ಕರೋನಾ ವೈರಸ್ ಸಾಂಕ್ರಾಮಿಕ ರೋಗದಿಂದ 10.000 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ರಷ್ಯಾ ಇಂದು (ಶನಿವಾರ) ಹೇಳಿದೆ.
ಶನಿವಾರ 6,632 ಹೊಸ ಕೋವಿಡ್-19 ಸೋಂಕು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ ಎಂದು ವರದಿಯಾಗಿದೆ. ದೇಶಾದ್ಯಂತ ಸೋಂಕಿತರ ಪ್ರಮಾಣ 6,74,515 ಕ್ಕೆ ಏರಿಕೆಯಾಗಿದೆ. ಇನ್ನು 24 ಗಂಟೆಗಳಲ್ಲಿ 168 ಜನರು ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ ಒಟ್ಟು ಸಾವಿನ ಸಂಖ್ಯೆ 10,027 ಕ್ಕೆ ಏರಿಕೆಯಾಗಿದೆ. ಹೆಚ್ಚು ಕರೋನಾ ವೈರಸ್ ಪ್ರಕರಣಗಳನ್ನು ಹೊಂದಿರುವ ರಷ್ಯಾ ಮೂರನೇ ಸ್ಥಾನದಲ್ಲಿದೆ. ಇನ್ನು ಸರ್ಕಾರಿ ವೆಬ್‍ಸೈಟ್‍ನಲ್ಲಿ ಸಾವಿನ ಅಂಕಿ ಅಂಶವು ಮರಣ ಪ್ರಮಾಣಪತ್ರದಲ್ಲಿ ಸಾವಿಗೆ ಮುಖ್ಯ ಕಾರಣ ವೈರಸ್‍ಅನ್ನು ವರ್ಗೀಕರಿಸಿ ಪ್ರಕರಣಗಳನ್ನು ಒಳಗೊಂಡಿದೆ ಎಂದು ರಷ್ಯಾ ತಿಳಿಸಿದೆ.