ಸ್ಪೀಕರ್ ನಿಂದ ಅನರ್ಹಗೊಂಡಿರುವ ರಾಜ್ಯದ 17 ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್ ಗೆ ಇಂದು ವಿಶೇಷ ಅರ್ಜಿ ಸಲ್ಲಿಸಿದ್ದಾರೆ.
ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ನಾವು ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕೆಂದು ಶಾಸಕರು ಕೋರ್ಟ್ ಗೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಹೊಸ ಸರ್ಕಾರ ಬಂದರೂ ಸಹ ಅನರ್ಹ ಶಾಸಕರ ಭವಿಷ್ಯ ಮಾತ್ರ ಇನ್ನೂ ಅತಂತ್ರವಾಗಿಯೇ ಉಳಿದಿದೆ. ಸುಪ್ರೀಂ ನಿರ್ಣಯದ ಬಳಿಕ ಇವರ ಭವಿಷ್ಯ ಸ್ಪಷ್ಟವಾಗಲಿದೆ.