ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಚಿತ್ರರಂಗಕ್ಕೆ ಹಾಸ್ಯ ನಟನಾಗಿ ಪರಿಚಿತರಾದವರು ಶಿವರಾಜ್ ಕೆ.ಆರ್.ಪೇಟೆ ನಂತರ ಹಿಂದಿರುಗಿ ನೋಡಿದ್ದೇ ಇಲ್ಲ..ಚಿತ್ರರಂಗದ ದಿಗ್ಗಜರ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡು ಬಹು ಬೇಡಿಕೆಯ ನಟನಾದರು. ಸದ್ಯ ಹಾಸ್ಯ ನಟನೆಯಿಂದ ನಾಯಕನಾಗಿ ಭಡ್ತಿ ಹೊಂದುತ್ತಿರುವ ಇವರು, ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ ‘ನಾನು ಮತ್ತು ಗುಂಡ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಸಂಯುಕ್ತಾ ಬೆಳವಾಡಿ ನಾಯಕಿಯಾಗಿ ಅಭಿನಯಿಸ್ತಿರುವ ಈ ಚಿತ್ರದಲ್ಲಿ ಮನುಷ್ಯ ಮತ್ತು ನಾಯಿಯ ಸಂಬಂಧವನ್ನು ಚಿತ್ರಿಸಲಾಗಿದೆಯಂತೆ. ಒಟ್ನಲ್ಲಿ ಈ ಚಿತ್ರ ಶಿವರಾಜ್ ಕೆ.ಆರ್.ಪೇಟೆಯವರ ಸಿನಿ ಬದುಕನ್ನೇ ಬದಲಾಯಿಸುತ್ತಾ..? ಈ ಮೂಲಕ ಮುಂಬರುವ ದಿನಗಳಲ್ಲಿ ಶಿವರಾಜ್ ಕೆ.ಆರ್.ಪೇಟೆ ನಾಯಕನಾಗಿ ಲೇಬಲ್ ಪಡೆದುಕೊಳ್ತಾರಾ..ಎಂಬುದನ್ನು ಕಾದುನೋಡಬೇಕಿದೆ.