ಕೊರೋನ ವೈರಸ್ ರಾಜ್ಯದಲ್ಲಿ ಹರಡುತ್ತಲೇ ಇದೆ. ಆದರೆ ಸಿಎಂ ಬಿ ಎಸ್ ವೈ ಮತ್ತೆ ಲಾಕ್ಡೌನ್ ಮಾಡುವ ಮಾತೆ ಇಲ್ಲ ಎಂದು ಹೇಳುತ್ತಿದ್ದಾರೆ.ಮಾರ್ಚ್ 25 ಕ್ಕೆ ಶುರುವಾದ ಲಾಕ್ಡೌನ್ ಜೂನ್ ೧ನೇ ತಾರೀ ಖಿನವತ್ತು ಅನ್ ಲಾಕ್ 1.o ಶುರುವಾಗಿತ್ತು. ಶಾಲಾ ಕಾಲೇಜು ಬಿಟ್ಟು ಬಹುತೇಕ ಎಲ್ಲಾ ಕಾರ್ಯಗಳು ಮುಂದುವರೆಸಲು ಸರ್ಕಾರ ಅನುಮತಿ ನೀಡಿತ್ತು. ಧಾರ್ಮಿಕ ಸ್ಥಳಗಳಿಗೂ ಕೂಡ ಜೂನ್ 8ರಿಂದ ಅವಕಾಶ ನೀಡಿತ್ತು. ಆದರೆ ಇದೀಗ ಕೊರೋನ ಎಲ್ಲಡೆ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಲಾಕ್ಡೌನ್ ಬೇಡ ಎನ್ನುತ್ತಿದ್ದಾರೆ ಸಿಎಂ ಬಿ ಎಸ್ ವೈ.
ಹೊರ ರಾಜ್ಯಗಳಿಂದ ಬಂದವರನ್ನು 14 ದಿನಗಳ ಕ್ವಾರಂಟೇನ್ ನಲ್ಲಿ ಇರಿಸಲಾಗುತ್ತಿತ್ತು. ಆದರೆ ಈಗ ಹೊಸ ಬದಲಾವಣೆಯನ್ನು ಬಿಎಸೆ ವೈ ತಂದಿದ್ದಾರೆ. ದೆಹಲಿ ಮತ್ತು ಚೆನ್ನೈ ನಿಂದ ಬಂದವರಿಗೆ 3 ದಿನ ಸರ್ಕಾರಿ ಕ್ವಾರಂಟೇನ್ ಹಾಗು 3 ದಿನ ಹೋಂ ಕ್ವಾರಂಟೇನ್ ಮಹಾರಾಷ್ಟ್ರದಿಂದ ಬಂದವರಿಗೆ ಎಥಾ ಸ್ಥಿತೆಯಾಗ 7 ದಿನ ಸರ್ಕಾರಿ ಕ್ವಾರಂಟೇನ್ ಹಾಗು 7 ದಿನ ಹೋಂ ಕ್ವಾರಂಟೇನ್ ಮಾಡಲಾಗುವುದಾಗಿ ಸಿಎಂ ಸ್ಪಷ್ಟನೆ ನೀಡಿದ್ದಾರೆ. ಇನ್ನು ಶಾಲಾ ಕಾಲೀಜು, ಸಿನೀಮಾ ಥೀಯಟರ್ ಹಾಗು ಜಿಮ್ ಗಳು ತೆರೆಯಲು ಅವಕಾಶ ನೀಡಿರಲ್ಲಿಲ್ಲ. ಆದರೆ ನಾಳೆ ಪ್ರಧಾನಿ ಜೊತೆ ನಡೆಸುವ ಸಭೆಯಲ್ಲಿ ಇದನ್ನು ಕೇಳುವ ಸಾಧ್ಯತೆ ಇದೆ. ಈಗಾಗಲೇ 12ನೇ ತರಗತಿಯ ಇಂಗ್ಲೀಷ್ ಪರೀಕ್ಷೆ ಜೂನ್ 18ನೇ ತಾರೀಖು ಹಾಗು 10ನೇ ತರಗತಿಯ ಪರೀಕ್ಷೆ ಜೂನ್ 25ರಂದು ನಿಗದಿಯಾಗಿದ್ದು ಸರ್ಕಾರ ಎಲ್ಲಾ ರೀತಿಯ ಸಿದ್ದತೆಗಳನ್ನು ನಡೆಸುತ್ತಿದೆ.