ಜೂನ್ ೨೯ ರಂದು ವಿಧಾನಪರಿಷತ್ ಚುನಾವಣೆ ನಡೆಯಲಿದೆ.ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ಚುನಾಯಿತರಾಗುವ ಏಳು ಸದಸ್ಯರ ಆಯ್ಕೆಗೆ ಚುನಾವಣೆ ಹಾಲಿ ಸದಸ್ಯರಾದ ನಸೀರ್ ಅಹ್ಮದ್, ಜಯಮ್ಮ, ಎಂ.ಸಿ.ವೇಣುಗೋಪಾಲ್, ಎನ್.ಎಸ್.ಬೋಸ್ ರಾಜು, ಎಚ್.ಎಂ.ರೇವಣ್ಣ, ಟಿ.ಎ.ಶರವಣ, ಡಿ.ಯು. ಮಲ್ಲಿಕಾರ್ಜುನ ಇವರ ಸದಸ್ಯತ್ವದ ಅವಧಿ ಜೂನ್ ೩೦ ಕ್ಕೆ ಕೊನೆಗೊಳ್ಳುತ್ತೆ ಈ ಹಿನ್ನಲೆ ಇದೀಗ ಚುನಾವಣೆಗೆ ಎಲ್ಲಾ ತಯಾರಿ ನಡೆದಿದೆ.
ಅಂದಹಾಗೆ ಜೂನ್ ೨೯ರಂದು ಬೆಳಗ್ಗೆ ೯ ಗಂಟೆಯಿAದ ಸಂಜೆ ೪ ಗಂಟೆ ತನಕ ಮತದಾನ ನಡೆಯಲಿದ್ದು ಮತ್ತೆ ಚುನಾವಣೆ ಮೂಲಕ ಸದಸ್ಯರನ್ನು ಆಯ್ಕೆ ಮಾಡಲು ವೇಳಾ ಪಟ್ಟಿ ಪ್ರಕಟಗೊಂಡಿದೆ. ಇನ್ನು ಮತದಾನದ ದಿನವೇ ಸಂಜೆ ೫ ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದೆ.ಇನ್ನು ಇದಕ್ಕೆ ಸಂಬAಧಪಟ್ಟAತೆ ಜೂನ್ ೧೧ರಂದು ಅಧಿಸೂಚನೆ ಪ್ರಕಟವಾಗಲಿದೆ. ಜೂನ್ ೧೮ರಂದು ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿರುತ್ತದೆ. ೧೯ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂನ್ ೨೨ರಂದು ನಾಮಪತ್ರ ಹಿಂಪಡೆಯಲು ಕೊನೆದಿನವಾಗಿರುತ್ತದೆ.. ಈ ಹಿನ್ನಲೆ ವಿಶ್ವನಾಥ್, ಎಂಟಿಬಿ ನಾಗರಾಜ್, ಶಂಕರ್ ಮತ್ತೆ ವಿಧಾನ ಮಂಡಲ ಪ್ರವೇಶಿಸುವುದಕ್ಕೆ ಈ ಮೂಲಕ ವೇದಿಕೆ ಸಜ್ಜು ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ.