ಬೆಂಗಳೂರು: ಇಂದಿನಿಂದ( 18-9-2020 ) ಭಾರತೀಯ ಸ್ಟೇಟ್ ಬ್ಯಾಂಕಿನಿಂದ(ಎಸ್ ಬಿ ಐ) ಗ್ರಾಹಕರು ಎಟಿಎಮ್ ಮೂಲಕ 10 ಸಾವಿರಕ್ಕಿಂತ ಹೆಚ್ಚಿನ ಹಣ ತೆಗೆಯಲು ಮೊಬೈಲ್ ಬೇಕೇ ಬೇಕು. ಬ್ಯಾಂಕ್ ಖಾತೆಗೆ ಸಂಪರ್ಕಿಸಲಾದ ಮೊಬೈಲ್ ಸಂಖ್ಯೆ ಇಲ್ಲವಾದರೆ ಹಣವನ್ನು ತೆಗೆಯಲು ಸಾದ್ಯವಿಲ್ಲ!. 10 ಸಾವಿರಕ್ಕಿಂತ ಹೆಚ್ಚು ಹಣವನ್ನು ತೆಗೆಯುವಾಗ ಮೊಬೈಲ್ ಗೆ ಒಟಿಪಿ ರವಾನೆಯಾಗುತ್ತದೆ .ಆ ಒಟಿಪಿಯನ್ನು ಎಟಿಎಮ್ ಪರದೆಗೆ ನಮೂದಿಸಿದರೆ ಮಾತ್ರವೇ ಹಣ ಬರುತ್ತದೆ. ಇಲ್ಲವಾದರೆ ಹಣ ಪಡೆಯಲು ಸಾದ್ಯವಾಗುವುದಿಲ್ಲ.
ಎಟಿಎಮ್ ನಲ್ಲಿ ವ್ಯವಹಾರ ಮಾಡಲು ಗ್ರಾಹಕರ ಹಿತ ರಕ್ಷಣೆಗಾಗಿ ಹೆಚ್ಚಿನ ಭದ್ರತೆಯನ್ನು ಹಾಗೂ ಸುರಕ್ಷತೆಯನ್ನು ಕಲ್ಪಿಸಲು ಎಸ್ ಬಿ ಐ ಸೆಪ್ಟೆಂಬರ್ 18 ರಿಂದ ಭಾರಿ ರಹಸ್ಯ ಸಂಖ್ಯೆ( ಒಟಿಪಿ) ಯನ್ನು ಒಳಪಡಿಸುವ ಸೌಲಭ್ಯವನ್ನು ಕಡ್ಡಾಯಗೊಳಿಸಿದೆ.
ಇತ್ತೀಚೆಗೆ ಎಟಿಎಮ್ ಮೂಲಕ ಹಣವನ್ನು ಎಗರಿಸುವವರ ಸಂಖ್ಯೆ ಬಹಳವಾಗಿ ಕಂಡು ಬಂದಿದ್ದು ಅನೇಕರು ಈಗಾಗಲೇ ವಂಚನೆಯ ಜಾಲಕ್ಕೆ ಸಿಲುಕಿ ಕಷ್ಟಪಟ್ಟು ಕೂಡಿಟ್ಟ ಹಣವನ್ನು ಕಳೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಈ ಒಂದು ಹೊಸ ನಿಯಮದಿಂದ ಜನರ ಖಾತೆಗೆ ಕನ್ನ ಹಾಕುವ ಪ್ರವೃತ್ತಿಗೆ ಕಡಿವಾಣ ಹಾಕಬಹುದು.
ಈವರೆಗೆ ಎಸ್ ಬಿ ಐ ನ ಎಲ್ಲಾ ಎಟಿಎಮ್ ಗಳಲ್ಲಿ ರಾತ್ರಿ 8 ಗಂಟೆಯಿಂದ ಬೆಳಗ್ಗೆ 8 ಗಂಟೆವರೆಗೆ ಕಾರ್ಯ ನಿರ್ವಹಿಸುತ್ತು. ಆದರೆ ಇನ್ನು ಮುಂದೆ ದಿನದ 24 ಗಂಟೆಗಳೂ ಕಾರ್ಯಪ್ರವೃತ್ತವಾಗುತ್ತವೆ. ಈ ಬಗ್ಗೆ ಮಂಗಳವಾರ ಎಸ್ ಬಿ ಐ ಟ್ವೀಟ್ ಮಾಡಿದೆ. ಈ ಕ್ರಮದಿಂದ ಅನಧಿಕೃತವಾಗಿ ಹಣ ದೋಚುವ ಕಾರ್ಡ್ ಕ್ಲೋನಿಂಗ್, ಕಾರ್ಡ್ ಸ್ಕಿಮ್ಮಿಂಗ್ ನಂತಹ ವಂಚನೆಗಳಿಗೆ ಕಡಿವಾಣ ಹಾಕಬಹುದಾಗಿದೆ. ಹಾಗಾಗಿ ಎಸ್ ಬಿ ಐ ಖಾತೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್ ಗಳಿಗೆ ಕೂಡಲೆ ನೋಂದಾಯಿಸಿಕೊಳ್ಳಬೇಕು ಎಂದು ಎಸ್ ಬಿ ಐ ತಿಳಿಸಿದೆ.