ಮುಂಬೈ, ನ. 11: ಈ ವರ್ಷ ವಿಪ್ರೋ ಕಂಪನಿಯ ಮಾಜಿ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಸಮಾಜ ಸೇವೆಗೆ ಒಟ್ಟು 7,804 ಕೋಟಿ ರು.ಗಳನ್ನ ದಾನವಾಗಿ ನೀಡುವ ಮೂಲಕ ದೇಶದ ನಂ.1 ದಾನಿಯಾಗಿ ಹೊರಹೊಮ್ಮಿದ್ದಾರೆ. ಅಂದರೆ ಈ ವರ್ಷ ಇವರು ಪ್ರತಿದಿನ ಸರಾಸರಿ 22 ಕೋಟಿ ದಾನ ಮಾಡಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಕಳೆದ ವರ್ಷ ಎಚ್‌ಸಿಎಲ್ ಕಂಪನಿಯ ಶಿವ ನಾಡಾರ್ 826 ಕೋಟಿ ರು. ದಾನ ಮಾಡುವ ಮೂಲಕ ಅತಿದೊಡ್ಡ ದಾನಿಯಾಗಿದ್ದರು. ಆದರೆ, ಈ ವರ್ಷ ಅವರು 795 ಕೋಟಿ ರೂ. ದಾನ ನೀಡುವ ಮೂಲಕ 2ನೇ ಸ್ಥಾನದಲ್ಲಿದ್ದಾರೆ. ಇನ್ನು ಕಳೆದ ವರ್ಷ 426 ಕೋಟಿ ರು. ನೀಡಿದ್ದ ಅಜೀಂ ಪ್ರೇಮ್‌ಜಿ ಈ ವರ್ಷ 7904 ಕೋಟಿ ರೂಪಾಯಿ ನೀಡಿದ್ದು ನಂ.1 ದಾನಿಯಾಗಿದ್ದಾರೆ.
ಹುರುನ್ ರಿಪೋರ್ಟ್ ಇಂಡಿಯಾ ಹಾಗೂ ಎಡೆಲ್ಗಿವ್ ಫೌಂಡೇಶನ್‌ಗಳು ಸೇರಿ ದಾನಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ದೇಶದ ನಂ.1 ಶ್ರೀಮಂತ ಉದ್ಯಮಿ, ರಿಲಾಯನ್ಸ್ ಇಂಡಸ್ಟ್ರೀಸ್ನ ಮುಕೇಶ್ ಅಂಬಾನಿ 458 ಕೋಟಿ ರೂ. ನೀಡುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.