ಬೆಂಗಳೂರು,ನ.09: ಅನರ್ಹ ಶಾಸಕ ರೋಷನ್ ಬೇಗ್ , ಅಯೋಧ್ಯೆ ರಾಮ ಜನ್ಮ ಭೂಮಿಯ ಬಗ್ಗೆ ಸುಪ್ರೀಂ ನೀಡಿರುವ ತೀರ್ಪನ್ನು ಸ್ವಾಗತಿಸಿದ್ದಾರೆ. ಅಲ್ಲದೆ ರಾಮಮಂದಿರವನ್ನು ನಮ್ಮ ದೇಶದಲ್ಲಿ ಕಟ್ಟದೆ ಪಾಕಿಸ್ತಾನದಲ್ಲಿ ಕಟ್ಟೋದಕ್ಕಾಗುತ್ತಾ ಅಂತ ಪ್ರಶ್ನಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ವರ್ಷದ ಹಿಂದೆಯೇ ಅಯೋಧ್ಯೆಯ ತೀರ್ಪನ್ನು ಸ್ವಾಗತಿಸುವುದಾಗಿ ತಿಳಿಸಿದ್ದೆ. ನಮ್ಮ ಧರ್ಮ ಗುರುಗಳೂ ಕೂಡ ಯಾವುದೇ ತೀರ್ಪಿಗೂ ತಲೆ ಬಾಗುವುದಾಗಿ ಹೇಳಿದ್ದರು. ಮೇಲ್ಮನವಿ ಹಾಕ್ತೀವಿ ಎಂದು ಮುಂದೆ ಬರುವವರಲ್ಲಿ ನಾನು ಮನವಿ ಮಾಡುವುದೇನೆಂದರೆ, ಅಂತಹ ತಪ್ಪನ್ನು ಮಾಡಬೇಡಿ. ಸೌಹಾರ್ದತೆಯಿಂದ ಬದುಲು ಈ ತೀರ್ಪನ್ನು ಸ್ವಾಗತಿಸಿ ಎಂದಿದ್ದಾರೆ.
ರಾಮಮಂದಿರ ಕಟ್ಟುವಾಗ ನಾವು ಮುಸ್ಲಿಂ ಸ್ವಯಂ ಸೇವಕರನ್ನ ಕರೆದುಕೊಂಡು ಬರುತ್ತೇವೆ. 5 ಎಕರೆ ಜಾಗ ಕೊಡೋಕೆ ಹೇಳಿರುವ ಕಡೆ ಮಸೀದಿ ಕಟ್ಟುವಾಗ ಹಿಂದೂಗಳು ಬನ್ನಿ. ಹಿಂದೂ ಮುಸ್ಲಿಂಮರು ಸೇರಿ ರಾಮಮಂದಿರ, ಮಸೀದಿ ಕಟ್ಟೋಣ. ದೇಶದಲ್ಲಿ ಸಾಮರಸ್ಯದಿಂದ ಇಬ್ಬರು ಬಾಳ್ವೆ
ನಡೆಸೋಣ ಎಂಬುದಾಗಿ ಕರೆ ಕೊಟ್ಟಿದ್ದಾರೆ.