ರಾಜ್ಯದಲ್ಲಿ ಇಂದು ೧೦ ಕೊರೊನಾ ಪಾಸಿಟಿವ್ ಕೇಸ್ : ಸೋಂಕಿತರ ಸಂಖ್ಯೆ ೭೪ಕ್ಕೆ ಏರಿಕೆ

Share on facebook
Share on google
Share on twitter
Share on linkedin
Share on print

ಇಂದು ಒಂದೇ ದಿನ ರಾಜ್ಯದಲ್ಲಿ ೧೦ ಕೊರೋನಾ ಪಾಸಿಟಿವ್ ಕೇಸ್ ದೃಢವಾಗಿರುವುದಾಗಿ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವಂತ ಹೆಲ್ತ್ ಬುಲೆಟಿನ್ ನಿಂದ ತಿಳಿದು ಬಂದಿದೆ. ಅಲ್ಲದೇ ಇದುವರೆಗೆ ಕೊರೊನಾ ಸೋಂಕಿನಿAದಾಗಿ ೩ ಬಲಿಯಾಗಿದ್ದರೇ, ೫ ಜನರು ಕೊರೊನಾ ಸೋಂಕಿನಿAದ ಗುಣಮುಖರಾಗಿರುವುದಾಗಿ ತಿಳಿಸಿದೆ.

ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಇಂದು ಒಂದೇ ದಿನ ೧೦ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಅಲ್ಲದೇ ೩೬ನೇ ರೋಗಿಯ ಸಂಪರ್ಕದಲ್ಲಿದ್ದAತ ಮೂವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದಾಗಿ ರಿಪೋರ್ಟ್ ನಲ್ಲಿ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ೭೪ಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಶಾಕಿಂಗ್ ನ್ಯೂಸ್ ಅಂದ್ರೇ ಚಿಕ್ಕಬಳ್ಳಾಪುರದ ೧೯ನೇ ಕೊರೊನಾ ವೈರಸ್ ಸೋಂಕು ಪೀಡಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದAತ ೫ ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಅಲ್ಲದೇ ೨೫ನೇ ಸೋಂಕಿತರಿAದ ಅವರ ಮಗನಿಗೂ ಇಂದು ಕೊರೊನಾ ವೈರಸ್ ಸೋಂಕು ತಗುಲಿರುವುದಾಗಿ ದೃಢಪಟ್ಟಿದೆ.

Submit Your Article