ಬ್ರಿಟನ್– : ಯುರೋಪಿನ ಅನೇಕ ರಾಷ್ಟ್ರಗಳಲ್ಲಿ ಕೊರೋನಾ ಆಕ್ರಮಣದ 2ನೇ ಅಲೆ ಪ್ರಾರಂಭವಾಗಿದ್ದು, ಇದು ಭಾರೀ ಆತಂಕಕ್ಕೆ ಕಾರಣವಾಗಿದೆ. ಅನೇಕ ದೇಶಗಳ ಜನರು ಮತ್ತು ಸರ್ಕಾರ ಮತ್ತೆ ತೀವ್ರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.
ಕಿಲ್ಲರ್ ಕೊರೋನಾದಿಂದ ಈಗಷ್ಟೇ ಚೇತರಿಸಿಕೊಂಡಿರುವ ಯುರೋಪ್ ನಲ್ಲಿ ಮತ್ತೆ ಮಹಾ ಮಾರಿ ಉಲ್ಬಣಗೊಂಡಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಲ್ಬೆನಿಯಾ, ಬಲ್ಗೇರಿಯಾ, ಚೆಕ್ ರಿಪಬ್ಲಿಕ್, ಮೊಂಟೆನಿಗ್ರೋ, ನಾರ್ತ್ ಮೆಸೆಡೊನಿಯಾ ಮುಂತಾದ ದೇಶಗಳಲ್ಲಿ ಕೊರೋನಾ 2ನೇ ಹಂತ ಆರಂಭವಾಗಿದ್ದು, ಅನೇಕ ಸಾವು ನೋವುಗಳು ಆತಂಕಕಾರಿ ಮಟ್ಟದಲ್ಲಿ ತೀವ್ರವಾಗಿ ವ್ಯಾಪಿಸುತ್ತಿದೆ.
ಬ್ರಿಟನ್, ಪೋಲೆಂಡ್, ನೆದರ್ಲ್ಯಾಂಡ್,ಸ್ಪೇನ್, ಫ್ರಾನ್ಸ್ ಮೊದಲಾದ ದೇಶಗಳಲ್ಲೂ 2ನೇ ಅಲೆಯ ಸಂಕಷ್ಟ ಆರಂಭವಾಗಿದ್ದು ಬಲಿಷ್ಟ ರಾಷ್ಟ್ರಗಳು ಮತ್ತೆ ಚಿಂತಾಜನಕವಾಗಿವೆ. ಐರೋಪ್ಯ ಸಮುದಾಯದ ಅನೇಕ ದೇಶಗಳಲ್ಲಿ ಕಠಿಣ ನಿರ್ಬಂಧ ಗಳು ಹಾಗೂ ಲಾಕ್ ಡೌನ್ ಗಳನ್ನು ಜಾರಿಗೊಳಿಸಲಾಗಿದೆ. ಕೋವಿಡ್-19 ನಿಗ್ರಹ ಲಸಿಕೆ ಹಾಗೂ ಔಷಧಿಗಳನ್ನು ತ್ವರಿತಗೊಳಿಸುವ ಪ್ರಕ್ರಿಯೆಯೂ ಮುಂದುವರಿದಿದೆ.