vijaya times advertisements
Visit Channel

ಹರಿವಂಶ್ ನಾರಾಯಣ್ ಸಿಂಗ್: ಧರಣಿ ನಿರತ ಸದಸ್ಯರ ಕುಶಲೋಪರಿ:

assembly

ನವದೆಹಲಿ: ರಾಜ್ಯಸಭೆಯಲ್ಲಿ ಕಲಾಪಗಳು ನಡೆಯುತ್ತಿದ್ದ ವೇಳೆ 8 ಜನ ಸಂಸತ್ ಸದಸ್ಯರು  ಕಲಾಪದ ವೇಳೆ  ದುರ್ವರ್ತನೆ ತೋರಿದ್ದಾರೆಂದು ಒಂದು ವಾರದ ಅಮಾನತು ಶಿಕ್ಷೆಗೆ ಗುರಿಯಾಗಿದ್ದರು. ಈ ಶಿಕ್ಷೆಯನ್ನು ವಿರೋಧಿಸಿ ಅಮಾನತುಗೊಂಡ 8 ಜನ  ಸದಸ್ಯರು ಸಂಸತ್ ಭವನದ ಆವರಣದ ಗಾಂಧಿ ಪ್ರತಿಮೆ ಬಳಿ ಕುಳಿತು ರಾತ್ರಿ ಇಡೀ  ಧರಣಿ ನಡೆಸಿದರು.

ರೈತರು ಮತ್ತು ಪ್ರತಿಪಕ್ಷಗಳ ತೀವ್ರ ಪ್ರತಿಭಟನೆಯ ನಡುವೆ ಸಂಸತ್ತಿನಲ್ಲಿ ಹೊಸದಾಗಿ ಜಾರಿಗೊಂಡ ಕೃಷಿ ಮಸೂದೆಗಳ ಬಗ್ಗೆ ಅಸಮಾಧಾನಗೊಂಡ ರಾಜ್ಯಸಭಾ ಸಂಸದರು ಅದರ ವಿರುದ್ದ ಸಂಸದರ ಗುಂಪು ಪ್ರತಿಭಟನೆ ನಡೆಸುತ್ತಿತ್ತು.  ಹಲವು ಬಾರಿ ಎಚ್ಚರಿಸಿದರೂ  ರಾಜ್ಯ ಸಭೆಯೊಳಗೆ ಸಂಸದರು ಪ್ರತಿಭಟನಾ ನಿರತರಾಗಿದ್ದಕ್ಕೆ 8 ಸದಸ್ಯರನ್ನು  ಉಳಿದ ಅಧಿವೇಶನಕ್ಕೆ ಅಮಾನತುಗೊಳಿಸಲಾಗಿತ್ತು.

22 ಸೆ 2020 ಬೆಳಿಗ್ಗೆ ಹರಿವಂಶ್  ನಾರಾಯಣ ಸಿಂಗ್ ಅವರು ಪ್ರತಿಭಟನಾಕಾರರಿಗೆ ಚಹಾ, ಬೆಳಗಿನ ಉಪಾಹಾರವನ್ನು ನೀಡಿ ಕುಶಲೋಪರಿ ವಿಚಾರಿಸಿದರು. ಇದಕ್ಕೆ ಪ್ರತಿಯಾಗಿ ಸದಸ್ಯರು ಇದು ಮಾದ್ಯಮದ ಮುಂದೆ ನಾಟಕ ಮಾಡಿದ್ದೆಂದು  ಹೇಳಿ ತಮ್ಮ ಕೋಪವನ್ನು ಹೊರಹಾಕಿದ್ದಾರೆ. ಸದಸ್ಯರ ದುರ್ವರ್ತನೆ  ವಿಚಾರವಾಗಿ ರಾಜ್ಯಸಭೆ ಚೇರ್ ಮಾನ್ ಎಂ ವೆಂಕಯ್ಯ ನಾಯ್ಡು ಅವರಿಗೆ  ಪತ್ರವನ್ನು ಹರಿವಂಶ ನಾರಾಯಣಸಿಂಗ್ ಅವರು ಬರೆದಿದ್ದಾರೆ.

ಅದರಲ್ಲಿ ಅವರು ಸೆಪ್ಟೆಂಬರ್ 20 ರಂದು ರಾಜ್ಯಸಭಾ ಪೀಠದಲ್ಲಿದ್ದಾಗ ಸದಸ್ಯರು ತೋರಿದ ದುರ್ವರ್ತನೆಯಿಂದಾಗಿ ಪೀಠದ ಘನತೆಗೆ ಧಕ್ಕೆಯಾಗಿದೆ. ಇದರಿಂದ ನನಗೆ ಅವಮಾನವಾಗುವಂತೆ ನಡೆದುಕೊಂಡ ಸದಸ್ಯರ ವರ್ತನೆ ಸರಿಯಾದುದಲ್ಲ. ಸ್ವ ಶುದ್ಧೀಕರಣಕ್ಕಾಗಿ ತಾನು ನಾಳೆಯವರೆಗೆ ನಿರಶನ ಕೈಗೊಳ್ಳುವುದಾಗಿ ವಿವರಿಸಿದ್ದಾರೆ.

Latest News

ರಾಜ್ಯ

ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದಿದ್ದಕ್ಕಾಗಿ ಪ್ರಾಧ್ಯಾಪಕ ಅಮಾನತು!

ನಾವು ಸ್ವಯಂಪ್ರೇರಿತ ಕ್ರಮವನ್ನು ತೆಗೆದುಕೊಂಡಿದ್ದೇವೆ. ವಾಸ್ತವವಾಗಿ ಯಾರೂ ಇಲ್ಲದ ಕಾರಣ ವಿದ್ಯಾರ್ಥಿಯು ನಿಜವಾಗಿಯೂ ಆತಂಕಕ್ಕೊಳಗಾಗಿದ್ದಾನೆ.

ರಾಜಕೀಯ

ನೀವು ಬಡವರು ಎಂದು ಹೇಳಿಕೊಳ್ಳುತ್ತೀರಿ, ಆದ್ರೆ ನಾನು ಅಸ್ಪೃಶ್ಯರಲ್ಲಿ ಒಬ್ಬ : ಮಲ್ಲಿಕಾರ್ಜುನ ಖರ್ಗೆ

ನಾನು ಅಸ್ಪೃಶ್ಯರಲ್ಲಿ ಒಬ್ಬ. ಜನರು ನಿಮ್ಮ ಚಹಾವನ್ನು ಕುಡಿಯುತ್ತಿದ್ದರು,  ಆದರೆ ಯಾರೂ ನನ್ನ ಚಹಾವನ್ನು ಸೇವಿಸಲಿಲ್ಲ ಎಂದು ಖರ್ಗೆ ಅವರು ಪರೋಕ್ಷವಾಗಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.  

ರಾಜಕೀಯ

ಒಕ್ಕಲಿಗರಿಗೆ 4%-12% ಮೀಸಲಾತಿ ; ಇದು ಉತ್ತಮ ಬೇಡಿಕೆಯಾಗಿದೆ : ನಟ ಚೇತನ್

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕದ ಒಕ್ಕಲಿಗ ಲಾಬಿಗಳು ಒಕ್ಕಲಿಗರಿಗೆ 4% – 12% ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ.