ಕೊರೋನಾ ವೈರಸ್ ದಿನದಿಂದ ದಿನಕ್ಕೆ ತನ್ನ ಛಾಪನ್ನು ಹೆಚ್ಚಿಸುತ್ತಿದೆ. ಇತ್ತ ರಾಜ್ಯದಲ್ಲಿ ಮಿತಿ ಮೀರಿ ಕೊರೋನಾ ಸೋಂಕಿತರ ಜೊತೆ ಸಾವಿನ ಸಂಖ್ಯೆಯು ಹೆಚ್ಚುತ್ತಿದೆ. ಇದೀಗ ಶಕ್ತಿ ಕೇಂದ್ರ ವಿಧಾನ ಸೌಧದಲ್ಲೂ ಕೊರೋನಾ ಭೀತಿ ಹೆಚ್ಚಿದೆ.ಈಗಾಗಲೇ ವಿಧಾನ ಸೌಧದಲ್ಲಿ ಐದಾರು ಕೊರೋನಾ ಕೇಸ್ ಪತ್ತೆಯಾಗಿರೋ ನಿಟ್ಟಿನಲ್ಲಿ ಸಚಿವಾಲಯ ಮುಂಜಾಗೃತ ಕ್ರಮವನ್ನು ಕೈಗೊಂಡಿದೆ.
ಈ ಹಿನ್ನಲೆ ಇಡೀ ವಿಧಾನ ಸೌಧವನ್ನು ಸೋಮವಾರ ಸ್ಯಾನಿಟೈಸ್ ಮಾಡಲು ಮುಂದಾಗಿದ್ದಾರೆ . ಇದಕ್ಕಾಗಿ ಶಕ್ತಿ ಕೇಂದ್ರ ಸಚಿವಾಲಯದ ಸಿಬ್ಬಂದಿಯ ಕೆಲಸದ ಅವಧಿಯಲ್ಲಿ ಬದಲಾವಣೆ ಮಾಡಲಾಗಿದೆ.
ಬೆಳಗ್ಗೆ ೧೦ ಗಂಟೆಗೆ ಸಚಿವಾಲಯಕ್ಕೆ ಸ್ಯಾನಿಟೈಸ್ ಮಾಡಲು ತೀರ್ಮಾನಿಸಿದ್ದು ಸಚಿವಾಲಯದ ಕಾರ್ಯದರ್ಶಿಯಿಂದ ಎಲ್ಲಾ ನೌಕರರಿಗೆ ಮಧ್ಯಾಹ್ನ ೧೨ ಗಂಟೆಗೆ ಕೆಲಸಕ್ಕೆ ಹಾಜರಾಗುವಂತೆ ವಾಟ್ಸಾಪ್ ಮೂಲಕ ಸಂದೇಶವನ್ನು ರವಾನಿಸಿದ್ದಾರೆ.