ಹುಚ್ಚ ವೆಂಕಟ್ ಹುಚ್ಚಾಟ ಅತಿಯಾಗಿದೆ..ನಿನ್ನೆ ಸಂಜೆಯಷ್ಟೇ ಮಡಿಕೇರಿಯ ಸಾರ್ವಜನಿಕ ಪ್ರದೇಶದಲ್ಲಿ ಗಲಭೆ ಸೃಷ್ಟಿಸಿ, ಪಕ್ಕದಲ್ಲೇ ನಿಂತಿದ್ದ ಕಾರಿನ ಗಾಜು ಪುಡಿಮಾಡಿ ಕಿರಿಕ್ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಈ ಹುಚ್ಚಾಟಕ್ಕೆ ಸಾರ್ವಜನಿಕರಿಂದಲೂ ಹಿಗ್ಗಾಮುಗ್ಗಾ ಥಳಿಸಿಕೊಂಡಿದ್ದರು ಹುಚ್ಚ ವೆಂಕಟ್.
ಈ ಕುರಿತು ನಟ ಭೂವನ್ ಪ್ರತಿಕ್ರಿಯಿಸಿದ್ದು, ಹುಚ್ಚ ವೆಂಕಟ್ ಕೆಟ್ಟವರಲ್ಲ. ಅವರಿಗೆ ಚಿಕಿತ್ಸೆಯ ಅವಶ್ಯಕತೆಯಿದೆ. ಮಾನಸಿಕ ತೊಂದರೆಯಿರುವ ಅವರನ್ನು ಕಂಡಲ್ಲಿ ಲೇವಡಿ ಮಾಡದಿರಿ. ಅವಾಚ್ಯ ಶಬ್ದಗಳಿಂದ ನಿಂಧಿಸಿ, ಥಳಿಸುವುದು ಮಾಡುವುದು ಸರಿಯಲ್ಲ.. ಇದು ಕರ್ನಾಟಕದ ಜನತೆಯ ಬಳಿ ನನ್ನ ವಿನಂತಿ ಎಂಬುದಾಗಿ ನಟ ಭುವನ್ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.