• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಕವರ್‌ ಸ್ಟೋರಿ

ರೇಷನ್ ಕಳ್ಳರು!

padma by padma
in ಕವರ್‌ ಸ್ಟೋರಿ, ಪ್ರಮುಖ ಸುದ್ದಿ
Featured Video Play Icon
0
SHARES
3
VIEWS
Share on FacebookShare on Twitter

ವಿಜಯಲಕ್ಷ್ಮಿ ಶಿಬರೂರು

ನ್ಯಾಯ ಬೆಲೆ ಅಂಗಡಿ ಅಂದಾಗ ನಮ್ಮ ಕಣ್ಣ ಮುಂದೆ ಬರೀ ಅನ್ಯಾಯದ್ದೇ ಚಿತ್ರಣಗಳು ಬರಲಾರಂಭಿಸುತ್ತವೆ. ಯಾಕಂದ್ರೆ ನಮ್ಮ ರಾಜ್ಯದಲ್ಲಿ ನ್ಯಾಯ ಬೆಲೆ ಅಂಗಡಿಗಳು ಬಡವರನ್ನ ಶೋಷಿಸೋ ಕೇಂದ್ರಗಳಾಗ್ತಿವೆ. ಸಕರ್ಾರ ಉಚಿತ ಅಥವಾ ರಿಯಾಯಿತಿ ದರದಲ್ಲಿ ಕೊಡೋ ಅಕ್ಕಿ, ಬೇಳೆ, ಧಾನ್ಯವನ್ನ ಬಡವರಿಗೆ ಸರಬರಾಜು ಮಾಡಲು ಈ ನ್ಯಾಯ ಬೆಲೆ ಅಂಗಡಿ ಅನ್ನೋ ವ್ಯವಸ್ಥೆ ಮಾಡಲಾಗಿದೆ. ಆದ್ರೆ ಈ ವ್ಯವಸ್ಥೆ ಅವ್ಯವಸ್ಥೆಯ ಆಗರವಾಗಿದೆ. ಇಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಬಡವರ ಅಕ್ಕಿಗೆ ಹೆಜ್ಜೆ ಹೆಜ್ಜೆಗೂ ಕನ್ನ ಬೀಳ್ತಿದೆ. ಬಡವರ ಹೊಟ್ಟೆ ಸೇಬರ್ೇಕಾದ ಅನ್ನ ಕಾಳ ಸಂತೆ ಕುಳಗಳ ಪಾಲಾಗುತ್ತಿದೆ.

