ತೆರೆಕಾಣುವ ಮುನ್ನವೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ಸ್ಯಾಂಡಲ್ ವುಡ್ನ ಪೈಲ್ವಾನ್ ಸಿನಿಮಾ, ತೆರೆಕಾಣುತ್ತಲೇ ಸಾಕಷ್ಟು ಸುದ್ದಿ ಮಾಡಿತ್ತು..ಒಂದ್ಕಡೆ ನೆಗೆಟೀವ್ ಪ್ರಮೋಶನ್ ಗೆ ಬಲಿಯಾದರೆ ಮತ್ತೊಂದು ಕಡೆ ಪೈರಸಿಯ ಹಾವಳಿ ಕೂಡ..ಹೌದು..ಸೋಶಿಯಲ್ ಮೀಡಿಯಾದಲ್ಲಿ ಚಿತ್ರವನ್ನು ಪೈರಸಿ ಮಾಡಿ ಹರಿಯಬಿಟ್ಟಿದ್ದಾರೆಂಬ ಆರೋಪದ ಮೇರೆಗೆ ಚಿತ್ರತಂಡ, ಚಿತ್ರದ ನಿರ್ಮಾಪಕಿ ಸ್ವಪ್ನ ಕೃಷ್ಣ ಸೈಬರ್ ಕ್ರೈಂ ವಿಭಾಗದಲ್ಲಿ ದೂರು ದಾಖಲಿಸಿದ್ದಾರೆ.
ಕಳೆದ 12ರಂದು 3000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪಂಚ ಭಾಷೆಗಳಲ್ಲಿ ತೆರೆಕಂಡ ಈ ಚಿತ್ರ ಬಿಡುಗಡೆ ದಿನವೇ ಪೈರಸಿಯಾಗಿತ್ತು. ಸುಮಾರು 3500 ಕ್ಕೂ ಹೆಚ್ಚು ಲಿಂಕ್ ಗಳನ್ನ ಪೊಲೀಸರ ಬಗ್ಗೆ ತಿಳಿಸಿದ್ದೇವೆ. ದರ್ಶನ್ ಅಭಿಮಾನಿಗಳು ಸಿನಿಮಾವನ್ನ ಪೈರಸಿ ಮಾಡಿಲ್ಲ. ಯಾರೋ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ. ಯಾರೇ ಈ ರೀತಿ ಪೈರಸಿ ಮಾಡಿದ್ರು ಅದು ತಪ್ಪು. ಚಿತ್ರರಂಗದ ಬೆಳವಣಿಗೆಗೆ ಪೈರಸಿ ಅನ್ನೊದು ಮಾರಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.