ಮೈಸೂರು, ನ. 5: ವಿದ್ಯುತ್ ಕಂಬದಿಂದ ಬದ್ದ ಪರಿಣಾಮ ಮೂವರು ನೌಕರರು ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಬನ್ನೂರಿನಲ್ಲಿ ನಡೆದಿದೆ. ಬನ್ನೂರು ವಿಭಾಗೀಯ ಚೆಸ್ಕಾಂನ ತ್ಯಾಗರಾಜು, ಮಹೇಂದ್ರ, ಮಲ್ಲೇಶ್ ಗಾಯಗೊಂಡ ಕೆಇಬಿ ನೌಕರರು.
ಕೆಲಸ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಬ್ಯಾಟರಿಯಿಂದ ರಿಟರ್ನ್ ಆಗಿದೆ. ಈ ವೇಳೆ ನೌಕರರು ಕಂಬದಿಂದ ಕೆಳಗೆ ಬಿದ್ದಿದ್ದಾರೆ. ಪರಿಣಾಮವಾಗಿ ಮೂವರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.