ದುರಂತ ಅಂದ್ರೆ ಆಹಾರ ಇಲಾಖೆ ಅಧಿಕಾರಿಗಳೇ ಈ ಭಾರೀ ಹಗರಣದಲ್ಲಿ ಭಾಗಿಯಾಗಿ ಬಡಜನರನ್ನ ಶೋಷಿಸುತ್ತಿದ್ದಾರೆ. ನ್ಯಾಯ ಬೆಲೆ ಅಂಗಡಿಯವರು ಎಷ್ಟೇ ಮೋಸ ಮಾಡಿದ್ರು, ಜನರ ದೂರಿಗೆ ಸ್ಪಂದಿಸಿ ಕ್ರಮಕೈಗೊಳ್ಳುತ್ತಿಲ್ಲ ಬದಲಾಗಿ ಆಹಾರ ಇಲಾಖೆ ಅಧಿಕಾರಿಗಳೇ ಈ ಹಗರಣದಲ್ಲಿ ಭಾಗಿಯಾಗಿ ಜನಸಾಮಾನ್ಯರಿಗೆ ಭಾರೀ ವಂಚನೆ ಮಾಡ್ತಿದ್ದಾರೆ. ಈ ವಂಚನೆ ದಶಕಗಳಿಂದ ನಡೆಯುತ್ತಲೇ ಇದೆ. ಆದ್ರೆ ಇದರ ವಿರುದ್ಧ ದನಿ ಎತ್ತಿದ್ರೆ ದನಿ ಎತ್ತಿದವರ ಕಾರ್ಡ್‌ ರದ್ದು ಮಾಡ್ತಿದ್ದಾರೆ. ಆಹಾರ ಧಾನ್ಯ ನಿರಾಕರಿಸಲಾಗ್ತಿದೆ. ಹಾಗಾಗಿ ಜನರೂ ಕೂಡ ದನಿ ಇಲ್ಲದವರಾಗಿದ್ದಾರೆ. ಹಾಗಂತ ಕೈಕಟ್ಟಿ ಕುಳಿತರೆ ಮುಂದೊಂದು ದಿನ ರೇಷನ್ ಅಕ್ಕಿಗೂ ಲಂಚ ಕೊಟ್ಟು ಪಡಿಯೋ ಪರಿಸ್ಥಿತಿ ಬರಬಹುದು. ಹಾಗಾಗಿ ನಾವು ಈ ಅನ್ಯಾಯದ ವಿರುದ್ಧ ನಿರಂತರವಾಗಿ ದನಿ ಎತ್ತುತ್ತಲೇ ಇರಬೇಕು, ಭ್ರಷ್ಟರ ಬಣ್ಣ ಬಯಲು ಮಾಡಲೇ ಬೇಕು. ಅದಕ್ಕಾಗಿ ವಿಜಯಟೈಮ್ಸ್ನ ಕವರ್‌ಸ್ಟೋರಿ ತಂಡ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಗೋಪಾಲಯ್ಯ ಅವರ ಕ್ಷೇತ್ರದಲ್ಲಿ ರಿಯಾಲಿಟಿ ಹಾಗೂ ರಹಸ್ಯ ಕಾರ್ಯಾಚರಣೆಗೆ ಇಳಿಯಿತು.

ಸಚಿವರ ಮನೆಯಂಗಳದಲ್ಲೇ ಲೂಟಿ!: ನಮ್ಮ ರಾಜ್ಯದ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಗೋಪಾಲಯ್ಯ ಅವರ ಕ್ಷೇತ್ರದಲ್ಲೇ ಜನರಿಗೆ ಸರಿಯಾಗಿ ರೇಷನ್ ಸಿಗ್ತಿಲ್ಲ. ಸಚಿವರ ಮನೆ ಸುತ್ತಮುತ್ತಲಿರೋ ನ್ಯಾಯ ಬೆಲೆ ಅಂಗಡಿಗಳಲ್ಲೇ ಬಡ ಜನರಿಗೆ ಭರ್ಜರಿ ಮೋಸ ಮಾಡಲಾಗುತ್ತೆ.ಈ ದಂಧೆಯ ಬಗ್ಗೆ ಸಚಿವರ ಗಮನಸೆಳೆಯಲೇ ಬೇಕು. ಜನರಲ್ಲಿ ಜಾಗೃತಿ ಮೂಡಿಸ್ಲೇ ಬೇಕು ಅಂತ ಕವರ್ಸ್ಟೋರಿ ತಂಡ ರೇಷನ್ ಕಳ್ಳರ ಬಣ್ಣ ಬಯಲಿಗೆ ಫೀಲ್ಡಿಗೆ ಇಳಿಯಿತು.

