Visit Channel

ಸುಶಾಂತ್‌ ಸಿಂಗ್‌ (Sushant Singh ) ಕುಟುಂಬ ರಸ್ತೆ ಅಪಘಾತಕ್ಕೆ ಬಲಿ ! 6 ಮಂದಿ ನಿಧನ; ಇನ್ನೂ 4 ಜನರ ಸ್ಥಿತಿ ಗಂಭೀರ

Sushant_sr_Manish_M_B'day_bash

ಶಾಕಿಂಗ್‌ ನ್ಯೂಸ್‌ ! ಬಾಲಿವುಡ್​ ನಟ, ಕಳೆದ ವರ್ಷ ನಿಧನರಾಗಿದ್ದ ಸುಶಾಂತ್​ ಸಿಂಗ್​ ರಜಪೂತ್​ (Sushant Singh Rajput) ಅವರ ಕುಟುಂಬದ 6 ಮಂದಿ ರಸ್ತೆ ಅಪಘಾತದಲ್ಲಿ (Road Accident) ನಿಧನರಾಗಿದ್ದಾರೆ. ಮಂಗಳವಾರ (.16) ಬೆಳಗ್ಗೆ ಭೀಕರ ಆ್ಯಕ್ಸಿಡೆಂಟ್​ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿರುವ 4 ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಿಂದ ಸುಶಾಂತ್​ ಅಭಿಮಾನಿಗಳಿಗೆ ತೀವ್ರ ಆಘಾತ ಆಗಿದೆ. ಬಿಹಾರದ ಲಖಿಸರಾಯ್​ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 333ರಲ್ಲಿ ಅಪಘಾತ ಸಂಭವಿಸಿದೆ. ಸುಶಾಂತ್​ ಕುಟುಂಬದ ಸದಸ್ಯರು (Sushant Singh Rajput Family) ಸೇರಿ ಒಟ್ಟು 10 ಮಂದಿ ಪ್ರಯಾಣಿಸಿದ್ದ ಕಾರು ಮತ್ತು ಟ್ರಕ್​​ ನಡುವೆ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ 6 ಮಂದಿ ಮೃತಪಟ್ಟಿದ್ದಾರೆ.

ಸಾವು ಮುಗಿಸಿ ಬಂದವರು ಸಾವಿನ ಮನೆಗೆ !

ಸುಶಾಂತ್​ ಸಿಂಗ್​ ರಜಪೂತ್​ ಅವರ ಭಾವ ಒ.ಪಿ. ಸಿಂಗ್​ ಅವರ ಸಹೋದರಿ ನಿಧನರಾಗಿದ್ದರು. ಅವರ ಅಂತಿಮ ಸಂಸ್ಕಾರವನ್ನು ಮುಗಿಸಿದ ಬಳಿಕ ಕುಟುಂಬದವರೆಲ್ಲ ಪಾಟ್ನಾದಿಂದ ಹಿಂದಿರುಗುತ್ತಿದ್ದರು. ಈ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ‘ಟ್ರಕ್​ ಮತ್ತು ಕಾರಿನ ನಡುವೆ ಭೀಕರವಾಗಿ ಡಿಕ್ಕಿ ಆಗಿದೆ. ಗಾಯಾಳುಗಳ ಸ್ಥಿತಿ ಚಿಂತಾಜನಕ ಆಗಿದೆ’ ಎಂದು ಘಟನೆ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಆರು ಮಂದಿಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಲಖಿಸರಾಯ್​ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಬಾಲಮುಕುಂದ್​ ಸಿಂಗ್​ ಮತ್ತು ದಿಲ್​ ಖುಷ್​ ಸಿಂಗ್​ ಅವರನ್ನು ಪಾಟ್ನಾಗೆ ಕಳಿಸಿ ಹೆಚ್ಚುವರಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನಿಬ್ಬರಿಗೆ ಲಖಿಸರಾಯ್​ ಜಿಲ್ಲಾ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ. ಮೃತರನ್ನು ಬಾಬಿ ದೇವಿ, ಅನಿತಾ ದೇವಿ, ಲಾಲ್​ಜಿತ್​ ಸಿಂಗ್​, ಅಮಿತ್​ ಶೇಖರ್​, ರಾಮಚಂದ್ರ ಸಿಂಗ್​ ಹಾಗೂ ಚಾಲಕ ಪ್ರೀತಂ ಎಂದು ಗುರುತಿಸಲಾಗಿದೆ.

