ಪಪ್ಪಾಯದಲ್ಲಿನ ರೋಗನಿರೋಧಕ ಶಕ್ತಿಯ ಪರಿಚಯವಾಗಿರುವುದು ಡೆಂಗ್ಯೂ ಜ್ವರ ಇಡೀ ದೇಶವನ್ನು ಕಾಡಿದಾಗ ಅಂತಲೇ ಹೇಳಬಹುದು. ರಕ್ತದಲ್ಲಿ ಪ್ಲೇಟ್-ಲೆಟ್‌ಗಳ ಸಂಖ್ಯೆ ಕಡಿಮೆಯಾಗಿ ಜನ ಕಂಗಾಲಾಗಿದ್ದಾಗ ಪಪ್ಪಾಯ ಸಂಜೀವಿನಿಯಂತೆ ಕಾಣಿಸಿದೆ. ಪಪ್ಪಾಯದ ಎಲೆಯಿಂದ ತಯಾರಿಸಿದ ಜ್ಯೂಸ್ ಕುಡಿದವರೆಲ್ಲಾ ಡೆಂಗ್ಯು ಜ್ವರದಿಂದ ಮುಕ್ತರಾದರು. ಪ್ರಸ್ತುತ ಕಾಲಘಟ್ಟದಲ್ಲಿ ದೇಶವನ್ನೇ ಕಾಡುತ್ತಿರುವ ಅತಿದೊಡ್ಡ ಸಮಸ್ಯೆಯೆಂದರೆ ಕೊರೋನಾ ವೈರಸ್. ಇದು ರೋಗನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ ಅಂಟಿಕೊಳ್ಳುತ್ತದೆ. ಆದ್ದರಿಂದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ಪಪ್ಪಾಯವೂ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಬಲ್ಲದು. ಆದ್ದರಿಂದ ಪಪ್ಪಾಯದ ಸೇವನೆ ಈಗಿನ ಕಾಲಘಟ್ಟದಲ್ಲಿ ಅತ್ಯವಶ್ಯಕವಾಗಿದೆ.
ಪಪ್ಪಾಯದಿಂದ ಇರುವ ಅನುಕೂಲಗಳು ಹಲವು. ಪಪ್ಪಾಯ ಹಣ್ಣಿನಲ್ಲಿ ಕೊಬ್ಬು ಮತ್ತು ಕೊಲೆ ಸ್ಟ್ರಾಲ್‌ನ ಅಂಶವಿಲ್ಲ. ಹಾಗಾಗಿ ಇದನ್ನು ಎಲ್ಲರೂ ಸೇವಿಸಬಹುದು. ಪಪ್ಪಾಯ ಕಾಯಿಯ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಕುಡಿದರೆ ಜಂತು ಹುಳು ನಾಶವಾಗುತ್ತದೆ. ಪಪ್ಪಾಯ ಕಾಯಿಯ ರಸವನ್ನು ಹಚ್ಚುವುದರಿಂದ ಚರ್ಮದ ಸಮಸ್ಯೆಗಳು ಪರಿಹಾರವಾಗುತ್ತವೆ. ದಿನವೂ ಊಟದ ನಂತರ ಪಪ್ಪಾಯ ಹಣ್ಣು ಸೇವನೆಯಿಂದ ಮಲಬದ್ಧತೆ ನಿವಾರಣೆ ಯಾಗುತ್ತದೆ. ಮೂತ್ರಕೋಶದಲ್ಲಿ ಕಲ್ಲುಗಳು ಉಂಟಾಗುವುದೂ ತಪ್ಪುತ್ತದೆ.