ಸಂಸತ್ ನಲ್ಲಿ ಕಂಟ್ರೋಲರ್ ಹಾಗೂ ಅಡಿಟರ್ ಜನರಲ್ ನೀಡಿದ ವರದಿ ಬಗ್ಗೆ ಮಾಜಿ ಸಚಿವ ಪಿ ಚಿದಂಬರಂ ಅವರು ಪ್ರಸ್ಥಾಪಿಸಿ, ಸ್ವಚ್ಛಭಾರತದ ಬಗ್ಗೆ ಹೇಳುವ ಸರಕಾರ ಶಾಲೆಗಳಲ್ಲಿನ ಶೌಚಾಲಯಗಳ ಬಗ್ಗೆ ನಿರ್ಲಕ್ಷ ತೋರಿಸಿದ್ದಕ್ಕೆ ಕಿಡಿಕಾರಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶೇ 75ರಷ್ಟು ಶೌಚಾಲಯಗಳು ಉಪಯೋಗಕ್ಕೆ ಯೋಗ್ಯವಿಲ್ಲ ಎಂದು ತಿಳಿದು ಬಂದಿದೆ.
ಸಿ ಎ ಜೆ ವರದಿಯ ಪ್ರಕಾರ( ಕಂಟ್ರೋಲ್ ಅಡಿಟರ್ ಜನರಲ್ )ಪ್ರತಿ 2326 ಶೌಚಾಲಯಗಳಲ್ಲಿ 1812 ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆಯೇ ಇಲ್ಲ. ಪ್ರತಿ 1812 ಶೌಚಾಲಯಗಳಲ್ಲಿ 715 ಶೌಚಾಲಯಗಳಲ್ಲಿ ಸ್ವಚ್ಛತೆಯೇ ಇಲ್ಲ.
ಶೇ 75 ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳಲ್ಲಿ ಸ್ಯಾನಿಟೈಸ್, ಸೋಪ್ ಮತ್ತು ನೀರಿನ ಸೌಲಭ್ಯವೇ ಇಲ್ಲ;ಎಂಬ ವಿಚಾರ ತಿಳಿದು ಬಂದಿದೆ. ಇನ್ನು ಸರ್ಕಾರದ ಶೇ 40ರಷ್ಟು ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ; ಇದರಿಂದಾಗಿ ಬಯಲು ಮೂತ್ರವಿಸರ್ಜನೆ ಮಾಡಿದರೆ ಸ್ವಚ್ಛ ಬಾರತ ಹೇಗಾಗುತ್ತದೆ? ಎಂದು ಪಿ ಚಿದಂಬರಂ ಪ್ರಶ್ನಿಸಿದ್ದಾರೆ.