Visit Channel

ರಾಷ್ಟ್ರ ರಾಜಧಾನಿಯಲ್ಲಿ ಕರೋನಾ ಪರಿಸ್ಥಿತಿ ಸುಧಾರಣೆ: ಸಿಎಂ ಕೇಜ್ರಿವಾಲ್

KejriwalCoronavirus-2

ರಾಷ್ಟ್ರರಾಜಧಾನಿಯಲ್ಲಿ ಕರೋನಾ ವೈರಸ್ ಸಾಂಕ್ರಾಮಿಕ ರೋಗದ ಪರಿಸ್ಥಿತಿ ಸಾಕಷ್ಟು ಸುಧಾರಿಸಿದ್ದು, ಪ್ರಸ್ತುತ 26 ಸಾವಿರ ಸಕ್ರಿಯ ಪ್ರಕರಣಗಳು ಮಾತ್ರ ಇವೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅರವಿಂದ್ ಕೇಜ್ರಿವಾಲ್ ಒಂದು ತಿಂಗಳ ಹಿಂದೆ ಲಾಕ್‍ಡೌನ್ ತೆರವು ಮಾಡಿದ ನಂತರ ದೆಹಲಿಯಲ್ಲಿ ಭಾರಿ ಪ್ರಮಾಣದಲ್ಲಿ ಸೋಂಕು ಹೆಚ್ಚಾಗಿತ್ತು. ಆದರೆ ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ತಜ್ಞರು ಜೂನ್ ತಿಂಗಳ ಅಂತ್ಯಕ್ಕೆ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 1ಲಕ್ಷಕ್ಕೇರುವ ಸಾಧ್ಯತೆ ಇದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 70 ಸಾವಿರಕ್ಕೆ ಏರಿಕೆಯಾಗುತ್ತದೆ. 15 ಸಾವಿರ ಬೆಡ್‍ಗಳ ಕೊರತೆ ಉಂಟಾಗುತ್ತದೆ ಎಂದು ಹೇಳಿತ್ತು.
ತಜ್ಞರ ಮಾತನ್ನು ಮನಗಂಡು ನಮ್ಮ ಸರ್ಕಾರ ಎಲ್ಲ ಸರ್ಕಾರಿ ಆಸ್ಪತ್ರೆಗಳನ್ನು ವೇಗವಾಗಿ ದುರಸ್ತಿ ಮಾಡಿ ಸೋಂಕಿತರ ಚಿಕಿತ್ಸೆಗೆ ಎಲ್ಲ ರೀತಿಯಲ್ಲು ತಯಾರಿಮಾಡಿಕೊಂಡೆವು. ಎಲ್ಲರ ಬಳಿ ಹೋಗಿ ಸಹಾಯ ಕೇಳಿದೇವು. ಸಾಮಾಜ ಸೇವೆ ಸಂಸ್ಥೆಗಳೊಂದಿಗೆ ಸೇರಿಕೊಂಡೆವು. ಎನ್‍ಜಿಒಗಳು, ಧಾರ್ಮಿಕ ಸಂಸ್ಥೆಗಳೊಂದಿಗೆ ಮಾತನಾಡಿಕೊಂಡು ಬೆಡ್ ವ್ಯವಸ್ಥೆ ಮಾಡಿಕೊಂಡೆವು.
ಜತೆಗ ಕೇಂದ್ರ ಸರ್ಕಾರ ನಮ್ಮ ಜೊತೆಗೆ ಕೈ ಜೋಡಿಸಿತು. ಈ ನಡುವೆ ಹೋಟೆಲ್ ಮಾಲೀಕರು ಸರ್ಕಾರದ ವಿರುದ್ಧ ಪ್ರಕರಣ ಹೂಡಿದರು. ಆದರೆ ಆ ಪ್ರಕರಣ ನಮ್ಮ ಪರವಾಯಿತು. ನಾವು ಕರೋನಾ ನಿಯಂತ್ರಣಕ್ಕೆ ಬೇಕಾದ ಎಲ್ಲ ವ್ಯವಸ್ಥೆ, ಕ್ರಮಗಳನ್ನು ಕೈಗೊಂಡದರಿಂದ ಇಂದು ಕರೋನಾ ನಿಧಾನವಾಘಿ ನಿಯಂತ್ರಣಕ್ಕೆ ಬಂದಿದೆ. ದೆಹಲಿ ಪ್ರಸ್ತುತ ಸುಧಾರಿಸುತ್ತಿದೆ. ತಾರಕ್ಕಕೇರಿದ್ದ ಸೋಂಕು ಇಂದು ಶೇ.50 ರಷ್ಟು ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.
ದೆಹಲಿಯ ಕರೋನಾ ನಿಯಂತ್ರಣದ ಯಶಸ್ಸು ದೆಹಲಿಯ ಎಲ್ಲ ಜನತೆ, ಕೋವಿಟ್ ವಾರಿಯರ್ಸ್, ದೆಹಲಿ ಪೊಲೀಸರಿಗೆ ಸಲ್ಲಬೇಕು. ಎಲ್ಲರ ಬೆಂಬಲ ಹೀಗೆ ಮುಂದುವರೆದರೆ ಕರೋನಾ ವೈರಸ್‍ಅನ್ನು ದೆಹಲಿಯಿಂದ ಸಂಪೂರ್ಣ ನಿವಾರಣೆ ಮಾಡಬಹುದು ಎಂದು ಕೇಜ್ರಿವಾಲ್ ಹೇಳಿದರು.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.