ನವದೆಹಲಿ, ನ. 5: ನೌಕಾಪಡೆ, ಸೇನಾ ಪಡೆ, ವಾಯುಪಡೆಯ ಹಿರಿಯ ಅಧಿಕಾರಿಗಳ ನಿವೃತ್ತಿಯ ವಯಸ್ಸನ್ನು ಹೆಚ್ಚಿಸುವ ಚಿಂತನೆಯನ್ನು ರಕ್ಷಣಾ ಇಲಾಖೆಯ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ನೇತ್ರತ್ವದ ಸೇನಾ ವ್ಯವಹಾರಗಳ ಇಲಾಖೆ (ಡಿಎಂಎ) ಪ್ರಾರಂಭಿಸಿದೆ.
ಪ್ರಸ್ತುತ ಕರ್ನಲ್ ನಿವೃತ್ತಿ ವಯಸ್ಸು 54 ವರ್ಷಗಳಾಗಿದ್ದು ಇನ್ನು ಬ್ರಿಗೇಡಿಯರ್‌ಗಳ ನಿವೃತ್ತಿ ವಯಸ್ಸು 56 ವರ್ಷಗಳಿಗೆ ಏರಿಸಲಾಗುವುದು ಈಗಿನ 56 ವರ್ಷಗಳಿಂದ 58 ವರ್ಷಗಳಿಗೆ ಮತ್ತು ಮೇಜರ್ ಜನರಲ್‌ಗಳ ನಿವೃತ್ತಿ ವಯಸ್ಸನ್ನು ಈಗಿನ 58 ವರ್ಷಗಳಿಂದ 59 ವರ್ಷಕ್ಕೆ ಏರಿಸಲಾಗುವುದು ಎಂದು (ಡಿಎಂಎ) ಹೇಳಿದೆ.
ನೌಕಾ ಪಡೆ ಮತ್ತು ವಾಯುಪಡೆಗಳಿಗೂ ಅದೇ ರೀತಿ ಏರಿಕೆಯಾಗಲಿದೆ. ಲಾಜಿಸ್ಟಿಕ್ ಟೆಕ್ನಿಕಲ್ ಮತ್ತು ಮೆಡಿಕಲ್ ವಿಭಾಗಗಳಲ್ಲಿ ಜೆಸಿಒ ಗಳ ನಿವೃತ್ತಿ ವಯಸ್ಸು 57 ವರ್ಷ. ಜನರಲ್ ರಾವತ್ ಅವರ ಕರಡು ಪ್ರತಿ ನವಂಬರ್ 10ರೊಳಗೆ ಪರಿಶೀಲನೆ ಮಾಡಲಾಗುವುದೆಂದು ತಿಳಿಸಿದೆ.
ಅವಧಿ ಪೂರ್ವ ಬಿಡುಗಡೆಗೆ (ಪಿಎಂಆರ್) 20-25 ವರ್ಷದ ಸೇವೆಗೆ ಪಿಂಚಣಿ ಶೇ50 ರಷ್ಟು ಕಡಿತಗೊಳಿಸಲಾಗುತ್ತದೆ. 26-30 ರ‍್ಷ ಸೇವೆ ಸಲ್ಲಿಸಿದರೆ ಶೇ60ರಷ್ಟು ಪಿಂಚಣಿ ಹಾಗೂ 31-35 ರ‍್ಷ ಸೇವೆ ಸಲ್ಲಿಸಿದರೆ ಶೇ 75ರಷ್ಟು ಪಿಂಚಣಿ ಸಿಗಲಿದೆ ಹಾಗೂ 35 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದವರಿಗೆ ಪೂರ್ಣ ಪಿಂಚಣಿ ಸಿಗಲಿದೆ ಎಂದು ಡಿಎಂಎ ತಿಳಿಸಿದೆ.