ಈಗಾಗಲೇ ಕೊರೋನಾ ಸೋಂಕು ಕಾರಣದಿಂದ ಶಾಲೆಗಳು 6 ತಿಂಗಳಿಂದ ಮುಚ್ಚಿದ್ದು ಇದೀಗ ಮತ್ತೆ ಪ್ರಾರಂಭವಾಗುವುದಕ್ಕೆ ತಯಾರಿಗಳು ನಡೆಯುತ್ತಿವೆ. ಕೆಲವೊಂದು ರಾಜ್ಯಗಳಲ್ಲಿ 9ನೇ ತರಗತಿಯಿಂದ 12ನೇ ತರಗತಿಯವರೆಗೆ ಪ್ರಾರಂಭವಾಗಿದೆ.
ಕೆಲವು ಕಡೆ ಇದುವರೆಗೂ ಶಾಲೆಗಳು ತೆರೆದಿಲ್ಲ. ಆದರೆ ಆದಷ್ಟು ಬೇಗ ಶಾಲೆಗಳು ತೆರೆಯಲಿವೆ. ಶಾಲೆಗಳು ತೆರೆಯುವ ಮುನ್ನ ಪೋಷಕರು ಮಕ್ಕಳಿಗೆ ಕೆಲವು ವಿಷಯಗಳನ್ನು ಕಲಿಸಬೇಕಾಗಿದೆ.
ತಂದೆ ತಾಯಿಯರು ಮಕ್ಕಳಿಗೆ ಕೊರೋನಾ ಸೋಂಕು ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳಾದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮಹತ್ವದ ಬಗ್ಗೆ ತಿಳಿಸಿಕೊಡಬೇಕು. ಶಾಲಾ ವಾಹನ, ಆಟದ ಮೈದಾನ, ಹಾಗೂ ತರಗತಿಗಳಲ್ಲಿ ಅಂತರ ಕಾಯ್ದುಕೊಳ್ಳವ ಬಗ್ಗೆ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವ ಬಗ್ಗೆ ತಿಳಿಸಿ ಹೇಳಬೇಕು.
ಮಕ್ಕಳ ಸ್ಕೂಲ್ ಬ್ಯಾಗ್ ಗಳಲ್ಲಿ ಒಂದು ಮಾಸ್ಕನ್ನು ಇಡುವುದನ್ನು ಮರೆಯಬೇಡಿ. ಇನ್ನು ಮಕ್ಕಳಿಗೆ ಕನಿಷ್ಠ 20 ಸೆಕುಂಡುಗಳ ಕಾಲ ಕೈಗಳನ್ನು ಯಾವುದೇ ಸೋಪು ಇಲ್ಲವೇ ಸ್ಯಾನಿಟೈಸರ್ ನಿಂದ ಚೆನ್ನಾಗಿ ತೊಳೆಯಲು ಹೇಳಬೇಕು. ಹಾಗೂ ಈಗಿಂದ ಅಭ್ಯಾಸ ಮಾಡಿಸಿಕೊಳ್ಳಬೇಕು.
ಯಾವುದೇ ವಸ್ತುಗಳನ್ನು ಕಂಪ್ಯೂಟರ್, ಬಾಗಿಲು ಟ್ಯಾಪ್ ಹ್ಯಾಂಡಲ್ ಅನ್ನು ಮುಟ್ಟಿದ್ರೆ ಕೈ ಯನ್ನು ಆಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರ್ ನಿಂದ ತೊಳೆಯಲು ತಿಳಿಹೇಳಬೇಕು. ಪಾಲಕರು ಈ ಎಲ್ಲಾ ವಿಷಯಗಳನ್ನು ಮಕ್ಕಳಿಗೆ ತಿಳಿ ಹೇಳಿದರೆ ಹೆದರುವ ಅಗತ್ಯವಿರುವುದಿಲ್ಲ.