Visit Channel

ರಸ್ತೆಯಲ್ಲಿ ಮಾರ್ಷಲ್ ಆರ್ಟ್ ಪ್ರದರ್ಶಿಸುತ್ತಿದ್ದ ಅಜ್ಜಿಗೆ ಕೊಟ್ಟ ಮಾತು ಉಳಿಸಿಕೊಂಡ ಸೋನು ಸೂದ್‍

ಸೊನು

ಹೊಟ್ಟೆಪಾಡಿಗಾಗಿ ರಸ್ತೆಯಲ್ಲಿ ಮಾರ್ಷಲ್ ಆರ್ಟ್‍ ಕಲೆಯನ್ನು ಪ್ರದರ್ಶಿಸಿ ಹಣ ಸಂಪಾದನೆ ಮಾಡಲು ಮುಂದಾಗಿದ್ದ ಅಜ್ಜಿಗೆ ಬಾಲಿವುಡ್‍ ನಟ ಸೋನು ಸೂದ್‍ ತಾವು ಕೊಟ್ಟಿದ್ದ ಭರವಸೆಯನ್ನು ಈಡೇರಿಸಿದ್ದಾರೆ.

ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಶಾಂತಾ ಪವಾರ್‍ ಎಂಬ ಅಜ್ಜಿ ರಸ್ತೆಯಲ್ಲಿ ನಿಂತು ಮಾರ್ಷಲ್ ಆರ್ಟ್‍ ಕಲೆಯನ್ನು ಪ್ರದರ್ಶಿಸಿದ್ದರು. ಅಜ್ಜಿಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‍ ಆಗಿತ್ತು. ಈ ನಡುವೆ ವಿಡಿಯೋವನ್ನು ನೋಡಿದ್ದ ನಟ ಸೋನು ಸೂದ್‍, ಅಜ್ಜಿಗೆ ನೆರವು ನೀಡುವ ಭರವಸೆ ನೀಡಿದ್ದರು. ಅದರಂತೆ ತಾವು ನೀಡಿದ್ದ ಭರವಸೆಯನ್ನು ನಟ ಸೋನು ಸೂದ್‍ ಈಡೇರಿಸಿದ್ದಾರೆ.

ಅಜ್ಜಿ ತಾನು ಕಲಿತಿದ್ದ ಜೀವರಕ್ಷಕ ಕಲೆಯನ್ನು ಇತರರಿಗೆ ಹೇಳಿ ಕೊಡುವ ಉದ್ದೇಶದಿಂದ ಶಾಲೆಯೊಂದನ್ನು ತೆರೆಯುವ ಕನಸು ಹೊತ್ತಿದ್ದರು. ಅದರಂತೆ ಅಜ್ಜಿಯ ಈ ಕನಸನ್ನು ನನಸು ಮಾಡಿರುವ ಸೋನು ಸೂದ್, ಅಜ್ಜಿಗೆ ಮಾರ್ಷಲ್ ಆರ್ಟ್ ಶಾಲೆ ವ್ಯವಸ್ಥೆ ಮಾಡಿದ್ದಾರೆ. ಹೀಗಾಗಿ ಅಜ್ಜಿ ಶಾಂತಾ ಪವಾರ್, ಮಕ್ಕಳು ಹಾಗೂ ಮಹಿಳೆಯರಿಗೆ ಮಾರ್ಷಲ್ ಆರ್ಟ್‍ ಕಲಿಸಿಕೊಡುವಲ್ಲಿ ನಿರತರಾಗಿದ್ದಾರೆ. ವಿಶೇಷವೆಂದರೆ ಅಜ್ಜಿ ಶಾಂತಾ ಪವಾರ್‍ ತಮ್ಮ ಶಾಲೆಗೆ ಸೋನು ಸೂದ್ ಅವರ ಹೆಸರನ್ನೇ ಇಟ್ಟಿದ್ದು, ತಮ್ಮ ಕನಸು ನನಸಾಗಲು ನೆರವಾಗಿದ್ದಕ್ಕೆ ಧನ್ಯವಾದವನ್ನು ಹೇಳಿದ್ದಾರೆ. ಅಲ್ಲದೇ ಶೀಘ್ರವೇ ತಮ್ಮ ಶಾಲೆಗೆ ಭೇಟಿ ನೀಡುವಂತೆಯೂ ಮನವಿ ಮಾಡಿದ್ದಾರೆ.

