Visit Channel

ರೈತರಿಗೊಂದು ಗುಡ್‌ ನ್ಯೂಸ್!

194998-farmers-npk

ಹಾಸನ, ನ.11: ದೇಶದಲ್ಲೆ ರಂಜಕಯುಕ್ತ ರಸಗೊಬ್ಬರಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಕೋರಮಂಡಲ್ ಇಂಟರ್ ನ್ಯಾಷನಲ್ ಲಿಮಿಟೆಡ್ ಕಂಪನಿಯು ತಮ್ಮ ಪ್ರಖ್ಯಾತ ರಸಗೊಬ್ಬರಗಳಾದ ಗ್ರೋಮೋರ್ ಪ್ಯಾರಂಫಾಸ್ ಮತ್ತು ಗ್ರೋಮೋರ್ 20-20-0-13 ರಸಗೊಬ್ಬರಗಳ ಗರಿಷ್ಠ ಮಾರಾಟ ಬೆಲೆಯಲ್ಲಿ ಪ್ರತಿ ಚೀಲದ ಮೇಲೆ 50 ರೂ. ಕಡಿತಗೊಳಿಸಿದೆ ಅಂದರೆ ಪ್ರತಿ ಟನ್ ಮೇಲೆ 1000 ರೂ. ಕಡಿತ.

ದೀಪಾವಳಿ ಹಬ್ಬದ ಮುಂಚಿತವಾಗಿ ಮೇಲೆ ತಿಳಿಸಿದ ರಸಗೊಬ್ಬರಗಳ ಮೇಲೆ ಪ್ರತಿ ಚೀಲಕ್ಕೆ 50 ರೂ. ಕಡಿತಗೊಳಿಸಿದ ಸುದ್ದಿಯನ್ನು ಬಿಡುಗಡೆ ಮಾಡಿದೆ. ಇಂದು ಅರಕಲಗೂಡು ತಾಲ್ಲೂಕಿನ ದೊಡ್ಡಬೆಮ್ಮತ್ತಿ ಗ್ರಾಮದಲ್ಲಿ ನಡೆದ ರೈತರ ಸಮಾರಂಭದಲ್ಲಿ ಬೆಲೆ ಕಡಿತಗೊಂಡ ರಸಗೊಬ್ಬರಗಳ ವಿವರಗಳನ್ನು ಜಿಲ್ಲೆಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಮೇಶ ಕುಮಾರ್ ಮತ್ತು ರೇಷ್ಮೇ ಇಲಾಖೆಯ ಸಹಾಯಕ ನಿರ್ದೇಶಕರಾದ ಸೀತಾರಾಮನ್ ಅವರು ರೈತರಿಗೆ ಮಾಹಿತಿ ನೀಡಿದರು.

ಇದೇ ಸಮಾರಂಭದಲ್ಲಿ ಕಂಪನಿಯ ವತಿಯಿಂದ ಜೋನಲ್ ವ್ಯವಸ್ಥಾಪಕರಾದ ಪ್ರಪುಲ್ ಅಣಿಗೊಳ್, ಸೇಲ್ಸ್ ಆಫೀಸರ್ ಆದ ತಿಪ್ಪೇಸ್ವಾಮಿ ಮತ್ತು ಬೇಸಾಯ ಶಾಸ್ತ್ರಜ್ಞರಾದ ಮಧುಸೂದನ್ ಅವರು ಭಾಗವಹಿಸಿ ಮುಸುಕಿನ ಜೋಳ ಮತ್ತು ಆಲೂಗೆಡ್ಡೆ ಬೆಳೆಯಲ್ಲಿ ಸಮತೋಲನ ಪೋಷಕಾಂಶಗಳ ಅನಿವಾರ್ಯತೆ ಮತ್ತು ಸಾವಯವ ಗೊಬ್ಬರಗಳ ಉಪಯೋಗಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

Latest News

Bilkis Bano
ದೇಶ-ವಿದೇಶ

ಬಿಲ್ಕಿಸ್ ಬಾನೊ ಪ್ರಕರಣ ; ಅಪರಾಧಿಗಳನ್ನು ಬಿಡುಗಡೆ ಮಾಡದಂತೆ 6,000 ಮಾನವ ಹಕ್ಕುಗಳ ಕಾರ್ಯಕರ್ತರು, ಇತಿಹಾಸಕಾರರಿಂದ ಸುಪ್ರೀಂಗೆ ಪತ್ರ!

