ರಕ್ಷಾ ಬಂಧನ ದಿನದಂದು ತನ್ನಿಂದ ದೂರವಾಗಿರುವ ಸಹೋದರ ಸುಶಾಂತ್ ಸಿಂಗ್ ರಜಪೂತ್ ಅವರನ್ನು ನೆನೆದು ಅವರ ಹಿರಿಯ ಸಹೋದರಿ ರಾಣಿ ಅವರು ಭಾವನಾತ್ಮಕ ಪದ್ಯವೊಂದನ್ನು ರಚಿಸಿದ್ದಾರೆ.
ಹೂದೋಟವು ನನ್ನ ಕಂದ, ಇಂದು ನನ್ನ ದಿನ. ಇಂದು ನಿನ್ನ ದಿನ. ಅಲ್ಲಲ್ಲ ಇಂದು ಇಬ್ಬರ ದಿನವೂ ಹೌದು…
ಹೀಗೆ ರಾಣಿ ಅವರು ಬರೆದಿರುವ ಪದ್ಯ ಶುರುವಾಗುತ್ತದೆ. ಇಷ್ಟು ಚಿಕ್ಕ ವಯಸ್ಸಿಗೆ ನಮ್ಮನ್ನು ಅಗಲಿ ಎಲ್ಲಿ ಹೋಗಿಬಿಟ್ಟೆ ಎಂದು ಅವರು ತಮ್ಮ ಪದ್ಯದಲ್ಲಿ ನೋವಿನ ನುಡಿ ವ್ಯಕ್ತಪಡಿಸಿದ್ದಾರೆ.
ಈಚೆಗೆ ಅವರ ಮತ್ತೊಬ್ಬ ಸಹೋದರಿ ಶ್ವೇತಾ, ಸುಶಾಂತ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕು ಎಂದು ಸಾಮಾಜಿಕ ಜಾಲತಾಣದ ಮೂಲಕ ಕೋರಿದ್ದರು.