ಜಪಾನ್: ಜಪಾನ್ ಅತ್ಯಾಧುನಿಕ ತಂತ್ರಜ್ಞಾನಗಳ ಅನ್ವೇಣೆಗಳಲ್ಲಿ ಯಾವಾಗ್ಲೂ ಒಂದು ಹೆಜ್ಜೆ ಮುಂದಿರುತ್ತೆ. ಜಪಾನಿನ ನವೋದಯ ಸಂಸ್ಥೆಯೊಂದು ಅತ್ಯಾಧುನಿಕ ತಂತ್ರಜ್ಞಾನದಿಂದ ಹಾರುವ ಅತ್ಯಂತ ಪುಟ್ಟ ಕಾರೊಂದನ್ನು ಅನ್ವೇಷಿಸಿದೆ. ಈ ಕಾರಿನ ಪ್ರಥಮ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ.
ಪುಟ್ಟ ಹೆಲಿಕಾಪ್ಟರ್ ಮತ್ತು ಕಾರಿನ ಸಂಯೋಜನೆಯಂತಿರುವ ಈ ಹಾರುವ ಫ್ಲೈಯಿಂಗ್ ಕಾರಿನ ಚೊಚ್ಚಲ ಹಾರಾಟದ ವೀಡಿಯೋವನ್ನು ಬಿಡುಗಡೆ ಮಾಡಿದೆ. ಉದಯರವಿ ನಾಡು ಜಪಾನ್ ರಾಜಧಾನಿ ಟೋಕಿಯೋದ ಸ್ಕೈ ಡ್ರೈವ್ ಸಂಸ್ಥೆ ಎಸ್ ಡಿ-03 ಮಾದರಿಯ ಹಾರುವ ಕಾರನ್ನು ಟೆಸ್ಟ್ ಸೈಟ್ ನಲ್ಲಿ ಪರೀಕ್ಷೆಗೆ ಒಳಪಡಿಸಿದೆ.
ಈ ಕಾರು ಭೂಮಿಯಿಂದ ಮೇಲೇರಿ ಕೇವಲ ನಾಲ್ಕು ನಿಮಿಷಗಳಲ್ಲಿ ಯಶಸ್ವೀ ಹಾರಾಟ ನಡೆಸಿದೆ. 4 ಮೀಟರ್ ಉದ್ದ ಮತ್ತು 4 ಮೀಟರ್ ಅಗಲ ಇರುವ ಈ ಪ್ಲೈಯಿಂಗ್ ಕಾರು 2 ಮೀಟರ್ ಎತ್ತರವಿದೆ. ಪಾರ್ಕಿಂಗ್ ಪ್ರದೇಶದಲ್ಲಿ ಎರಡು ಕಾರುಗಳು ನಿಲ್ಲುವಷ್ಟು ಸ್ಥಳದಲ್ಲಿ ಇಳಿಯಬಹುದಾದ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