ಮೊದ್ಲಿಗೆ ನಾವು ಮಹಾಲಕ್ಷ್ಮಿ ಲೇಔಟ್ನ ಕಮಲಾನಗರದಲ್ಲಿರೋ 336 ನಂಬರಿನ ಪುಷ್ಪ ಸ್ಟೋರ್ಸ್ನಲ್ಲಿ ರಿಯಾಲಿಟಿ ಚೆಕ್ ಪ್ರಾರಂಭಿಸಿದ್ವಿ. ಈ ನ್ಯಾಯ ಬೆಲೆ ಅಂಗಡಿಯಲ್ಲಿ ಹಲವಾರು ವರ್ಷಗಳಿಂದ ಬಡವರಿಗೆ ಅನ್ಯಾಯನೇ ಆಗ್ತಿದೆಯಂತೆ. ಈತನ ವಿರುದ್ಧ ಜನ ಎಷ್ಟೇ ದೂರು ಕೊಟ್ರೂ ಏನೂ ಪ್ರಯೋಜನ ಆಗ್ಲಿಲ್ವಂತೆ. ದೂರು ಕೊಟ್ಟವರನ್ನ ಬೆದರಿಸೋದು, ಅವರ ಕಾರ್ಡ್‌ ರದ್ದು ಮಾಡಿ ಹಿಂಸೆ ಕೊಡೋದ್ರಿಂದ ಜನ ರೋಸಿ ಹೋಗಿದ್ದಾರಂತೆ. ಹಾಗಾಗಿ ವಿಜಯಟೈಮ್ಸ್ ತಂಡ ಬಡ ಜನರ ನೋವಿಗೆ ದನಿಯಾಗಲು ನಿರ್ಧರಿಸಿ ಈತನ ವಿರುದ್ಧ ಕಾಯರ್ಾಚರಣೆ ಮಾಡಿದಾಗ ಅಭಿಷೇಕ್ ಅನ್ನುವವ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ. 2ಒ ಕೆ.ಜಿ ಕೊಡಬೇಕಾದ ಜಾಗದಲ್ಲಿ ಬರೀ 18 ಕೆ.ಜಿ ಕೊಡುತ್ತಿದ್ದ. 2 ಕೆ.ಜಿ ಗೋಧಿ ಬದಲು ಬರೀ ಒಂದೂವರೆ ಕೆ.ಜಿ ಮಾತ್ರ ಕೊಡ್ತಿದ್ದ. ಈತ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ರೂ ತನ್ನ ಮೋಸದ ಬಗ್ಗೆ ಸಮರ್ಥಿಸಿಕೊಳ್ಳಲು ಪ್ರಾರಂಭಿಸಿದ.

ಫಸ್ಟ್ ಟೈಮ್ ಏನೋ ತಪ್ಪಾಗಿದೆ. ನಾವು ಹಿಂದೆ ಯಾವತ್ತೂ ಈ ರೀತಿ ಮಾಡಿಲ್ಲ ಅಂತ ನಮ್ಮ ಹತ್ರ ಸುಳ್ಳು ಹೇಳಲು ಪ್ರಾರಂಭಿಸಿದ. ಆದ್ರೆ ವಿಜಯಟೈಮ್ಸ್ ಈತನ ಅಂಗಡಿಯ ಮೋಸದಾಟದ ಬಗ್ಗೆ ಹಿಂದೆಯೇ ರಹಸ್ಯ ಕಾರ್ಯಾಚರಣೆ ಮಾಡಿ ಪಕ್ಕಾ ಪ್ರೂಫ್ ರೆಡಿ ಮಾಡಿತ್ತು. ಈತ ಜನರಿಗೆ ತೂಕದಲ್ಲಿ ಯಾವ ರೀತಿ ಮೋಸ ಮಾಡ್ತಾನೆ, ಜನರನ್ನ ಯಾವ ಬೆದರಿಸ್ತಾನೆ ಅನ್ನೋದು ರಹಸ್ಯ ಕಾಯರ್ಾಚರಣೆಯಲ್ಲಿ ಬಟಾ ಬಯಲಾಗಿತ್ತು.