ವಿದ್ವಾಂಸರು, ಚಲನಚಿತ್ರ ನಿರ್ಮಾಪಕರು, ಪತ್ರಕರ್ತರು ಮತ್ತು ಮಾಜಿ ಅಧಿಕಾರಗಳು ಈ ಪತ್ರಕ್ಕೆ ಸಹಿ ಹಾಕಿ, ಅಪರಾಧಿಗಳನ್ನು ಬಿಡುಗಡೆ ಮಾಡದಂತೆ ಕೋರಿದ್ದಾರೆ.

JK
ದೇಶ-ವಿದೇಶ

ಜಮ್ಮು-ಕಾಶ್ಮೀರದಲ್ಲಿ ಬೇರೆ ರಾಜ್ಯದವರು ಮತ ಚಲಾಯಿಸಬಹುದು ; ಕಣಿವೆ ರಾಜ್ಯದ ಹೊಸ ಚುನಾವಣಾ ನಿಯಮಗಳ ವಿವರ ಇಲ್ಲಿದೆ

ಜಮ್ಮು ಮತ್ತು ಕಾಶ್ಮೀರದಲ್ಲಿ ವಾಸಿಸುವ ಅಥವಾ ಕೆಲಸ ಮಾಡುವ ಸ್ಥಳೀಯರಲ್ಲದವರು ಸೇರಿದಂತೆ ಯಾವುದೇ ಭಾರತೀಯ ನಾಗರಿಕರು ತಮ್ಮ ಹೆಸರನ್ನು ಮತದಾನ ಪಟ್ಟಿಯಲ್ಲಿ ಸೇರಿಸಬಹುದು.

Dolo 650
ದೇಶ-ವಿದೇಶ

ಡೋಲೋ 650 ಮಾತ್ರೆ ಬರೆಯಲು ವೈದ್ಯರಿಗೆ 1000 ಕೋಟಿ ರೂ. ಲಂಚ! : ಸುಪ್ರೀಂಗೆ ದೂರು

ಡೋಲೋ 650 ಮಾತ್ರೆ ಉತ್ಪಾದಕ ಕಂಪನಿಯೂ ಅಂದಾಜು 1000 ಕೋಟಿ ರೂಪಾಯಿಗಳನ್ನು ವೈದ್ಯರಿಗೆ ನೀಡಿದೆ ಎಂದು ವೈದ್ಯಕೀಯ ಮಾರಾಟ ಪ್ರತಿನಿಧಿಗಳ ಸಂಘವು ಆರೋಪಿಸಿದೆ.

Kannada
ಮನರಂಜನೆ

2000-2010ರ ಸಾಲಿನ ಕನ್ನಡ ಚಿತ್ರರಂಗದ ಟಾಪ್ 12 ಚಿತ್ರಗಳು ಯಾವುವು ಗೊತ್ತಾ? ಇಲ್ಲಿದೆ ಓದಿ

ಆ ಕಾಲಕ್ಕೆ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದ್ದ ಈ ಸಿನಿಮಾ ಹಲವು ಕೇಂದ್ರಗಳಲ್ಲಿ ಯಶಸ್ವಿಯಾಗಿ 25 ವಾರಕ್ಕೂ ಅಧಿಕ ಸಮಯ ಪ್ರದರ್ಶನ ಕಂಡಿತ್ತು.