ಬೆಂಗಳೂರು, ಅ. 23: ರಾಜ್ಯ ರಾಜಕೀಯದಲ್ಲಿ ಟ್ವೀಟ್ ಕಾದಾಟ ಭುಗಿಲೆದ್ದಿದೆ. ಇದು ಹೊಸತೇನಲ್ಲ, ರಾಜಕೀಯದಲ್ಲಿ ಟ್ವೀಟ್ ಕಿತ್ತಾಟ ಮೊದಲಿನಿಂದಲೂ ನಡೆಯುತ್ತಲೇ ಬಂದಿದೆ. ಈಗ ಟ್ವೀಟ್‌ನಲ್ಲಿ ಸಮರ ನಡೆಸಿದವರು ಬೇರಾರು ಅಲ್ಲ. ಬಿಜೆಪಿಯ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ. ನಿನ್ನೆಯಷ್ಟೆ ನಳಿನ್ ವಿರುದ್ಧ ಸಿಡಿದೆದ್ದು ಸರಣಿ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ ಬಿಜೆಪಿ ರಾಜ್ಯಾಧ್ಯಕ್ಷರನ್ನು ಕಾಡು ಮನುಷ್ಯ ಎಂದಿದ್ದರು. ಇದಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ನಳಿನ್ ಕುಮಾರ್ ಕಟೀಲ್ ನಿಮ್ಮ ಖಾತೆ ಹ್ಯಾಕ್ ಆಗಿದೆ ಎಂದು ಭಾವಿಸುತ್ತೇನೆ. ಇದು ನಿಜವೇ ಆಗಿದ್ದಲ್ಲಿ ಪೊಲೀಸರಿಗೆ ದೂರು ಕೊಡಿ ಎಂದು ವ್ಯಂಗ್ಯವಾಡಿದ್ದಾರೆ.
@siddaramaiah ನವರೆ ನಿಮ್ಮ ಖಾತೆ ಹ್ಯಾಕ್ ಆಗಿದೆ ಎಂದು ಭಾವಿಸುತ್ತೇನೆ. ಇದು ನಿಜವೆ ಆಗಿದ್ದಲ್ಲಿ ಪೊಲೀಸರಿಗೆ ದೂರು ಕೊಡಿ. ಯಾಕೆಂದರೆ ಇದು ನಿಮ್ಮಂಥ ನಾಯಕರಿಗೆ ಶೋಭಿಸುವ ಭಾಷೆಯಂತೂ ಅಲ್ಲ. ನಿಮ್ಮ ಖಾತೆ ಹ್ಯಾಕ್ ಆಗದೆ ಇದ್ದಲ್ಲಿ ನಿಮ್ಮ ಅಸಹನೆ ಮತ್ತು ಅದನ್ನು ವ್ಯಕ್ತಪಡಿಸಿದ ರೀತಿಯ ಬಗ್ಗೆ ನನಗೆ ಸಹಾನುಭೂತಿಯಿದೆ. https://t.co/cnyBRTO4J0
— Nalinkumar Kateel (@nalinkateel) October 22, 2020
ಹುಲಿಯಾವನ್ನು ಕಾಡಿಗೆ ಓಡಿಸುತ್ತೇವೆ, ಬಂಡೆ ಛಿದ್ರ ಎಂದು ನಳಿನ್ ಕುಮಾರ್ ಕಟೀಲ್ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು.ಇದರಿಂದ ಕೆಂಡಾಮಂಡಲರಾಗಿದ್ದ ಸಿದ್ದರಾಮಯ್ಯ ಕಾಡಿಗೆ ಹುಲಿ ಓಡಿಸುತ್ತೇನೆ, ಬಂಡೆ ಒಡೆಯುತ್ತೇನೆ ಎಂದು ಹೇಳಿಕೊಂಡು ತಿರುಗಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಒಬ್ಬ ಕಾಡು ಮನುಷ್ಯ. ನಾಗರೀಕ ಜಗತ್ತಲ್ಲಿ ಇರಲು ನಾಲಾಯಕ್ ಆಗಿರುವ ಈ ವ್ಯಕ್ತಿಯನ್ನು ನಾಡಿನ ಜನರ ಹಿತದೃಷ್ಟಿಯಿಂದ ಬಿಜೆಪಿಯವರು ತಕ್ಷಣ ಕಾಡಿಗೆ ಕೊಂಡುಹೋಗಿ ಬಿಟ್ಟು ಬರಲಿ ಎಂದು ಟ್ವೀಟ್ ಮಾಡಿದ್ದರು.
ಕಾಡಿಗೆ ಹುಲಿ ಓಡಿಸುತ್ತೇನೆ, ಬಂಡೆ ಒಡೆಯುತ್ತೇನೆ ಎಂದು ಹೇಳಿಕೊಂಡು ತಿರುಗಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ @nalinkateel ಒಬ್ಬ ಕಾಡು ಮನುಷ್ಯ. ನಾಗರಿಕ ಜಗತ್ತಲ್ಲಿ ಇರಲು ನಾಲಾಯಕ್ ಆಗಿರುವ ಈ ವ್ಯಕ್ತಿಯನ್ನು ನಾಡಿನ ಜನರ ಹಿತದೃಷ್ಟಿಯಿಂದ ಬಿಜೆಪಿಯವರು ತಕ್ಷಣ ಕಾಡಿಗೆ ಕೊಂಡುಹೋಗಿ ಬಿಟ್ಟುಬರಲಿ. 1/6
— Siddaramaiah (@siddaramaiah) October 22, 2020
ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿಯಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಇದೀಗ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿ ಸಿದ್ದರಾಮಯ್ಯನವರೇ ನಿಮ್ಮ ಖಾತೆ ಹ್ಯಾಕ್ ಆಗಿದೆ ಎಂದು ಭಾವಿಸುತ್ತೇನೆ. ಇದು ನಿಜವೆ ಆಗಿದ್ದಲ್ಲಿ ಪೊಲೀಸರಿಗೆ ದೂರು ಕೊಡಿ. ಯಾಕೆಂದರೆ ಇದು ನಿಮ್ಮಂಥ ನಾಯಕರಿಗೆ ಶೋಭಿಸುವ ಭಾಷೆಯಂತೂ ಅಲ್ಲ. ನಿಮ್ಮ ಖಾತೆ ಹ್ಯಾಕ್ ಆಗದೆ ಇದ್ದಲ್ಲಿ ನಿಮ್ಮ ಅಸಹನೆ ಮತ್ತು ಅದನ್ನು ವ್ಯಕ್ತಪಡಿಸಿದ ರೀತಿಯ ಬಗ್ಗೆ ನನಗೆ ಸಹಾನುಭೂತಿಯಿದೆ ಎಂದು ತಿರುಗೇಟು ನೀಡಿದ್ದಾರೆ.