ಬೆಂಗಳೂರು: ರಾಜ್ಯ ಸರಕಾರದ ವಿರುದ್ಧ 30 ಕ್ಕೂ ಹೆಚ್ಚು ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ. ಭೂಸುಧಾರಣೆ, ಎಪಿಎಂಸಿ ಕಾಯ್ದೆ ಸುಗ್ರೀವಾಜ್ಞೆ, ವಿದ್ಯುತ್ ಕಾಯ್ದೆ ತಿದ್ದುಪಡಿ, ವಿರೋಧಿಸಿ ಚಂದ್ರಶೇಖರ್ ಕೋಡಿಹಳ್ಳಿ ಹಾಗೂ ಕುರುಬೂರು ಶಾಂತಕುಮಾರ್ ಇವರ ಮುಂದಾಳುತ್ವದಲ್ಲಿ ವಿಧಾನಸೌಧ ಚಲೋ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಮೆಜೆಸ್ಟಿಕ್ ರೈಲ್ವೇ ನಿಲ್ಧಾಣದಿಂದ ಹೊರಟ ಮೆರವಣಿಗೆಗೆ ರಾಜ್ಯದ 32 ಸಂಘಟನೆಗಳು ಸೇರಿಕೊಂಡಿವೆ.
ಮಳೆಯನ್ನೂ ಲೆಕ್ಕಿಸದೆ ಸರ್ಕಾರದ ವಿರುದ್ದ ಆಕ್ರೋಷ ವ್ಯಕ್ತ ಪಡಿಸುತ್ತಾ ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ಸುಗ್ರೀವಾಜ್ಞೆ, ವಿದ್ಯುತ್ ಕಾಯ್ದೆ ತಿದ್ದುಪಡಿ ಕಾಯ್ದೆಯನ್ನು ಕೈಬಿಡಬೇಕು, ಮತ್ತು ರೈತರಿಗೆ ಮಾರಕವಾ ಕಾನೂನು ತಂದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ. ರೈತರಿಗೆ ಅನುಕೂಲವಾಗುವ ಬಿಲ್ ಗಳನ್ನು ಮಂಡಿಸದಿದ್ದಲ್ಲಿ ಕಾನೂನು ಭಂಗ, ಜೈಲ್ ಭರೋ ಚಳವಳಿಯನ್ನೂ ಮಾಡಲು ಸಿದ್ದ ಎಂದು ರೈತ ಮುಖಂಡರು ಎಚ್ಚರಿಸಿದರು.
ರೈತರ ಪ್ರತಿಭಟನಾ ಮೆರವಣಿಗೆ ರೇಸ್ ಕೋರ್ಸ್ ರಸ್ತೆ ಮೂಲಕ ಮೆಜೆಸ್ಟಿಕ್, ಫ್ರೀಡಂ ಪಾರ್ಕ್ ,ಆನಂದರಾವ್ ಸರ್ಕಲ್, ಮೂಲಕ ಮುಂದುವರಿಯಿತು. ಮೆರವಣಿಗೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರಿಂದ ಪೋಲೀಸರು ಎಲ್ಲೆಡೆ ಬಂದೋಬಸ್ತ್ ಏರ್ಪಡಿಸಿದ್ದಾರೆ.