vijaya times advertisements
Visit Channel

ಸರ್ಕಾರ ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲಿ: ಮಾಜಿ ಸಿಎಂ ಕುಮಾರಸ್ವಾಮಿ

Bng27 CM HDK 02-1552585801

ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವುದು ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕರ್ತವ್ಯ ನಿರತ ಪೌರಕಾರ್ಮಿಕರು ಸೋಂಕಿನಿಂದ ಸಾವಿಗೆ ತುತ್ತಾದರೆ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರವನ್ನು ಸರ್ಕಾರ ನೀಡಬೇಕು.ಹಣರೂಪದ ಪರಿಹಾರ ಸರ್ಕಾರದ ಆಡಳಿತಾತ್ಮಕ ಕರ್ತವ್ಯವಾಗುತ್ತದೆ.

ಪೌರಕಾರ್ಮಿಕ ಸಮುದಾಯವನ್ನು ಸದಾ ಕೃತಜ್ಞತೆಯಿಂದ ಸ್ಮರಿಸುವುದು,ಅವರ ಬೇಡಿಕೆಗಳನ್ನು ಈಡೇರಿಸುವುದೇ ಅವರಿಗೆ ಸಲ್ಲಿಸಬಹುದಾದ ನಿಜ ಗೌರವವಾಗುತ್ತದೆ.

ಕೊರೊನಾ ಸಂಕಷ್ಟದ ಈ ದಿನಗಳಲ್ಲಿ ಜನರ ಆರೋಗ್ಯದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೂ ಪಣಕ್ಕಿಟ್ಟು ದುಡಿಯುತ್ತಿರುವ ಪೌರಕಾರ್ಮಿಕರು ವೈದ್ಯ ಸಮೂಹದಷ್ಟೆ ಪ್ರಧಾನ ಪಾತ್ರ ವಹಿಸಿದ್ದಾರೆ.

ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ತ್ಯಾಗ, ಸೇವೆ, ಸಮರ್ಪಣೆ, ಕಾರುಣ್ಯದಿಂದ ಸದಾ ಜೀವ ತೇಯುತ್ತಿರುವ ಪೌರಕಾರ್ಮಿಕರನ್ನು ಈ ಸಮಾಜ ಪ್ರತಿಕ್ಷಣವು ತಾಯ್ತನದಿಂದ ಕಾಣುವುದೇ ನಾವು ಅವರಿಗೆ ಸಲ್ಲಿಸಬಹುದಾದ ದೊಡ್ಡ ಕೃತಜ್ಞತೆ ಎಂದು ಪೌರಕಾರ್ಮಿಕ ದಿನಾಚರಣೆಯ ಶುಭಾಶಯಗಳು ಎಂದು ಕೋರಿದ್ದಾರೆ.

Latest News

ರಾಜ್ಯ

ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದಿದ್ದಕ್ಕಾಗಿ ಪ್ರಾಧ್ಯಾಪಕ ಅಮಾನತು!

ನಾವು ಸ್ವಯಂಪ್ರೇರಿತ ಕ್ರಮವನ್ನು ತೆಗೆದುಕೊಂಡಿದ್ದೇವೆ. ವಾಸ್ತವವಾಗಿ ಯಾರೂ ಇಲ್ಲದ ಕಾರಣ ವಿದ್ಯಾರ್ಥಿಯು ನಿಜವಾಗಿಯೂ ಆತಂಕಕ್ಕೊಳಗಾಗಿದ್ದಾನೆ.

ರಾಜಕೀಯ

ನೀವು ಬಡವರು ಎಂದು ಹೇಳಿಕೊಳ್ಳುತ್ತೀರಿ, ಆದ್ರೆ ನಾನು ಅಸ್ಪೃಶ್ಯರಲ್ಲಿ ಒಬ್ಬ : ಮಲ್ಲಿಕಾರ್ಜುನ ಖರ್ಗೆ

ನಾನು ಅಸ್ಪೃಶ್ಯರಲ್ಲಿ ಒಬ್ಬ. ಜನರು ನಿಮ್ಮ ಚಹಾವನ್ನು ಕುಡಿಯುತ್ತಿದ್ದರು,  ಆದರೆ ಯಾರೂ ನನ್ನ ಚಹಾವನ್ನು ಸೇವಿಸಲಿಲ್ಲ ಎಂದು ಖರ್ಗೆ ಅವರು ಪರೋಕ್ಷವಾಗಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.  

ರಾಜಕೀಯ

ಒಕ್ಕಲಿಗರಿಗೆ 4%-12% ಮೀಸಲಾತಿ ; ಇದು ಉತ್ತಮ ಬೇಡಿಕೆಯಾಗಿದೆ : ನಟ ಚೇತನ್

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕದ ಒಕ್ಕಲಿಗ ಲಾಬಿಗಳು ಒಕ್ಕಲಿಗರಿಗೆ 4% – 12% ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ.