ನಟ ಅಂಬರೀಶ್ ಕುಟಂಬಕ್ಕೂ ಯಶ್ ಕುಟುಂಬಕ್ಕೂ ಇನ್ನಿಲ್ಲದ ನಂಟು..ಅಂಬಿ ಎಲ್ಲರನ್ನು ಅಗಲಿದ ವೇಳೆಯೂ, ಯಶ್ ಖುದ್ದು ಎಲ್ಲ ಕಾರ್ಯಗಳಿಗೂ ಸುಮಲತಾ ಹಾಗು ಅಂಬಿ ಪುತ್ರನ ಹೆಗಲಾಗಿ ನಿಂತವರು..ಚುನಾವಣೆಗೆ ನಿಂತ ಸುಮಲತಾರ ಬೆಂಬಲಕ್ಕೆ ನಿಂತು ಪ್ರಚಾರ ಮಾಡಿ, ಗೆಲುವಿಗೂ ಕಾರಣರಾದವರು..ಹೀಗೆ ಈ ಎರಡೂ ಕುಟುಂಬಗಳ ಪ್ರೀತಿ ಬಾಂಧವ್ಯ ಮುಂದುವರಿದಿದೆ..
ಮಂಡ್ಯ ಚುನಾವಣೆಯಲ್ಲಿ ಗೆದ್ದ ಮೇಲಂತೂ ಫುಲ್ ಬ್ಯುಸಿಯಾಗಿರುವ ಸುಮಲತಾ, ಕೆಜಿಎಫ್ ಚಿತ್ರದ ಸಕ್ಸಸ್ ಬಳಿಕ ಕೆಜಿಎಫ್-2 ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ನಟ ಯಶ್..ಹೀಗೆ ಇಬ್ಬರೂ ತಮ್ ತಮ್ಮ ಲೈಫ್ ನಲ್ಲಿ ಬ್ಯುಸಿಯಾಗಿದ್ದರೂ ಬಿಡುವು ಮಾಡಿಕೊಂಡು ನಟ ಯಶ್, ಸಂಸದೆ ಸುಮಲತಾರನ್ನು ಭೇಟಿ ಮಾಡಿದ್ದಾರೆ..ಅಂಬಿ ಮನೆಗೆ ಪತ್ನಿ ರಾಧಿಕಾ ಪಂಡಿತ್, ಪುತ್ರಿ ಐರಾ ಜೊತೆಗೆ ಸರ್ಪ್ರೈಸ್ ವಿಸಿಟ್ ಕೊಟ್ಟಿದ್ದಾರೆ. ಇದು ಸುಮಲತಾರಲ್ಲೂ ಖುಷಿ ತಂದಿದ್ದು, ಖುದ್ದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.