ಕಣ್ಣ ಮುಂದೆಯೇ ಅನ್ನ ಲೂಟಿ: ನ್ಯಾಯ ಬೆಲೆ ಅಂಗಡಿಯವರ ಅನ್ಯಾಯ ಯಾವ ಮಟ್ಟಕ್ಕೆ ಹೆಚ್ಚಿದೆ ಅಂದ್ರೆ ಬಡಜನರ ಕಣ್ಣ ಮುಂದೆಯೇ ಅವರ ಅನ್ನಕ್ಕೆ ಕನ್ನ ಹಾಕ್ತಿದ್ದಾರೆ ನೀಚರು. ಸಚಿವರ ಕ್ಷೇತ್ರದ ಅವರ ಮನೆ ಪಕ್ಕದಲ್ಲೇ ಇರೋ 325 ನಂಬರಿನ ನ್ಯಾಯ ಬೆಲೆ ಅಂಗಡಿಯಲ್ಲಿ ಬಯಲಾಯ್ತು ಮತ್ತೊಂದು ಕರ್ಮಕಾಂಡ. ಇಲ್ಲೂ ಅದೇ ತೂಕದಲ್ಲಿ ಮೋಸ. ತಕ್ಕಡಿ ಮೇಲೆ ಭಾರವಾದ ಡಬ್ಬ ಅಥವಾ ಬಕೆಟ್ ಇಟ್ಟು ಆಹಾರಧಾನ್ಯ ತೂಕ ಮಾಡ್ತಾರೆ. ಆದ್ರೆ ಆ ಡಬ್ಬದ ತೂಕದ ಆಹಾರ ಪದಾರ್ಥವನ್ನು ಹೆಚ್ಚುವರಿ ಕೊಡದೆ ಬಡ ಜನರಿಗೆ ಭರ್ಜರಿ ಮೋಸ ಮಾಡ್ತಿದ್ದಾರೆ. ಆದ್ರೆ ದುರಂತ ಅಂದ್ರೆ ಈ ನ್ಯಾಯ ಬೆಲೆ ಅಂಗಡಿಯವರು ಎಷ್ಟೇ ಅನ್ಯಾಯ ಮಾಡಿದ್ರೂ, ಜನ ಮಾತ್ರ ಭಯದಿಂದ ತುಟಿ ಬಿಚ್ಚಲ್ಲ ಯಾಕಂದ್ರೆ ಇವರ ವಿರುದ್ಧ ಮಾತಾಡಿದ್ರೆ ಕಾರ್ಡ್‌ ಕ್ಯಾನ್ಸಲ್ ಆಗುತ್ತೆ ಅನ್ನೋ ಭಯಇದೆ.

