ಭಾರತೀಯ ನೌಕಾಪಡೆಯ ಇತಿಹಾಸದಲ್ಲೇ ಇದೇ ಮೊದಲು ಯುದ್ಧನೌಕೆಗೆ ಇಬ್ಬರು ಮಹಿಳಾ ಪೈಲಟ್ ಗಳನ್ನು ನೇಮಕ ಮಾಡಲಾಗಿದೆ. ಕೊಚ್ಚಿಯ ನೌಕಾ ನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಸಬ್ ಲೆಫ್ಟಿನೆಂಟ್ ಕುಮುದಿನಿ ತ್ಯಾಗಿ ಹಾಗೂ ಸಬ್ ಲೆಫ್ಟಿನೆಂಟ್ ರಿತಿ ಸಿಂಗ್ ಐಎನ್ಎಸ್ ಗರುಡ ಪಡೆಯನ್ನು ಅಧಿಕೃತವಾಗಿ ಸೇರ್ಪಡೆಗೊಂಡರು.
ಇನ್ನು ಎಂಎಚ್ -60 ಆರ್ ಹೆಲಿಕಾಪ್ಟರ್ಗಳನ್ನು ಶತ್ರು ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಪತ್ತೆಹಚ್ಚಲು ವಿನ್ಯಾಸಗೊಳಿಸಲಾಗಿದ್ದು, ಈ ಹೆಲಿಕಾಪ್ಟರ್ಗಳಲ್ಲಿ ಇಬ್ಬರೂ ಮಹಿಳಾ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ.
ಸೆ. 20ರಂದು ಭಾರತೀಯ ವಾಯುಸೇನೆ ತನ್ನ ರಫೇಲ್ ಯುದ್ಧ ವಿಮಾನದಲ್ಲಿ ಕಾರ್ಯ ನಿರ್ವಹಿಸಲು ಮಹಿಳಾ ಫೈಟರ್ ಪೈಲಟ್ವೋರ್ವರನ್ನು ನೇಮಕ ಮಾಡಿತ್ತು, ಇದರ ಬೆನ್ನಲ್ಲೇ ನೌಕಾಪಡೆ ಸಹ ತನ್ನ ಯುದ್ಧ ನೌಕೆಯಲ್ಲಿ ಕರ್ತವ್ಯ ನಿರ್ವಹಿಸಲು ಇಬ್ಬರು ಮಹಿಳಾ ಅಧಿಕಾರಿಗಳನ್ನು ನೇಮಿಸಿದೆ ಎಂದು ತಿಳಿದು ಬಂದಿದೆ.