ಕರೋನಾ ಸಂಕಷ್ಟ ಎಂದು ಮುಗಿಯುತ್ತದೆ ಯಾರಿಗೂ ಗೊತ್ತಿಲ್ಲ. ಸದ್ಯಕ್ಕೆ ಈ ರೋಗಕ್ಕೆ ಯಾವುದೇ ಲಸಿಕೆ ಕೂಡ ಕಂಡುಹಿಡಿದಿಲ್ಲ. ಲಸಿಕೆ ಸಿಗುವವರೆಗೆ ಜನರೆ ಅಂತರ ಕಾಯ್ದುಕೊಂಡು, ಮಾಸ್ಕ್ ಹಾಕಿ ಕೊಂಡು ಮುನ್ನೆಚ್ಚರಿಕೆಗಳನ್ನು ಅನುಸರಿಸಿಕೊಂಡು ಕರೋನಾ ವೈರೆಸ್‍ನಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ.
ಜಗತ್ತನ್ನೆ ಕಾಡುತ್ತಿರುವ ಈ ಕೋವಿಡ್-19 ವೈರಸ್‍ಅನ್ನು ಲಸಿಕೆ ಇಲ್ಲದೆ ಕೊನೆ ಮಾಡಬಹುದು ಎಂದು ಇಟಲಿಯ ಖ್ಯಾತ ಹಾಗೂ ತಜ್ಞ ವೈದ್ಯರು ತಿಳಿಸಿದ್ದಾರೆ.
ಕೋವಿಡ್-19 ವೈರಸ್‍ಗೆ ಲಸಿಕೆಗಿಂತ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ. ಜತೆಗೆ ಯೋಗ, ವ್ಯಾಯಾಮ, ಉತ್ತಮ ಆಹಾರ, ರೋಗನಿರೋಧಕ ಹೆಚ್ಚಿಸುವ ಆಹಾರ ಕ್ರಮಗಳನ್ನು ಅನುಸರಿಸಿದರೆ ಈ ರೋಗದಿಂದ ದೂರವಿರಬಹುದು ಎಂದು ತಜ್ಞರು ಹೇಳುತ್ತಾರೆ. ಕರೋನಾ ವೈರಸ್‍ಅನ್ನು ಸುಲಭವಾಗಿ ಸದ್ಯಕ್ಕೆ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಸದ್ಯಕ್ಕೆ ಎಚ್ಚರಿಕೆಯಿಂದ ನಾವುಗಳೆ ವೈರಸ್‍ನಿಂದ ರಕ್ಷಿಸಿಕೊಳ್ಳಬೇಕಾಗಿದೆ.
ಇಟಲಿ ತಜ್ಞರು ಹೇಳುವ ಪ್ರಕಾರ ಕರೋನಾ ಮೊದಲಿಗೆ ಎಚ್ಚಿಗೆ ಅಪಾಯಕಾರಿ ಆಗಿತ್ತು ಆದರೆ ದಿನ ಕಳೆಯುತ್ತಿದಂತೆ ಇದರ ತೀವ್ರತೆ ಕಡಿಮೆ ಆಗುತ್ತಿದೆ ಆದ್ದರಿಂದ ಕರೋನಾ ವೈರಸ್ ನಿಗ್ರಹಕ್ಕೆ ಲಸಿಕೆಯೇ ಬೇಕು ಎಂದೇನು ಇಲ್ಲ ಎಂದಿದ್ದಾರೆ.
