ನವದೆಹಲಿ, ನ. 3: ರೈಲು ಪ್ರಯಾಣೀಕರು ಒಂದು ಊರಿಂದ ಇನ್ನೊಂದು ಊರಿಗೆ ಹೋಗಲು ವಿಶೇಷ ರೈಲುಗಳಲ್ಲಿ ಟಿಕೆಟ್ ಪಡೆಯಲು ಸುಧೀರ್ಘವಾಗಿ ವೈಟಿಂಗ್ ಲಿಸ್ಟ್ ನಲ್ಲಿದ್ದು ಕಾಯಬೇಕಾಗುತ್ತಿತ್ತು. ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಲು ಭಾರತೀಯ ರೈಲ್ವೆ ಹೊಸ ಕ್ರಮ ಕೈಗೊಳ್ಳುತ್ತಿದೆ. ವೈಟಿಂಗ್ ಲಿಸ್ಟ್ ಸಮಸ್ಯೆಯನ್ನು ಕೊನೆಗೊಳಿಸಲು ಟಿಕೆಟ್‌ಗಳ ಸಂಖ್ಯೆಯನ್ನು ಅಧಿಕಾರಿಗಳು ಸಂಪೂರ್ಣವಾಗಿ ವಿಶ್ಲೇಷಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ವೈಟಿಂಗ್ ಲಿಸ್ಟ್ ಗರಿಷ್ಠವಾಗಿರುವ ಜನನಿಬಿಡ ಮಾರ್ಗಗಳಲ್ಲಿ ಹೆಚ್ಚಿನ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ತೀರ್ಮಾನಿಸಿದೆ. ಡೇಟಾವನ್ನು ವಿಶ್ಲೇಷಿಸಿದ ನಂತರ ಭಾರತೀಯ ರೈಲ್ವೆ ಈ ಮಾರ್ಗಗಳಲ್ಲಿ ಹೆಚ್ಚುವರಿ ರೈಲುಗಳನ್ನು ಓಡಿಸಲು ಯೋಚಿಸಿದೆ.
ಕಾಯುವ ಪ್ರಯಾಣಿಕರ ಸಮಸ್ಯೆಯನ್ನು ಕೊನೆಗೊಳಿಸಲು ಭಾರತೀಯ ರೈಲ್ವೆ ಬಿಡುವಿಲ್ಲದ ಮಾರ್ಗಗಳಲ್ಲಿ ಕ್ಲೋನ್ ರೈಲುಗಳನ್ನು ಸಹ ಓಡಿಸಲು ತೀರ್ಮಾನಿಸಲಾಗಿದೆ, ಎಂಬುದಾಗಿ ತಿಳಿಸಿದೆ. ಕ್ಲೋನ್ ರೈಲುಗಳು ಎಂದರೆ ನಿಜವಾದ ರೈಲಿನಂತೆಯೇ ಒಂದೇ ಸಂಖ್ಯೆಯೊಂದಿಗೆ ಚಲಿಸುತ್ತದೆ.. ಉದಾಹರಣೆಗೆ ನವದೆಹಲಿ ದಿಬ್ರುಗರ್ ರಾಜಧಾನಿ ಎಕ್ಸ್ಪ್ರೆಸ್ ಎಲ್ಲಾ ಸೀಟುಗಳನ್ನು ಕಾದಿರಿಸಿದೆ. ಮತ್ತು ಧೀರ್ಘ ವೇಟ್ ಲಿಸ್ಟ್ ಮಾಡಿದ ಪ್ರಯಾಣಿಕರಿದ್ದಾರೆ. ಆಗ ಭಾರತೀಯ ರೈಲ್ವೇ ವೈಟ್ ಲಿಸ್ಟ್ ಮಾಡಿದ ಪ್ರಯಾಣಿಕರಿಗೆ ಉಚಿತವಾದ ಅಸನಗಳನ್ನು ಒದಗಿಸುವ ಸಲುವಾಗಿ ಅದೇ ರೈಲಿನಲ್ಲಿ ಮತ್ತೊಂದು ರೇಕನ್ನು ಅದೇ ಸಂಖ್ಯೆಗೆ ಹಾಕುತ್ತದೆ.
ಕ್ಲೋನ್ ರೈಲುಗಳನ್ನು ಮೊದಲನೆಯದಾಗಿ ಪ್ರಮುಖ ನಗರಗಳಲ್ಲಿ ಪ್ರಾರಂಭಿಸುವ ಸಾಧ್ಯತೆ ಇದೆ.