Visit Channel

ಹಥ್ರಾಸ್ ಪ್ರಕರಣದಲ್ಲಿ ಬೆಚ್ಚಿ ಬೀಳುವ ಸತ್ಯ ಬಯಲು :

hathras

ಲಕ್ನೋ: ಉತ್ತರ ಪ್ರದೇಶದ ಹಥ್ರಾಸ್ ನಲ್ಲಿ 19 ವರ್ಷದ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಪ್ರಕರಣದಲ್ಲಿ ಇದೀಗ ಇನ್ನೊಂದು ಬೆಚ್ಚಿಬೀಳಿಸುವ ಸತ್ಯ ಇ ಡಿ ಅಧಿಕಾರಿಗಳಿಂದ ಬಯಲಾಗಿದೆ. ಕೆಲವು ರಾಜಕೀಯ ಪಕ್ಷಗಳು ಈ ಪ್ರಕರಣದಲ್ಲಿ ಲಾಭ ಪಡೆಯಲು ಹೊರಟಿವೆ. ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟಿರುವ ಕುಟುಂಕ್ಕೆ ನ್ಯಾಯ ಕೊಡುವ ಹಾಗೂ ಸಹಾಯ ಮಾಡುವ ನೆಪದಲ್ಲಿ,  ಕೋಮು ಸಂಘರ್ಷವನ್ನು ಹುಟ್ಟುಹಾಕಲು  ಹಣದ ಹೊಳೆಯೇ ಹರಿದು ಬಂದಿದೆ. ಉತ್ತರ ಪ್ರದೇಶಕ್ಕೆ 100 ಕೋಟಿ ಹವಾಲಾ ಹಣ ಬಂದಿರುವ ಬಗ್ಗೆ ಇಡಿ ಅಧಿಕಾರಿಗಳಿಗೆ ಸಾಕ್ಷ್ಯ ಸಿಕ್ಕಿದೆ. ಈ ಬಗ್ಗೆ ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಧಿಕಾರಿಗಳು ಹೇಳುವಂತೆ ಈ ಪೈಕಿ 50 ಕೋಟಿ ರೂ ಮಾರಿಷಸ್ ದೇಶದಿಂದ ಬಂದಿದೆ. ಸಿ ಎ ಎ ಪ್ರತಿ ಭಟನೆ ಮಾಡುತ್ತಿದ್ದ ವೇಳೆ ಪಿಎಫ್ಐ ಸಂಘಟನೆಗೆ ವಿದೇಶದಿಂದ 120 ಕೋಟಿ ರೂ ಬಂದಿರುವುದು ಬೆಳಕಿಗೆ ಬಂದಿದೆ. ಇಡಿ ಅಧಿಕಾರಿಗಳು ಇದರ ಬಗ್ಗೆ ತನಿಖೆ ಮಾಡಿದಾಗ “, ಜಸ್ಟಿಸ್ ಪಾರ್ ಹಾಥರಸ್ “ಎಂಬ ಹೆಸರಲ್ಲಿ ವೆಬ್ ಸೈಟ್ ರಚಿಸಲಾಗಿದ್ದು,  ಈ ವೆಬ್ ಸೈಟ್ ಗೆ ವಿದೇಶದಿಂದ ಕೋಟ್ಯಾಂತರ ರೂ ಹಣ ಹರಿದು ಬಂದಿದೆ ಎಂಬ ಸತ್ಯ ಬಯಲಾಗಿದೆ.

ಈ ವೆಬ್ ಸೈಟನ್ನು ವಿದೇಶೀ ಧನಸಹಾಯಕ್ಕಾಗಿ ರೂಪಿಸಿರುವ ಶಂಕೆ ವ್ಯಕ್ತವಾಗಿದೆ. ವೆಬ್ ಸೈಟ್ ನ ನಿರ್ವಾಹಕರ ವಿರುದ್ಧ ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ. ಹಣವನ್ನು ವರ್ಗಾವಣೆ ಮಾಡಿದ ಖಾತೆಗಳನ್ನು ಸ್ಕ್ಯಾನ್ ಮಾಡಲಾಗುತ್ತದೆ, ಹಾಗೂ ವೆಬ್ ಸೈಟ್ ನ್ನು ಈಗಾಗಲೇ ಕಪ್ಪು ಪಟ್ಟಿಗೆ ಸೇರಿಸಲಾಗಿದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.