ಪ್ರಪಂಚಾದ್ಯಂತ ಕೊರೋನ ಅಟ್ಟಹಾಸ ದಿನೇದಿನೆ ಹೆಚ್ಚುತ್ತಲೇ ಇದೆ. ಇದರ ಪರಿಣಾಮ ಷೇರು ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ. ಶುಕ್ರವಾರ ಮುಂಜಾನೆ ಸೆಂಸೆಕ್ಸ್ ಹಾಗು ನಿಫ್ಟಿಯಲ್ಲಿ ಬಾರಿ ಇಳಿಕೆ ಕಂಡಿತ್ತು. ಇಂದು ಮುಂಜಾನೆ ಕೂಡ ಷೇರುದಾರರಿಗೆ ದೊಡ್ಡ ಮಟ್ಟದ ಶಾಕ್ ಕಾದಿತ್ತು. ಭಾರತ ಸೇರಿ ಚೀನಾ ಹಾಗು ಅಮೇರಿಕ ಕೂಡ ನಷ್ಟವನ್ನು ಅನುಭವಿಸುತ್ತಿದೆ. ಮುಖ್ಯವಾಗಿ ಬೀಜಂಗ್ ನಲ್ಲಿ ಮತ್ತೊಮ್ಮೆ ಭಾರಿ ಪ್ರಮಾಣದಲ್ಲಿ ಕೊರೋನ ಪತ್ತಯಾಗಿದ್ದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಇಂದು ಬೆಳಗ್ಗೆ ಸುಮಾರು 11 ಗಂಟೆಗೆ ಸೆನ್ಸೆಕ್ಸ್ 669 ಪಾಯಿಂಟ್ಗಳ ಭಾರಿ ಇಳಿದು 33,111ಕ್ಕೆ ಬಂದು ನಿಂತಿದೆ. ಇನ್ನು ನಿಫ್ಟಿ 1990 ಪಾಯಿಂಟ್ಗಳಿಂದ ಇಳಿಕೆ ಕಂಡು 9,782ಗೆ ಬಂದಿದೆ. ಸೆಂಸೆಕ್ಸ್ ನ 30 ಷೇರ್ ಪ್ಯಾಕ್ ಗಳ ಪೈಕಿ ಹೆಚ್ಚು ಲಾಭ ಕಂಡಿದ್ದು ಇನ್ಫೋಸಿಸ್ ಹಾಗು ನಷ್ಟವಾಗಿದ್ದು ಟಾಟಾ ಸ್ಟೀಲ್ ಕಂಪನಿಗೆ. ಇದರ ಜೊತೆಗೆ HUL,ಶರ್ಣ ಫಾರ್ಮಾ, ನೆಸ್ಲೇ ಇಂಡಿಯಾ ಹಾಗು TCS ಕಂಪನಿಗಳು ಲಾಭ ಕಂಡಿದ್ದು, ಇಂಡಸ್ ಇಂಡ್ ಬ್ಯಾಂಕ್, ಬಜಾಜ್ ಫಿನಾನ್ಸ, ICICI,ಆಕ್ಸಿಸ್ ಬ್ಯಾಂಕ್ ಹಾಗು ಬಜಾಜ್ ಆಟೋ ಬಾರಿ ನಷ್ಟಅನುಭವಿಸಿದೆ.
ಈಗಾಗಲೇ ಕೊರೋನ ವೈರಸ್ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈಗ ಜಾಗತಿಕ ಮಾರುಕಟ್ಟೆಯ ಮೇಲೆ ಭಾರಿ ಪ್ರಮಾಣ ಬೀರಿದ್ದರಿಂದ, ಷೇರುದಾರರಲ್ಲಿ ಇನ್ನೆಷ್ಟು ಇಳಿಕೆ ಕಾಣುತ್ತದೆ ಎಂಬ ಆತಂಕ ಹೆಚ್ಚಾಗಿದೆ.