Latest News

Lal singh chadda
ಮನರಂಜನೆ

“ಲಾಲ್ ಸಿಂಗ್ ಚಡ್ಡಾ” ಚಿತ್ರ ಭಾರತೀಯ ಸೇನೆ ಮತ್ತು ಸಿಖ್ಖರನ್ನು ಅವಮಾನಿಸಿದೆ! : ಕ್ರಿಕೆಟಿಗ ಮಾಂಟಿ ಪನೇಸರ್

ಲಾಲ್ ಸಿಂಗ್ ಚಡ್ಡಾ  ಚಿತ್ರ ನಿಷೇಧಕ್ಕೆ ಮಾಂಟಿ ಪನೇಸರ್ ಕರೆ.  ಕ್ರಿಕೆಟಿಗ ಮಾಂಟಿ ಪನೇಸರ್ ಅವರು ಟ್ವಿಟರ್ನಲ್ಲಿ “ಲಾಲ್ ಸಿಂಗ್ ಚಡ್ಡಾ ಚಿತ್ರ ನಾಚಿಕೆಗೇಡಿನದು.

Medical Test
ಮಾಹಿತಿ

ಮದುವೆಗೂ ಮುನ್ನ ಈ ವೈದ್ಯಕೀಯ ಪರೀಕ್ಷೆಗಳನ್ನು ತಪ್ಪದೇ ಮಾಡಿಸಿಕೊಳ್ಳಿ ; ಅನುವಂಶಿಕ ಕಾಯಿಲೆಗಳನ್ನು ಪತ್ತೆ ಮಾಡಿ

ಕೆಲ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದರಿಂದ ಆನುವಂಶಿಕ ಕಾಯಿಲೆಗಳು ಪತ್ತೆ ಮಾಡಿ, ಅವುಗಳಿಗೆ ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳಬಹುದು.

Siddaramaiah
ರಾಜಕೀಯ

ಲೋಕಾಯುಕ್ತವೇ ಇದ್ದಿದ್ದರೆ ಮಜಾವಾದಿ ಸಿದ್ದರಾಮಯ್ಯ ಜೈಲೂಟ ತಿನ್ನುತ್ತಿದ್ದರು : ಬಿಜೆಪಿ

ಲೋಕಾಯುಕ್ತವೇ ಇದ್ದಿದ್ದರೆ ಮಜಾವಾದಿ ಸಿದ್ದರಾಮಯ್ಯ(Siddaramaiah) ಜೈಲೂಟ ತಿನ್ನುತ್ತಿದ್ದರು ಎಂದು ರಾಜ್ಯ ಬಿಜೆಪಿ(State BJP) ವ್ಯಂಗ್ಯವಾಡಿದೆ.

Gaalipata 2
ಮನರಂಜನೆ

ತೆರೆಯ ಮೇಲೆ ಹಾರಿದ ‘ಗಾಳಿಪಟ-2’; ಗಣಿ-ಭಟ್ರು ಕಾಂಬಿನೇಷನ್‍ಗೆ ಶಿಳ್ಳೆ-ಚಪ್ಪಾಳೆ

ಯೋಗರಾಜ್ ಭಟ್ ಮತ್ತು ‘ಗೋಲ್ಡನ್ ಸ್ಟಾರ್’ ಗಣೇಶ್ ಅವರ ಕಾಂಬಿನೇಷನ್ ಹೇಗೆ ಮೂಡಿಬಂದಿದೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕುತೂಹಲದಿಂದ ಚಿತ್ರಮಂದಿರದತ್ತ ಹೆಜ್ಜೆ ಹಾಕಿದ್ದಾರೆ.