ಕೋವಿಡ್-19 ವೈರಸ್ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಈಗ ಯಾರು ನಗದು ವಹಿವಾಟನ್ನು ಮಾಡಲು ಮುಂದಾಗುತ್ತಿಲ್ಲ. ಎಲ್ಲರು ಆನ್‍ಲೈನ್ ವಹಿವಾಟಿಗೆ ಹೆಚ್ಚು ಮಹತ್ವ ನೀಡಿದ್ದಾರೆ. ಯುಪಿಐ ಪೇಮೆಂಟ್( ಯೂನಿಫೈಡ್ ಪೇಮೆಂಟ್ ಇಂಟರ್‍ಫೇಸ್) ಮೂಲಕ ಪಾವತಿ ವಹಿವಾಟು ಜೂನ್ ತಿಂಗಳಲ್ಲಿ ಗರಿಷ್ಠ ಮಟ್ಟದಲ್ಲೆ ದಾಖಲೆ ಮಾಡಿದೆ. ಯುಪಿಐನ ಸಾರ್ವಕಾಲಿಕ ದಾಖಲೆಯ 13.4 ಕೋಟಿ ವಹಿವಾಟು ದಾಖಲಾಗಿದೆ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ(ಎನ್‍ಪಿಸಿಐ) ಡೇಟಾ ಪ್ರಕಾರ ತಿಂಗಳು ತಿಂಗಳಿನ ಆಧಾರದಲ್ಲಿ ಮೇ ತಿಂಗಳಿನಲ್ಲಿದ್ದ 12.3 ಕೋಟಿ ವಹಿವಾಟು ಜೂನ್ ತಿಂಗಳಿನಲ್ಲಿ ಶೇ 8.94 ಹೆಚ್ಚಾಗಿದೆ. ಎನ್‍ಸಿಪಿಐ 2008ರಲ್ಲಿ ಶುರುವಾಗಿತ್ತು. ಇದು ಎಲ್ಲ ರೀತಿಯ ಪಾವತಿ ವಹಿವಾಟಿಗೆ ಉಸ್ತುವಾರಿ ಸಂಸ್ಥೆ ಇದಾಗಿದೆ. ರಿಟೇಲ್ ಪೇಮೆಂಟ್ ಉತ್ಪನ್ನ ರುಪೇ ಕಾರ್ಡ್, ಇಮ್ಮೀಡಿಯೆಟ್ ಪೇಮೆಂಟ್ ಸರ್ವೀಸ್(ಐಎಂಪಿಎಸ್), ಯುಪಿಯ, ಭಾರತ ಇಂಟರ್‍ಫೇಸ್ ಫಾರ್ ಮನಿ(ಭೀಮ್), ಭೀಮ್ ಆಧಾರ್, ನ್ಯಾಷನಲ್ ಇಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್(ಎನ್‍ಇಟಿಸಿ ಫಾಸ್‍ಟ್ಯಾಗ್) ಭಾರತ್ ಬಿಲ್ ಪೇಗಳನ್ನು ಹೊಂದಿದೆ.