ಬೆಂಗಳೂರು: ಅನಾರೋಗ್ಯದ ನಿಮಿತ್ತ ಸ್ಯಾಂಡಲ್ ವುಡ್ ನಟ ಶರಣ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶರಣ್ ಅವರು ಇಂದು (26-9-2020) ಅವತಾರ ಪುರುಷ ಸಿನೆಮಾದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಆ ವೇಳೆ ಶರಣ್ ಅವರಲ್ಲಿ ಅನಾರೋಗ್ಯ ಕಾಣಿಸಿಕೊಂಡಿದೆ, ಆ ಕೂಡಲೆ ಅವರನ್ನು ರೇಸ್ ಕೋರ್ಸ್ ನ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬೆಂಗಳೂರಿನ ಹೆಚ್ ಎಂ ಟಿ ಗ್ರೌಂಡ್ ನಲ್ಲಿ ಅವತಾರ ಪುರುಷ ಸಿನೆಮಾ ಶೂಟಿಂಗ್ ವೇಳೆ ಹಠಾತ್ತನೆ ತೀರ್ವವಾದ ಹೊಟ್ಟೆ ನೋವು ಕಾಣಿಸಿಕೊಂಡಿತ್ತು, ಎನ್ನಲಾಗಿದ್ದು ತಕ್ಷಣವೇ ಅವರನ್ನು ನಿರ್ಧೇಶಕ ಸಿಂಪಲ್ ಸುನಿ ಮತ್ತು ನಿರ್ಮಾಪಕರು ಆಸ್ಪತ್ರೆಗೆ ದಾಖಲಿಸಿದ್ದಾರೆಂದು ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ.