vijaya times advertisements
Visit Channel

ವಿಶ್ವ ಸಂಸ್ಥೆ ವಾರ್ಷಿಕೋತ್ಸವ :ಮಹಾ ಅಧಿವೇಶನದಲ್ಲಿ ಪ್ರಧಾನಿ ಭಾಷಣ:

5ef4851d90fe356f0d07c8cd_o_U_v2

ವಿಶ್ವ ಸಂಸ್ಥೆ ನ್ಯೂಯಾರ್ಕ್:  ಸೆ.26- ಪ್ರಮುಖ ಜಾಗತಿಕ ಕ್ರಮ,ವಿಶ್ವದ “ಮನುಕುಲದ ಹಿತರಕ್ಷಣೆಗಾಗಿ ಪಂಚತಂತ್ರಗಳ ಪ್ರತಿಪಾದನೆ ಮತ್ತು ಜಗತ್ತು ಎದುರಿಸುತ್ತಿರುವ ಸಮಸ್ಯೆ ನಿವಾರಣೆಗೆ ಸಮಗ್ರವಾದ ಸುಧಾರಣಾ ಯೋಜನೆ”- ಇದು ಇಂದಿನ(26-9-2020) ನರೇಂದ್ರ ಮೋದಿಯವರ ವಿಶ್ವ ಸಂಸ್ಥೆಯ 75ನೇ ವಾರ್ಷಿಕೋತ್ಸವದ ಮಹಾಧಿವೇಶನದಲ್ಲಿ ಭಾಷಣ ಮಾಡಲಿರುವ ಪ್ರಮುಖ ವಿಷಯವಾಗಿದೆ.

193 ಸದಸ್ಯ ರಾಷ್ರಗಳ ಸಂಯುಕ್ತ ವೇದಿಕೆಯಾದ ವಿಶ್ವ ಸಂಸ್ಥೆಯ 75ನೇ ಸಂಸ್ಥಾಪನಾ ದಿನವಾದ 26-9-2020 ಸಂಜೆ ಅಮೇರಿಕಾದ ನ್ಯೂಯಾರ್ಕಿನಲ್ಲಿ( ಯುಎನ್ಜಿಎ) ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡಲಿದ್ದಾರೆ.

ವಿಶ್ವ ಸಂಸ್ಥೆಯ 75ನೇ ವಾರ್ಷಿಕ ದಿನ ಆಚರಣೆಯ ಸಭೆಯಲ್ಲಿ ಮೋದಿ ಪ್ರಥಮ ಭಾಷಣಕಾರನಾಗಿ ಮಾತಾಡಲಿದ್ದು ಈ ಬಗ್ಗೆ ಜನರಲ್ಲಿ ಕುತೂಹಲವಿದೆ, ಈ ಸಂದರ್ಭ ಅನೇಕ ಮಹತ್ವದ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ. ವಿಶ್ವ ಹಾಗೂ ಮನುಕುಲದ ಶಾಂತಿಗೆ 5-ಎಸ್ ಮಂತ್ರಗಳನ್ನು ಪ್ರತಿಪಾದಿಸಲಿದ್ದಾರೆ. ಸಮ್ಮಾನ್ (ಗೌರವ), ಸಂವಾದ (ಸಂಭಾಷಣೆ), ಸಹಯೋಗ( ಸಹಕಾರ ), ಶಾಂತಿ ,ಹಾಗೂ ಸಮ್ರದ್ಧಿ ಈ ಮುಂತಾದ ಪಂಚ ಸೂತ್ರಗಳ ತತ್ವವನ್ನು ಜಗತ್ತಿಗೆ ಸಾರಿ ಈ ಮೂಲಕ ಲೋಕ ಕಲ್ಯಾಣವಾಗುವ  ಅಂಶವನ್ನು ಭಾಷಣದಲ್ಲಿ ತಿಳಿಸಲಿದ್ದಾರೆ.

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಗೆ( ಯುಎನ್ಎಸ್ಸಿ) ಭಾರತ ಶಾಶ್ವತವಲ್ಲದ ಸದಸ್ಯ ರಾಷ್ಟವಾಗಿ 2 ವರ್ಷಗಳ ಕಾಲ ಚುನಾಯಿತವಾಗಿ ಜನವರಿ 1ರಿಂದ ಕಾರ್ಯನಿರ್ವಹಿಸಲಿದೆ.  ಈ ವಿಷಯದ ಹಿನ್ನಲೆಯಲ್ಲಿ ಈ ಅಂಗಸಂಸ್ಥೆ ಯಲ್ಲಿ ಭಾರತ ಮಹತ್ವದ ಪಾತ್ರವನ್ನು ಕೂಡ ಮೋದಿ ಪ್ರಸ್ಥಾಪಿಸಲಿದ್ದಾರೆ.

ಇದೀಗ ವಿಶ್ವ ಎದುರಿಸುತ್ತಿರುವ ಕೊರೋನಾ ವೈರಸ್ ನಿಗ್ರಹಕ್ಕಾಗಿ  ಇಡೀ ಜಗತ್ತು ಒಟ್ಟಾಗಿ ಹೋರಾಡಿ ಈ ಪಿಡುಗನ್ನು ನಿರ್ಮೂಲನೆಗೊಳಿಸಲು ಅನುಸರಿಸಬೇಕಾದ ಮಾರ್ಗೋಪಾಯಗಳ ಬಗ್ಗೆ ಮಾತಾಡಲಿದ್ದಾರೆ. ಮೊನ್ನೆಯಷ್ಟೇ ವಿಶ್ವ ಸಂಸ್ಥೆಯ ಉನ್ನತ ಸಭೆಯಲ್ಲಿ ಮೋದಿಯವರು ಮನುಕುಲದ ಹಿತಕ್ಕಾಗಿ ಸಮಗ್ರ ಸುಧಾರಣೆಗಳ ಅನುಷ್ಟಾನದ ಕೊರತೆಯನ್ನು ವಿಶ್ವ ಸಂಸ್ಥೆ ಎದುರಿಸುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ. ಲೋಕ ಕಲ್ಯಾಣಕ್ಕಾಗಿ ಕೆಲವು ಮಹತ್ತರ ಸಲಹೆಯನ್ನೂ ಮೋದಿ ನೀಡಿದ್ದರು.

ಇಂದು ನಡೆವ 75ನೇ ವಿಶ್ವ ಸಂಸ್ಥೆಯ ವಾರ್ಷಿಕೋತ್ಸವದ ಮಹಾ ಅಧಿವೇಶನದಲ್ಲಿ ಎರಡನೇ ಮಹತ್ವದ ಭಾಷಣವನ್ನು ಮಾಡಿ ಮೋದಿ ವಿಶ್ವದ ಗಮನ ಸೆಳೆಯಲಿದ್ದಾರೆ. ಇದರಿಂದ ಭಾರತದೊಂದಿಗೆ ಪ್ರಮುಖ ವಿಷಯಗಳಲ್ಲಿ ಬೆಂಬಲವನ್ನು ನೀಡಲು ಅನೇಕ ರಾಷ್ಟ್ರಗಳು ಉತ್ಸುಕವಾಗಿವೆ.

Latest News

ರಾಜ್ಯ

POCSO ಪ್ರಕರಣದಲ್ಲಿ ಅಮಾಯಕನನ್ನು ಬಂಧಿಸಿದ ಪೊಲೀಸರಿಗೆ 5 ಲಕ್ಷ ದಂಡ ವಿಧಿಸಿದ ಮಂಗಳೂರು ಜಿಲ್ಲಾ ನ್ಯಾಯಾಲಯ!

ಇದೇ ವೇಳೆ ಇಬ್ಬರೂ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ರಾಜ್ಯ

ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ 15 ಲಕ್ಷ ರೂ. ಪರಿಹಾರ : ಸಿಎಂ ಬೊಮ್ಮಾಯಿ

ಬೆಂಗಳೂರು ಮತ್ತು ಮೈಸೂರು ವಲಯದಲ್ಲಿ(Mysuru Zone) ಆನೆ ಕಾರಿಡಾರ್ ಸುತ್ತಲೂ ಚಿರತೆಗಳಿವೆ. ಚಿರತೆ ದಾಳಿ ತಡೆಯಲು ವಿಶೇಷ ತಂಡವನ್ನು ರಚಿಸಲಾಗಿದೆ ಮತ್ತು ನಿರ್ದಿಷ್ಟ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.

ದೇಶ-ವಿದೇಶ

ಹೃದಯಾಘಾತದಿಂದ ಬಸ್ ಚಾಲಕ ಸಾವು ; ಅನ್ಯ ವಾಹನಗಳಿಗೆ ಡಿಕ್ಕಿ ಸ್ಥಳದಲ್ಲೇ ಇಬ್ಬರು ಸಾವು!

ಬಸ್ ಚಾಲಕ ಹಠಾತ್ ಸಾವನ್ನಪ್ಪಿದ ಬೆನ್ನಲ್ಲೇ ಬಸ್ ನಿಯಂತ್ರಣ ಕಳೆದುಕೊಂಡು ಇತರ ವಾಹನಗಳಿಗೆ ಡಿಕ್ಕಿ ಹೊಡೆಯುವುದನ್ನು ದೃಶ್ಯದಲ್ಲಿ ಕಾಣಬಹುದು.

ಮನರಂಜನೆ

ಕನ್ನಡ ಚಿತ್ರರಂಗದಿಂದ ರಶ್ಮಿಕಾ ಮಂದಣ್ಣ ಬ್ಯಾನ್? ; ಅಷ್ಟಕ್ಕೂ ಅಸಲಿ ಕಾರಣವೇನು?

ತೆಲುಗು ಸಿನಿಮಾದ ಖ್ಯಾತ ಸಿನಿಮಾ ಪತ್ರಕರ್ತ,ಬರಹಗಾರ,ಸಿನಿಮಾ ವಿಮರ್ಶಕ ತೋಟಾ ಪ್ರಸಾದ್ (Thota Prasad) ರಶ್ಮಿಕ ಅವರ ಬಗ್ಗೆ ತೀವ್ರ ಅಸಮದಾನ ವ್ಯಕ್ತಪಡಿಸಿದ್ದಾರೆ.