ಸುಶಾಂತ್ ಸಾವೇ ನಿಗೂಢವಾಗಿತ್ತು

ಬಾಲಿವುಡ್‌ನಲ್ಲಿ ಜನಪ್ರಿಯತೆ ಗಳಿಸುತ್ತಿದ್ದ ವೇಳೆ ಸುಶಾಂತ್​ ಸಿಂಗ್​ ರಜಪೂತ್​ ಇಹಲೋಕ ತ್ಯಜಿಸಿದ್ದು ಎಲ್ಲರಿಗೂ ಆಘಾತವಾಗಿತ್ತು. 2020ರ ಜೂ.14ರಂದು ಮುಂಬೈನ ಅಪಾರ್ಟ್​ಮೆಂಟ್​ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆ ಆಗಿತ್ತು. ಅವರ ನಿಧನದ ಬಗ್ಗೆ ಈಗಲೂ ಅನುಮಾನ ಇದೆ. ಅವರದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಪ್ರಶ್ನೆಗೆ ಇನ್ನೂ ಸರಿಯಾದ ಉತ್ತರ ಸಿಕ್ಕಿಲ್ಲ. ಸುಶಾಂತ್​ ಸಾವಿಗೆ ನ್ಯಾಯ ಸಿಗಬೇಕು ಎಂದು ಅಭಿಮಾನಿಗಳು ಇಂದಿಗೂ ಸೋಶಿಯಲ್​ ಮೀಡಿಯಾದಲ್ಲಿ ಅಭಿಯಾನ ನಡೆಸುತ್ತಿದ್ದಾರೆ. ಸುಶಾಂತ್​ ನಿಧನದ ನೋವು ಇನ್ನೂ ಹಸಿಯಾಗಿ ಇರುವಾಗಲೇ ಅವರ ಕುಟುಂಬದ ಆರು ಮಂದಿ ಭೀಕರ ರಸ್ತೆ ಅಪಘಾತದಲ್ಲಿ ಮೃತರಾಗಿರುವುದು ಅಭಿಮಾನಿಗಳಿಗೆ ತೀವ್ರ ಆಘಾತ ಮಾಡಿದೆ.

Latest News

Russia
ದೇಶ-ವಿದೇಶ

ಜನಸಂಖ್ಯೆ ಹೆಚ್ಚಳಕ್ಕೆ 10 ಮಕ್ಕಳಿಗೆ ಜನ್ಮ ನೀಡಿದ್ರೆ 13 ಲಕ್ಷ ಬಹುಮಾನ : ರಷ್ಯಾ ಅಧ್ಯಕ್ಷ ಪುಟಿನ್‌ ಘೋಷಣೆ

ರಷ್ಯಾದ ರಾಜಕೀಯ(Russia Politics) ಮತ್ತು ಭದ್ರತಾ ತಜ್ಞ ಡಾ ಜೆನ್ನಿ ಮ್ಯಾಥರ್ಸ್, ಟೈಮ್ಸ್ ರೇಡಿಯೊದಲ್ಲಿ ಈ ಕುರಿತು ಮಾತನಾಡಿ, “ಮದರ್ ಹೀರೋಯಿನ್” ಎಂದು ಕರೆಯಲ್ಪಡುವ ಬಹುಮಾನ ಯೋಜನೆ

Dakshina Kannada
ರಾಜ್ಯ

ವಿಜಯಟೈಮ್ಸ್ ಇಂಪ್ಯಾಕ್ಟ್ ; ಬಂಟ್ವಾಳ ಸೇತುವೆಯ ದುಸ್ಥಿತಿ ನೋಡಲು ದಿಢೀರನೇ ಬಂದ ಅಧಿಕಾರಿಗಳು!

ಕಳಪೆ ಕಾಮಗಾರಿ ದುರಂತದ ಬಗ್ಗೆ ವಿಜಯಟೈಮ್ಸ್ ತಂಡ ಮಾಡಿದ್ದ ವರದಿಗೆ ಅಧಿಕಾರಿಗಳು ಈಗ ದಿಢೀರ್ ಎಚ್ಚೆತ್ತುಕೊಂಡಿದ್ದಾರೆ.

IT Minister
ದೇಶ-ವಿದೇಶ

5G ಬಿಡುಗಡೆಗೆ ತಯಾರಿ ಮಾಡಿಕೊಳ್ಳಿ : ಟೆಲಿಕಾಂ ಕಂಪನಿಗಳಿಗೆ ಐಟಿ ಸಚಿವ ಅಶ್ವಿನಿ ವೈಷ್ಣವ್ ಸೂಚನೆ

ಇನ್ನು ಏರ್ಟೆಲ್(Airtel) ಮತ್ತು ಜಿಯೋ(Jio) ಈ ತಿಂಗಳ ಕೊನೆಯಲ್ಲಿ ತಮ್ಮ 5G ಸೇವೆಗಳ ಮೊದಲ ಹಂತವನ್ನು ಬಿಡುಗಡೆಗೊಳಿಸುವ ನಿರೀಕ್ಷೆಯಿದೆ.