ಲಕ್ಷ ಲಕ್ಷದ ಟೊಮ್ಯಾಟೋ ತೋಟಕ್ಕೆ ಬೆಂಕಿ ಇಟ್ರು ರೈತರು

ಬಾಗಲಕೋಟೆಯ ಜಮಖಂಡಿ ಗ್ರಾಮದ ರೈತರು ಹತ್ತಾರು ಎಕರೆಯಲ್ಲಿ ಬೆಳೆದಿರುವ ಟೊಮೆಟೋ ಬೆಳೆಗೆ ತಮ್ಮ ಕೈಯಾರೆ ಬೆಂಕಿ ಇಟ್ಟಿದ್ದಾರೆ. ಕೊರೋನಾ ನಂತ್ರ ಇಡೀ ಮಾರುಕಟ್ಟೆ ಕುಸಿದಿದೆ. ಕೃಷಿ ಉತ್ಪನ್ನಗಳಿಗೂ ಬೇಡಿಕೆ ಇಲ್ಲದೆ ದರ ಕುಸಿದಿದೆ ಇದ್ರಿಂದ ರೈತರು ಬೆಳೆದ ಬೆಳೆಗೆ ಬೆಲೆಯೇ ಸಿಗುತ್ತಿಲ್ಲ. ಜೊತೆಗೆ ಮಧ್ಯವರ್ತಿಗಳ ಕಾಟ ತಡೆಯಲಾಗದೆ ರೈತರು ತಮ್ಮ ಕೈಯಾರೆಯೇ ತಾವು ಬೆಳೆದ ಬೆಳೆಗೆ ಇಂದು ಬೆಂಕಿ ಇಟ್ಟಿದ್ದಾರೆ. 

	ರೈತರು ಸಾಲ ಮಾಡಿ ಕಷ್ಟಪಟ್ಟು ದುಡಿದು ಟೊಮ್ಯಾಟೋ ಬೆಳೆದಿದ್ರು. ಆದ್ರೆ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದ್ರೆ, ವ್ಯಾಪಾರಿಗಳು ಒಂದು ಕೆ.ಜಿ ಟೊಮ್ಯಾಟೋ ಬರೀ  5 ರೂಪಾಯಿ ಖರೀದಿಸುತ್ತಿದ್ದಾರೆ. ಆದ್ರೆ ಅದನ್ನ ಜನರಿಗೆ 20 ರೂಪಾಯಿಗೆ  ಮಾರುತ್ತಿದ್ದಾರೆ. ಪ್ರತಿ ಮಾರುಕಟ್ಟೆಗಳಲ್ಲೂ ಇದೇ ಸಮಸ್ಯೆಯಾಗುತ್ತಿದೆ. ಸರ್ಕಾರದಿಂದ ಟೊಮ್ಯಾಟೋ ಬೆಳೆಗಾರರಿಗೆ ಯಾವುದೇ ಬೆಲೆ ನಿಗದಿಯಾಗಿಲ್ಲ. ಅಲ್ಲದೆ ನಷ್ಟಕ್ಕೆ ಪರಿಹಾರವೂ ಕೊಡ್ತಿಲ್ಲ. ರೈತರು ಮೂರು ತಿಂಗಳು ಕಷ್ಟ ಪಟ್ಟು ಬೆಳೆ ಬೆಳೆದು ನಷ್ಟ ಅನುಭವಿಸಿ ಕೈಸುಟ್ಟುಕೊಂಡ್ರೆ, ವ್ಯಾಪಾರಸ್ಥರು ಬರೀ ಒಂದು ದಿನದಲ್ಲಿ ಭಾರೀ ಲಾಭ ಗಳಿಸಿಕೊಂಡು ಹೋಗ್ತಾರೆ. ನಮಗೆ ಭಾರೀ  ನಷ್ಟ ಆಗಿರೋ ಕಾರಣ ನಮ್ಮ ಹೊಲದಲ್ಲೇ ಟೊಮ್ಯಾಟೋ ಸುಟ್ಟಿ ಹಾಕಿದ್ದೇವೆ.

