ಬಿಗ್ ಬಾಸ್ ಜೋಡಿ ಎಂಬ ಖ್ಯಾತಿ ಗಳಿಸಿದ್ದವರು ರಾಪರ್ ಚಂದನ್ ಶೆಟ್ಟಿ ಹಾಗೂ ಕರ್ನಾಟಕದ ಗೊಂಬೆ ನಿವೇದಿತಾ ಗೌಡ..ಬಿಗ್ ಬಾಸ್ ಮನೆಯಲ್ಲಿರುವಾಗಲೇ ಶುರುವಾಗಿತ್ತು ಅವರಿಬ್ಬರ ನಡುವೆ ಲವ್ವಿ ಡವ್ವಿ. ..ಈ ಬಗ್ಗೆ ಎಲ್ಲರ ಪ್ರಶ್ನೆಗೆ ಉತ್ರ ನೀಡಿದ ಈ ಜೋಡಿ ನಾವಿಬ್ಬರೂ ಬೆಸ್ಟ್ ಅಷ್ಟೇ ಅಂತಿದ್ರು..
ಆದರೆ ಸದ್ಯ ಈ ಬೆಸ್ಟ್ ಫ್ರೆಂಡ್ಸ್ ಯುವ ದಸರಾದಲ್ಲಿ ಒಂದಾಗಿದ್ದಾರೆ..ಯುವ ದಸರಾದಲ್ಲಿ ಕಾರ್ಯಕ್ರಮ ನೀಡೋದಕ್ಕಾಗಿ ಆಗಮಿಸಿದ್ದ ಚಂದನ್ ಶೆಟ್ಟಿ ವೇದಿಕೆಯಲ್ಲೇ ನಿ, ವಿಲ್ ಯು ಮ್ಯಾರಿ ಮಿ ಎಂದು ಮಂಡಿಯೂರಿ ನಿವೇದಿತಾಗೆ ಪ್ರಪೋಸ್ ಮಾಡಿದ್ದಾರೆ. ಅಲ್ಲದೆ ಉಂಗುರವನ್ನೂ ತೊಡಿಸಿ ಶೀಘ್ರದಲ್ಲೇ ವಿವಾಃಇತರಾಗುವುದಾಗಿ ಹೇಳಿಕೊಂಡಿದ್ದಾರೆ. ಅಂತೂ ಇಂತೂ ಬಿಗ್ ಬಾಸ್ ಮನೆಯಲ್ಲಿದ್ದಾಗ, ಅಲ್ಲಿಂದ ಹೊರ ಬಂದ ಮೇಲೂ ಸುದ್ದಿಯಾಗಿದ್ದ ಈ ಪ್ರಣಯ ಪಕ್ಷಿಗಳು ಈ ಮೂಲಕ ಹಸೆಮಣೇ ಏರಲು ಸಿದ್ದವಾಗಿದೆ..
ಆದರೆ ಯುವ ದಸರಾ ಇಂತಹ ಒಂದು ಘಳಿಗೆಗೆ ಸಾಕ್ಷಿಯಾಗಿರುವುದಕ್ಕೆ ಹಲವೆಡೆಯಿಂದ ಆಕ್ಷೇಪಗಳು ಕೇಳಿಬಂದಿವೆ..ರಾಜಕೀಯ ವಲಯದಲ್ಲೂ ಈ ಬಗ್ಗೆ ಚರ್ಚೆಯಾಘಿದ್ದು, ವಿ.ಸೋಮಣ್ಣ, ಚಾಮುಂಡಿ ತಾಯಿ ಸುಮ್ಮನಿರೋದಿಲ್ಲ ಎಂದು ಹಿಡಿ ಶಾಪಹಾಕಿದ್ದಾರೆ.ಮತ್ತೊಂದೆಡೆ ಇದೆಲ್ಲವೂ ಪ್ರೀ ಪ್ಲಾನ್ಡ್ ಆಗಿರುವಾಗ ಈ ಬಗ್ಗೆ ಮಾಹಿತಿ ಇರುವ ಉಸ್ತುವಾರಿ ಸಚಿವರು ಈಗ ತಮಗೇನೂ ಗೊತ್ತೇ ಇಲ್ಲವೆಂದು ನಡೆದುಕೊಳ್ತಿರುವುದ್ಯಾಕೆಂಬ ಚರ್ಚೆಗಳೂ ಭಾರೀ ಜೋರಾಗಿಯೇ ನಡೆಯುತ್ತಿದೆ..