಇದೀಗ ರಾಜೀನಾಮೆ ನೀಡೋದರ ಮೂಲಕ ಸಿಪಿ ಚಂದ್ರಶೇಖರ್ ಸರ್ಕಾರಕ್ಕೆ ಉತ್ತರ ನೀಡಿದ್ದಾರೆ .ಈ ಸಂದರ್ಭದಲ್ಲೇ ಪ್ರೋ.ಚಂದ್ರಶೇಖರ್ ಪ್ರತಿಕ್ರಿಯೇ ನೀಡಿದ್ದು, ‘ ಜೆಎನ್ಯು ಪರಿಸ್ಥಿತಿ ತಿಳಿಸಲು ನನಗೆ ಬೇಸರವಾಗುತ್ತಿದೆ. ಇಂಥಹ ಘಟನೆಗಳನ್ನು ನೋಡುತಿದ್ದರೆ ವ್ಯವಸ್ಥೆ ಮೇಲೆ ಅಪನಂಬಿಕೆ ಮೂಡುತ್ತಿದೆ. ನಾವು ಜಗತ್ತಿನಲ್ಲಿ ಇದ್ದೇವಾ ಅನ್ನೋ ಅನುಮಾನವಾಗುತ್ತಿದೆ’ ಎಂದಿದ್ದಾರೆ.
ಕಳೆದ ಭಾನುವಾರ ಜೆಎನ್ಯು ಕ್ಯಾಂಪಸ್ನಲ್ಲಿ ಸುಮಾರು 50 ಕ್ಕೂ ಅಧಿಕ ಮಾಸ್ಕ್ ಧಾರಿಗಳು ಏಕಾಏಕಿ ದಾಳಿ ನಡೆಸಿದ್ದು ; ಜೆಎನ್ಯು ಸಂಘಟನೆ ವಿದ್ಯಾರ್ಥಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.. ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ತನಿಖೆ ನಡೆಯುತ್ತಿದ್ದು , ಇತ್ತ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.