ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ದೇಶದೆಲ್ಲೆಡೆ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ಈ ನಡುವೆ ಕೊರೊನಾದಿಂದ ಪಾರಾಗಲು ಸುರಕ್ಷತೆಗೆ ಬಳಸುವ ಮಾಸ್ಕ್, ಫೇಸ್ ಶೀಲ್ಢ್ ದಂಧೆ ಕೂಡ ಎಗ್ಗಿಲ್ಲದೆ ನಡೆಯುತ್ತಿದೆ.
ಸುರಕ್ಷಿತವಲ್ಲದ ಮಾಸ್ಕ್ ಗಳು ಮೆಡಿಕಲ್ ಶಾಪ್ ಮಾತ್ರವಲ್ಲದೇ ರಸ್ತೆ ಬದಿಗಳಲ್ಲೂ ಮಾರಾಟವಾಗುತ್ತಿವೆ. ಹೀಗಿರುವಾಗ ಹೈದ್ರಾಬಾದ್ನಲ್ಲಿ ವಿಭಿನ್ನವಾದ ಹೊಸ ಫೇಸ್ ಶೀಲ್ಡ್ ಮಾರುಕಟ್ಟೆಗೆ ಬಂದಿದ್ದು, ಈ ಫೇಸ್ ಶೀಲ್ಡ್ ಮಾಸ್ಸ್ಗಳಿಗೆ ಈಗ ಭಾರಿ ಬೇಡಿಕೆ ಬಂದಿದೆ.
ಮೊದಲ ಬಾರಿ ದೆಹಲಿಯಲ್ಲಿ ಈ ಶೀಲ್ಡ್ ಮಾಸ್ಕ್ ಪ್ರಯೋಗಿಸಲಾಗಿದ್ದು, ಇದಕ್ಕೆ ದೆಹಲಿ ಲ್ಯಾಬೋರೇಟರಿಯಿಂದಲೂ ಅನುಮತಿ ಸಹ ಸಿಕ್ಕಿದೆ. ಇದೇ ಸಂದರ್ಭದಲ್ಲಿ ಹೈದ್ರಾಬಾದ್ನ ಕವಚ್ ಎಂಬ ಫೇಸ್ ಶೀಲ್ಡ್ ತಯಾರಿಸಲಾಗಿದೆ. ಅದನ್ನು ಹಾಕಿಕೊಂಡರೆ ಸಂಪೂರ್ಣವಾಗಿ ಮೂಗು, ಬಾಯಿ ಹಾಗೂ ಮುಖ ಮುಚ್ಚಿಕೊಳ್ಳುತ್ತದೆ. ಉಸಿರಾಟಕ್ಕೆ ಯಾವುದೇ ಸಮಸ್ಯೆ ಇರೋದಿಲ್ಲ. ಅದಕ್ಕೆ ಫಿಲ್ಟರ್ ಸ್ಟಿಕ್ಕರ್ ಸಹ ಹಾಕಿರುತ್ತಾರೆ. ಹೈದ್ರಾಬಾದ್ನಲ್ಲಿರುವ ಕಿದ್ಕಿ ಶಾಫಿ ಫರ್ನಿಚರಿಂಗ್ ಎಂಬ ಕಂಪನಿ ಈ ಫೇಸ್ ಶೀಲ್ಡ್ ಹಂಚಿಕೆ ಮಾಡುತ್ತಿದೆ.
ಸಂತೋಷ್ ಎಂಬುವವರು ಈ ಫೇಸ್ ಶೀಲ್ಡ್ ಬಳಸುವ ವಿಧಾನವನ್ನು ತಿಳಿಸಿಕೊಟ್ಟಿದ್ದಾರೆ. ಈ ಫೇಸ್ ಶೀಲ್ಡ್ ಮಾಸ್ಕ್ ಬಳಸಿದರೆ ಯಾರ ಹತ್ತಿರ ನಿಂತು ಮಾತನಾಡಿಸಿದರೂ ಸಮಸ್ಯೆ ಇಲ್ಲ. ಆಗಾಗ ಫೇಸ್ ಶೀಲ್ಡ್ ಮಾಸ್ಕ್ ಅನ್ನ ಸ್ಯಾನಿಟೈಸ್ ಮಾಡಿಕೊಳ್ಳಲೂಬಹುದು. ತಲೆ ಪೂರ್ತಿ ಮುಚ್ಚಿಕೊಳ್ಳುವುದರಿಂದ ಯಾವುದೇ ಸಮಸ್ಯೆ ಇರೋದಿಲ್ಲ. ಬೇರೆಯವರ ಜೊತೆ ಮಾತನಾಡಬಹದು, ವಾಹನದಲ್ಲಿ ಸಂಚರಿಸಲೂಬಹುದು. ಬಹಳ ಸಲಭ ವಿಧಾನವನ್ನು ಅವಿಷ್ಕರಿಸಲಾಗಿದ್ದು, ಒಂದೇ ದಿನಕ್ಕೆ ಹೈದ್ರಾಬಾದ್ನಲ್ಲಿ 500ಕ್ಕೂ ಹೆಚ್ಚು ಮಾಸ್ಕ್ಗಳು ಮಾರಾಟವಾಗಿವೆ.
ಫೇಸ್ ಶೀಲ್ಡ್ ನ ಒಂದರ ಬೆಲೆ 500 ರೂ. ಇದ್ದು, ಇದನ್ನು ಉಪಯೋಗ ಮಾಡುವುದರಿಂದ ವೈರಸ್ ಹತ್ತಿರಕ್ಕೆ ಸುಳಿಯುವುದಿಲ್ಲ. ಆಸ್ಪತ್ರೆಗಳಲ್ಲಿ ಬೇರೆ ಮಾಸ್ಕ್ ಬಳಸುವುದಕ್ಕಿಂತ, ಇದನ್ನು ಬಳಸಿದರೆ ಇನ್ನೂ ಹೆಚ್ಚು ಸುರಕ್ಷಿತವಾಗಿರಬಹುದು.