ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಕೊರೋನಾ ಸೋಂಕು ಜಾಸ್ತಿಯಾಗ್ತಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕಛೇರಿ ಸಿಬ್ಬಂದಿಗೆ ಕೊರೋನಾ ಪಾಸಿಟಿವಿ ಕಂಡುಬಂದಿದೆ. ಈ ಹಿನ್ನಲೆ ವಿಕಾಸ ಸೌಧದ ೪ ನೇ ಮಹಡಿಯಲ್ಲಿರೊ ರೇಣುಕಾಚಾರ್ಯ ಅವರ ಕೊಠಡಿಯನ್ನು ಸೀಲ್ ಡೌನ್ ಮಾಡಲಾಗಿದೆ. ವಿಕಾಸಸೌಧದಲ್ಲಿ ಈವರೆಗೆ ೬ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಕೋವಿಡ್ ೧೯ ಅಟ್ಟಹಾಸ ದಿನದಿಂದ ದಿನಕ್ಕೆ ಜಾಸ್ತಿಯಾಗ್ತಾ ಇದೆ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಜೊತೆ ಸಾವಿನ ಸಂಖ್ಯೆಯಲ್ಲೂ ಏರಿಕೆ ಕಾಣ್ತಾ ಇದೆ. ಇದೆಲ್ಲದರ ನಡುವೆ ಕಮ್ಯುನಿಟಿ ಸ್ಪ್ರೆಡ್ ಶುರುವಾಗಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