ಎಲ್ಲಾ ಕಡೆ ಬರೀ ಗೋಲ್ ಮಾಲ್: ಇನ್ನು ನಮ್ಮ ರಿಯಾಲಿಟಿ ಚೆಕ್ ಮುಂದುವರೆಸಿದ್ವಿ. ಕೆಲವೇ ಮೀಟರ್ ದೂರದಲ್ಲಿರೋ ರೇಷನ್ ಅಂಗಡಿ 310, ಶ್ರೀನಿವಾಸ ಸ್ಟೋರ್ಗೆ ಹೋದ್ವಿ. ಅಲ್ಲೂ ಇದೇ ಕತೆ. ಜನರಿಗೆ ಆಗ್ತಿರೋ ಅನ್ಯಾಯದ ಬಗ್ಗೆ ದನಿ ಎತ್ತಿದ್ರೆ ಕೆಲ ಪಟ್ಟ ಭದ್ರ ಹಿತಾಸಕ್ತಿಗಳು ನಮ್ಮನ್ನು ತಡೆಯುವ ಪ್ರಯತ್ನವನ್ನೂ ಮಾಡ್ತಿದ್ರು. ಜನ ತಮಗಾಗುತ್ತಿರೋ ಅನ್ಯಾಯದ ಬಗ್ಗೆ ಎಷ್ಟೇ ಹೇಳಿಕೊಂಡ್ರೂ ಅನ್ನಕ್ಕೆ ಕನ್ನ ಹಾಕುವವರಿಗೆ ಯಾವ ಕಾಳಜಿಯೂ ಇಲ್ಲ, ಜೊತೆಗೆ ನಾಚಿಕೆಯೂ ಇಲ್ಲ. ಕನ್ನ ಹಾಕುವವರಿಗೆ ಬ್ರೇಕ್: ಬಡವರ ಅನ್ನಕ್ಕೆ ಕನ್ನ ಹಾಕುವವರಿಗೆ ಹೇಗಾದ್ರೂ ಮಾಡಿ ಬ್ರೇಕ್ ಹಾಕಿಸ್ಬೇಕು. ನಮ್ಮ ಆಹಾರ ಇಲಾಖೆಯಂತು ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದೆ. ಅಲ್ಲಿನ ಅಧಿಕಾರಿಗಳೇ ಇವರನ್ನೆಲ್ಲಾ ಪೋಷಿಸುತ್ತಿರೋದ್ರಿಂದ ಈ ನ್ಯಾಯ ಬೆಲೆ ಅಂಗಡಿಯವರು ಬಡ ಜನರಿಗೆ ಇಷ್ಟೊಂದು ಅನ್ಯಾಯ ಮಾಡ್ತಿರೋದು. ಅದಕ್ಕಾಗಿ ಈ ಬಾರಿ ನಾವು ತೂಕ ಮತ್ತು ಮಾಪನ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿ ಮೋಸ ಮಾಡ್ತಿರೋ ನ್ಯಾಯ ಬೆಲೆ ಅಂಗಡಿಯವರ ಮೇಲೆ ದಾಳಿ ಮಾಡಲು ಮನವಿ ಮಾಡಿದ್ವಿ. ಮಾಪನ ಇಲಾಖೆ ನಿಯಂತ್ರಕರಾದ ಪಾತ ರಾಜು ಅವರು ತಮ್ಮ ಸಿಬ್ಬಂದಿಗೆ ಆದೇಶ ನೀಡಿ ದಾಳಿಗೆ ಅವಕಾಶ ಮಾಡಿಕೊಟ್ರು. ಉಪನಿಯಂತ್ರಕರಾದ ಮಂಜುನಾಥ್ ಅವರ ನೇತೃತ್ವದ ಅಧಿಕಾರಿಗಳ ತಂಡ ಜನರಿಗೆ ಮೋಸ ಮಾಡ್ತಿದ್ದ ನ್ಯಾಯ ಬೆಲೆ ಅಂಗಡಿಗಳ ಮೇಲೆ ದಾಳಿ ಮಾಡಿ ರೆಡ್ ಹ್ಯಾಂಡ್ ಆಗಿ ಅವರ ಮೋಸವನ್ನ ಪತ್ತೆ ಹಚ್ಚಿದ್ರು. 336, 325,310 ನ್ಯಾಯಬೆಲೆ ಅಂಗಡಿಯಲ್ಲಿ ಅನ್ಯಾಯ ನಡೀತಿರೋದು ಪಕ್ಕಾ ಆಗಿರೋದು ಗೊತ್ತಾಗಿ ಅವರ ವಿರುದ್ಧ ದೂರು ದಾಖಲಿಸಿದ್ರು. ಕಾನೂನು ಪ್ರಕಾರ ಕ್ರಮಕೈಗೊಳ್ಳೋದಾಗಿ ಉಪನಿಯಂತ್ರಕರಾದ ಮಂಜುನಾಥ್ ಹೇಳಿದ್ರು. ಈ ರೀತಿ ವಿಜಯಟೈಮ್ಸ್ ಕವರ್ಸ್ಟೋರಿ ತಂಡ ಹಾಗೂ ಮಾಪನ ಇಲಾಖೆ ಅಧಿಕಾರಗಳ ಜಂಟಿ ಕಾಯರ್ಾಚರಣೆ ಯಶಸ್ವಿಯಾಗಿ ನಡೆಯಿತು. ಮೋಸಗಾರರಿಗೆ ತಕ್ಕ ಶಾಸ್ತಿಯಾಯ್ತು. ಆದ್ರೆ ಇಂಥಾ ಅನ್ಯಾಯಕ್ಕೆ ಬ್ರೇಕ್ ಬೀಳ್ಬೇಕಾದ್ರೆ ಜನರೂ ಎಚ್ಚೆತ್ತುಕೊಳ್ಳಬೇಕು, ದೂರು ಕೊಡಬೇಕು, ಪ್ರಶ್ನಿಸ್ಬೇಕು ಅಂತಾರೆ ಅಧಿಕಾರಿಗಳು. ನ್ಯಾಯ ಬೆಲೆ ಅಂಗಡಿಗಳ ಅನ್ಯಾಯ ಇಡೀ ರಾಜ್ಯಾದ್ಯಂತ ನಡೀತಿದೆ. ಆದ್ರೆ ನಾವು ಇದರ ವಿರುದ್ಧ ಹೋರಾಡುತ್ತಲೇ ಇರಬೇಕು. ದನಿ ಎತ್ತುತ್ತಲೇ ಇರಬೇಕು ಇಲ್ಲದಿದ್ರೆ ಈ ಅನ್ಯಾಯ ನಿರಂತರವಾಗಿ ನಡೀತಾನೇ ಇರುತ್ತೆ.