ಇಲ್ಲಿವರೆಗೆ ಕರೋನಾ ದಿಂದ ಜಗತ್ತಿನಲ್ಲಿ 4.65 ಲಕ್ಷ ಜನರನ್ನು ಬಲಿ ಪಡೆದಿದೆ. ಈ ವೈರಸ್ ಅಂತ್ಯಕಾಲ ಸಮೀಪದಲ್ಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ತಜ್ಞ ವೈದ್ಯ ಪ್ರೊ.ಮ್ಯಾಟ್ಯೋ ಬಸ್ಸೆಟ್ಟಿ ಹೇಳಿವ ಪ್ರಕಾರ ಲಾಕ್‍ಡೌನ್ ಕಾರಣದಿಂದಾಗಿ ಜನರು ಪೂರ್ಣ ಪ್ರಮಾಣ ವೈರಸ್ ದಾಳಿ ಬದಲು ಲಘು ಸೋಂಕಿಗೆ ಒಳಗಾಗುತ್ತಿದ್ದಾರೆ ಇದರಿಂದ ವೈರಸ್ ತನ್ನಷ್ಟಕ್ಕೆ ನಿರ್ನಾಮಾವಾಗುವ ಸಮಯ ಅತ್ತಿರ ಬಂದಿದೆ ಎಂದುದ್ದಾರೆ.
ಜತೆಗ ಮೊದಲು ವಯಸ್ಸಾದವರು ಕರೋನಾಗೆ ಬಹಳ ಬೇಗ ಬಲಿಯಾಗುತ್ತಿದ್ದರು. ಈಗ ವಯಸ್ಸಾದವರು ಕೂಡ ಸೋಂಕಿನಿಂದ ಗುಣಮುಖರಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಮೊದಲಿಗೆ ಹೋಲಿಸಿದರೆ ವೈರಸ್ ತನ್ನ ತೀವ್ರತೆಯನ್ನು ಕಳೆದುಕೊಂಡು ನಿಶಕ್ತವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನಿಶಕ್ತವಾಗುತ್ತದೆ ಎಂದು ಹೇಳಿದ್ದಾರೆ. ಈ ಹಿಂದೆ ಜಿನೋವಾದ ಸ್ಯಾನ್ ಮಾರ್ಟಿನೋ ಆಸ್ಪತ್ರೆ ವೈರಸ್ ಬಗ್ಗೆ ಈ ಮಾಹಿತಿಯನ್ನು ಮಂಡಿಸಿತ್ತು ಆದರೆ ಅಂದು ಈ ವಾದ್ಕಕೆ ಟೀಕೆಗಳು ಕೇಳಿಬಂದಿತ್ತು. ಆದರೆ ಇಂದು ಆ ವಾದಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ವಿಶ್ಲೇಷಿಸಲಾಗಿದೆ.
ಈ ವಾದದ ನಡವೆ ಕೊಲಂಬಿಯಾ ವಿಶ್ವವಿದ್ಯಾಲಯದ ಡಾ.ಎಂಜೆಲಾ ರಾಮ್ಸುಸ್ಸೆನ್ ಕರೋನಾ ವೈರಸ್ ಶಕ್ತಿ ಕುಂದುತ್ತಿಲ್ಲ ಎಂದು ಹೇಳುತ್ತಿದ್ದಾರೆ ಇದಕ್ಕೆ ಯಾವುದೆ ಆಧಾರ ಸಿಕ್ಕಿಲ್ಲ. ಜತೆಗೆ ಕೇವಲ ಗಂಟಲು ದ್ರವ್ಯದ ಮಾದರಿ ಆಧರಿಸಿಕೊಂಡು ತರ್ಕ ಮಾಡುವುದು ಸರಿಯಲ್ಲ. ಸರಿಯಾದ ಪರೀಕ್ಷೆಗಳನ್ನು ನಡೆಸಿ ಸತ್ಯ ತಿಳಿಸಯಬೇಕು. ಸರಿಯಾದ ಸಾಕ್ಷಿಗಳು ಇರಬೇಕು ಎಂದು ಗ್ಲಾಸ್ಗೋ ವಿಶ್ವವಿದ್ಯಾಯದ ಡಾ. ಆಸ್ಕರ್ ಮ್ಯಾಕ್‍ಲೀನ್ ಹೇಳುತ್ತಾರೆ.