ಕೋಲಾರ, ಸೆ.12: ಗ್ರಾಮಪಂಚಾಯತ್ ಸದಸ್ಯನ ಸಹೋದರ ಲಾಂಗ್ ಹಿಡಿದು ಗ್ರಾಮಸ್ಥರನ್ನು ಬೆರಿಸಿದ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಸಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕುಪೇಂದ್ರ ಎಂಬವರೊಂದಿಗೆ ಕಾಮಗಾರಿ ಟೆಂಡರ್ ವಿಚಾರ ಜಗಳವಾಡಿ ಗಲಾಟೆ ಮಾಡಿಕೊಂಡಿದ್ದ ಬಂಗಾರಪೇಟೆಯ ಮಾಗೊಂದಿ ಗ್ರಾಮಪಂಚಾಯತ್‍ನ ಸೋಮಶೇಖರ್ ರೆಡ್ಡಿಯವರ ಸಹೋದರ ಸಂತೋಷ್ ರೆಡ್ಡಿ, ಲಾಂಗ್ ಹಿಡಿದು ಓಡಾಡಿ ಕೊಲೆ ಬೆದರಿಕೆ ಹಾಕಿದ್ದಾರೆ. ಲಾಂಗ್ ಹಿಡಿದು ಗ್ರಾಮದ ರಸ್ತೆಗಳಲ್ಲಿ ಬೆದರಿಕೆ ಹಾಕಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆ ಕಾಮಗಾರಿ ಗುತ್ತಿಗೆ ವಿಚಾರವಾಗಿ ಸಂತೋಷ್ ಮತ್ತು ಕುಪೇಂದ್ರ ನಡುವೆ ಗಲಾಟೆಯಾಗಿತ್ತು. ಈ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.