Related News

ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ ಪತ್ತೆ : 2.48 ಕೋಟಿ ಮೌಲ್ಯದಷ್ಟು ಜಪ್ತಿ ಮಾಡಿದ ಸಿಸಿಬಿ ಪೊಲೀಸರು.
ಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ ಪತ್ತೆ : 2.48 ಕೋಟಿ ಮೌಲ್ಯದಷ್ಟು ಜಪ್ತಿ ಮಾಡಿದ ಸಿಸಿಬಿ ಪೊಲೀಸರು.

March 20, 2023
ಮದುವೆ ಬರೀ ಲೈಂಗಿಕ ಸಂತೋಷದ ಸಾಧನವಲ್ಲ, ಅದು ಒಂದು ಸಂಸ್ಕಾರ: ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ
ಪ್ರಮುಖ ಸುದ್ದಿ

ಮದುವೆ ಬರೀ ಲೈಂಗಿಕ ಸಂತೋಷದ ಸಾಧನವಲ್ಲ, ಅದು ಒಂದು ಸಂಸ್ಕಾರ: ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ

March 15, 2023
ChatGPT : ಮಾನವ ನಿರ್ಮಿತ ಕೃತಕ ಬುದ್ಧಿಮತ್ತೆ; ಮಾನವನಿಗೇ ಶಾಪವಾಗಲಿದೆಯಾ?
ಪ್ರಮುಖ ಸುದ್ದಿ

ChatGPT : ಮಾನವ ನಿರ್ಮಿತ ಕೃತಕ ಬುದ್ಧಿಮತ್ತೆ; ಮಾನವನಿಗೇ ಶಾಪವಾಗಲಿದೆಯಾ?

March 15, 2023
ಮತ್ತೆ ಜಾಬ್‌ ಶಾಕ್‌ ! ಫೇಸ್‌ಬುಕ್‌ ಒಡೆತನದ ಮೆಟಾದಿಂದ 10,000 ಸಾವಿರ ಉದ್ಯೋಗಿಗಳ ವಜಾಕ್ಕೆ ತಯಾರಿ
ಪ್ರಮುಖ ಸುದ್ದಿ

ಮತ್ತೆ ಜಾಬ್‌ ಶಾಕ್‌ ! ಫೇಸ್‌ಬುಕ್‌ ಒಡೆತನದ ಮೆಟಾದಿಂದ 10,000 ಸಾವಿರ ಉದ್ಯೋಗಿಗಳ ವಜಾಕ್ಕೆ ತಯಾರಿ

March 15, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.