ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಂಧಪಟ್ಟಿದ್ದ 7 ಜನ ಆರೋಪಿಗಳಿಗೆ (Accused) ಇಂದು ಹೈಕೋರ್ಟ್ (High Court) ಜಾಮೀನು ನೀಡಿದೆ.ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಎ1 ಆರೋಪಿಯಾದ ಪವಿತ್ರಾ ಗೌಡ ಹಾಗೂ ಎ2 ಆರೋಪಿಯಾದ ನಟ ದರ್ಶನ್ ಗೂ ಸಹ ಜಾಮೀನನ್ನು ನೀಡಿದೆ.
ಜೂನ್ 8 ರಂದು ರೇಣುಕಾಸ್ವಾಮಿ ಯನ್ನು ಬೆಂಗಳೂರಿಗೆ ಕರೆತಂದು ಹಲ್ಲೆ ನಡೆಸಲಾಗಿತ್ತು.ಹಲ್ಲೆ ಬಳಿಕ ಆತ ಮೃತಪಟ್ಟಿದ್ದನು.ಈ ಕೃತ್ಯದಲ್ಲಿ ನಟ ದರ್ಶನ್
(Actor Darshan) ಹಾಗೂ ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು (Arrested).ಕಳೆದ ಆರು ತಿಂಗಳಿನಿಂದ ಜೈಲಿನಲ್ಲಿದ್ದ ಆರೋಪಿಗಳಿಗೆ ಈಗ ಬಿಡುಗಡೆ ಭಾಗ್ಯ ಸಿಕ್ಕಿದೆ.
ಎ1 ಪವಿತ್ರಾ ಗೌಡ, ಎ2 ದರ್ಶನ್, ಎ4 ಜಗದೀಶ್, ಎ7 ಅನುಕುಮಾರ್ ಅಲಿಯಾಸ್ ಅನು, ಎ12 ಲಕ್ಷ್ಮಣ್, ಎ11 ನಾಗರಾಜ್, ಎ14 ಪ್ರದೋಷ್ಗೆ ಜಾಮೀನು (Bail) ಮಂಜೂರು (Granted) ಮಾಡಲಾಗಿದೆ.ಪವಿತ್ರಾ ಗೌಡ ಈ ಮೊದಲೇ ಕೋರ್ಟ್ ಗೆ (Court) ಜಾಮೀನು ಅರ್ಜಿಯನ್ನು (Bail application) ಸಲ್ಲಿಸಿದ್ದರು,ಆದರೆ ಕೋರ್ಟ್ ಜಾಮೀನು ಅರ್ಜಿಯನ್ನು ರದ್ದು (Cancellation) ಮಾಡಿತ್ತು.ಈಗ ಪವಿತ್ರ ಪವಿತ್ರಾ ಗೌಡ ಗೆ ಜಾಮೀನನ್ನು ಹೈ ಕೋರ್ಟ್ ಮಂಜೂರು ಮಾಡಿದೆ.ನಟ ದರ್ಶನ್ ಅವರಿಗೆ ವೈದ್ಯಕೀಯ ಜಾಮೀನು ನೀಡಿತ್ತು ಅವರು ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಇದೀಗ ಅವರಿಗೆ ಪೂರ್ಣಾವಧಿ ಬೇಲ್ ಅನ್ನು ಕೋರ್ಟ್ (Court) ನೀಡಿದೆ.