ಬಾಕ್ಸ್ ಆಫೀಸ್ ನಲ್ಲಿ ಅಲ್ ಚಲ್ ಸೃಟ್ಠಿಸಿದ್ದ ರಿಷಬ್ ಶೆಟ್ಟಿ ಕೈಯಲ್ಲಿ ಸಾಲು ಸಾಲು ಸಿನಿಮಾಗಳೀರೋದು ಗೊತ್ತಿರೋ ಸಂಗತಿ ಸದ್ಯ ರಿಷಬ್ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ .
ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರೋ ಕಾಮಿಡಿ ಎಂಟರ್ಟೈನರ್ ಚಿತ್ರ ಇದಾಗಿದ್ದು ಸಿನಿಮಾ ಶುಟಿಂಗ್ ಗೆ ರೆಡಿಯಾಗಿ ನಿಂತಿದೆ ..ಕೋವಿಡ್ ಬಿಕ್ಕಟ್ಟಿನ ನಡುವೆಯೂ ಚಿತ್ರ ತಂಡ ಸಿಂಪಲ್ ಆಗಿ ಶುಕ್ರವಾರ ಚಿತ್ರದ ಮೂಹರ್ತವನ್ನು ಮುಗಿಸಿದೆ.
ಈ ಸಂದರ್ಭದಲ್ಲಿ ಪ್ರೊಡಕ್ಷನ್ ವಿವರಗಳು ಸಹ ಬಹಿರಂಗಪಡಿಸಲಾಗಿದ್ದು ಚಿತ್ರಕ್ಕೆ ಎನ್ ಸಂದೇಶ್ ಬಂಡವಾಳ ಹೂಡಿದ್ದು ಸಂಪೂರ್ಣ ಯೋಜನೆಯನ್ನು ರಿಷಬ್ ಶೆಟ್ಟಿ ಫಿಲ್ಮ್ಸ್ ನಿರ್ವಹಿಸಲಿದೆ. ಮುಖ್ಯ ಭೂಮಿಕೆಯಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಳ್ಳಲಿದ್ದು ; ಪ್ರತಿ ಸಿನಿಮಾದಂತೆ ಈ ಸಿನಿಮಾದಲ್ಲೂ ಪ್ರಮೋದ್ ಶೆಟ್ಟಿ ಸಹ ಮುಖ್ಯ ಪಾತ್ರಧಾರಿಯಾಗಿ ಸಿನಿಮಾದಲ್ಲಿ ಮಿಂಚಲಿದ್ದಾರೆ .
ಮತ್ತೆ ಸ್ಯಾಂಡಲ್ವುಡ್ ನಲ್ಲಿ ಚರಿತ್ರೆ ಸೃಷ್ಟಿಸಲಿರೋ ರಿಷಬ್ ಟೀಂ ಬ ಚಿತ್ರೀಕರಣಕ್ಕೆ ಒಪ್ಪಿಗೆ ಸಿಗಲು ಕಾಯ್ತಾ ಇದ್ದಾರೆ .ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದ್ದು; ಹೇಸರಾಂತ ಕಲಾವಿದರು ಹಾಗೂ ಗುಣಮಟ್ಟದ ತಂತ್ರಜ್ಞರು ಈ ಸಿನಿಮಾ ತಂಡದಲ್ಲಿರೋದು ಚಿತ್ರದ ನಿರೀಕ್ಷೆ ಹೆಚ್ಚಿಸಿದೆ.