ಕೆಜಿಎಫ್ ನಂತಹ ಹಿಟ್ ಚಿತ್ರದಲ್ಲಿ ಅಭಿನಯಿಸಿದ್ದೇ, ನಟ ರಾಕಿಂಗ್ ಸ್ಟಾರ್ ಯಶ್ ಈಗ ಫುಲ್ ಫೇಮಸ್ ಆಗಿದ್ದಾರೆ. ಈ ಬಾರಿ ಕತಾರಿನಲ್ಲಿ ನಡೆದ 2019ನೇ ಸಾಲಿನ ಕನ್ನಡದ ಅತ್ಯುತ್ತಮ ನಟ ಮಾತ್ರವಲ್ಲದೆ ಸ್ಟೈಲಿಶ್ ಸ್ಟಾರ್ ಅವಾರ್ಡ್ ಸಹ ಯಶ್ ಮುಡುಗೇರಿದೆ. ಸೌತ್ ಇಂಡಿಯಾದಲ್ಲಿ ನಾಲ್ಕು ಭಾಷೆಯ ಸಿನಿಮಾಗಳಿಗೆ ಪ್ರಶಸ್ತಿ ನೀಡಿ ಗೌರವಿಸುವ ಈ ಕಾರ್ಯಕ್ರಮದಲ್ಲಿ ಕೆಜಿಎಫ್‍ನ ರಾಕಿ ಬಾಯ್ ಪಾತ್ರಕ್ಕಾಗಿ ಯಶ್‍ಗೆ ಈ ಪ್ರಶಸ್ತಿ ಲಭ್ಯಯವಾಗಿದೆ.
ಕೆಜಿಎಫ್ ಚಿತ್ರದ ಅಭಿನಯಕ್ಕಾಗಿ ಯಶ್ ಅತ್ಯುತ್ತಮ ನಟ ಪ್ರಶಸ್ತಿಯನ್ನ ತಮ್ಮದಾಗಿಸಿಕೊಂಡರೆ, ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್‍ರವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ..
ಒಟ್ನಲ್ಲಿ ಕಳೆದ ಬಾರಿ ರಾಮಚಾರಿ ಚಿತ್ರಕ್ಕಾಗಿ ಸೈಮಾ ಅವಾರ್ಡ್ ಪಡೆದುಕೊಂಡಿದ್ದ ಯಶ್ ಈ ಬಾರಿಯೂ ಪ್ರಶಸ್ತಿಗೆ ಭಾಜನರಾಗುವ ಮೂಲಕ 2ನೇ ಬಾರಿ ಸೈಮಾ ಪ್ರಶಸ್ತಿ ಪಡೆದಂತಾಗಿದೆ.