       ಬರೀ ಟೊಮ್ಯಾಟೋ ರೈತರಿಗೆ ಮಾತ್ರವಲ್ಲ ಎಲ್ಲಾ ರೈತರಲ್ಲು ಇದೇ ಸಮಸ್ಯೆ ಕಾಡುತ್ತಿದೆ. 3-4 ತಿಂಗಳು ಕಷ್ಟ ಪಟ್ಟು ಬೆಳೆದ ಬೆಳೆಗಳನ್ನು 3-4 ಗಂಟೆಯಲ್ಲಿ ಮಾರಿ ತಾವೇ ಹೆಚ್ಚು ಲಾಭ ಪಡೆಯುತ್ತಿದ್ದಾರೆ. ರೈತರು ನೇರವಾಗಿ ಮಾರಟ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಮಧ್ಯವರ್ತಿಗಳು ಹಾಗು ವ್ಯಾಪರಸ್ಥರ ಮಧ್ಯೆ ರೈತರು  ಮೋಸ ಹೋಗುತ್ತಿದ್ದಾರೆ.  

Latest News

ಮಾಹಿತಿ

ITR ಸಲ್ಲಿಕೆ ಗಡುವು ಜುಲೈ 31 ಅಂತ್ಯ ; ದಂಡ ಶುಲ್ಕವಿಲ್ಲದೆ ಯಾರೆಲ್ಲಾ ITR ಸಲ್ಲಿಸಬಹುದು ಗೊತ್ತಾ?

ಗಡುವು ಮುಗಿದರೂ ಯಾರೆಲ್ಲ ದಂಡ ಶುಲ್ಕವಿಲ್ಲದೆ ಐಟಿಆರ್‌ ಸಲ್ಲಿಸಬಹುದು, ಇದಕ್ಕೆ ಸಂಬಂಧಿಸಿದಂತೆ ನಿಯಮ ಏನು ಹೇಳುತ್ತದೆ ಎನ್ನುವ ವಿವರ ಇಲ್ಲಿದೆ. ಮುಂದೆ ಓದಿ,

ದೇಶ-ವಿದೇಶ

“ನನ್ನ ಮಕ್ಕಳಿಗೆ ಆಹಾರ ನೀಡಬೇಕೇ? ಅಥವಾ ಅವರನ್ನು ಕೊಲ್ಲಬೇಕೇ?”: ಬೆಲೆ ಏರಿಕೆ ಬಗ್ಗೆ ಪಾಕ್ ಮಹಿಳೆ ಆಕ್ರೋಶ!

ನನ್ನ ಮಕ್ಕಳಿಗೆ ಹಾಲು ಮತ್ತು ಔಷಧಿಗಳನ್ನು ಖರೀದಿಸುವುದು, ನನ್ನ ಮಕ್ಕಳಿಗೆ ಆಹಾರ ನೀಡುವುದು ಯಾವುದು ನನ್ನಿಂದ ಸಾಧ್ಯವಾಗುತ್ತಿಲ್ಲ.

ಮಾಹಿತಿ

ಬುದ್ದಿವಂತರು ಜಗಳವನ್ನು ಹೇಗೆ ತಪ್ಪಿಸುತ್ತಾರೆ ಗೊತ್ತೇ? ; ಈ ಅಚ್ಚರಿ ಮಾಹಿತಿ ಓದಿ

ಕೆಟ್ಟ ವಾಗ್ವಾದವನ್ನು ತಡೆಯುವುದು ಹೇಗೆ ಮತ್ತು ಅದನ್ನು ಸರಿಯಾಗಿ ರೀತಿಯಲ್ಲಿ ಹೇಗೆ ನಿಭಾಯಿಸಬಹುದು ಎನ್ನುವುದಕ್ಕಾಗಿ ಕೆಲವು ಉಪಾಯಗಳು ಇಲ್ಲಿವೆ ನೋಡಿ.

ರಾಜಕೀಯ

ನಿತೀಶ್‌ ಕುಮಾರ್‌ ಪ್ರಧಾನಿಯಾಗುವ ಭ್ರಮೆಯಲ್ಲಿದ್ದಾರೆ, ಅದಕ್ಕಾಗಿ ವಿಪಕ್ಷಗಳ ಕೂಟ ಸೇರಿದ್ದಾರೆ : ಬಿಜೆಪಿ

ಇದು ‘ಆಯಾ ರಾಮ್, ಗಯಾ ರಾಮ್ʼ ಕಾಯಿಲೆಗೆ ಉದಾಹರಣೆ. ಹಡಗು ಜಿಗಿದು ದಾಖಲೆ ನಿರ್ಮಿಸಿದ್ದಾರೆ. ಅವರು ಉನ್ನತ ಕುರ್ಚಿಗೆ ಹಾತೊರೆಯುತ್ತಿದ್ದಾರೆ.